VIVO X200 Series Launched: ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ವಿವೋ ಇಂದು ತನ್ನ ಬಹು ನಿರೀಕ್ಷಿತ ಸ್ಮಾರ್ಟ್ಫೋನ್ ಎಕ್ಸ್ 200 ಸೀರಿಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸೀರಿಸ್ನಲ್ಲಿ, ಕಂಪನಿಯು ವಿವೋ ಎಕ್ಸ್200 ಮತ್ತು ವಿವೋ ಎಕ್ಸ್200 ಪ್ರೊ ಅನ್ನು ಒಳಗೊಂಡಿರುವ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ನಲ್ಲಿ ಬಳಕೆದಾರರು 6000mAh ವರೆಗಿನ ಪವರ್ಫುಲ್ ಬ್ಯಾಟರಿ ಪಡೆಯಲಿದ್ದಾರೆ. ಈ ಫೋನ್‌ನಲ್ಲಿ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಕೂಡ ಲಭ್ಯವಿದೆ. ಈ ಸೀರಿಸ್ ಬಗೆಗಿನ ಇತರ ಮಾಹಿತಿ ಇಲ್ಲಿದೆ..
ವಿವೋ ಎಕ್ಸ್200 ವಿಶೇಷತೆಗಳು: ಈ ಸ್ಮಾರ್ಟ್ಫೋನ್ 6.67 ಇಂಚಿನ ಕ್ವಾಡ್-ಕರ್ವ್ಡ್ OLED LTPS ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 120 Hz ನ ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್ಫೋನ್ನಲ್ಲಿ ಕಂಪನಿಯು ಪವರಫುಲ್ 5800mAh ಬ್ಯಾಟರಿ ಒದಗಿಸಿದೆ. ಈ ಬ್ಯಾಟರಿ 90W ಸ್ಪೀಡ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡುವುದಾದರೆ, ಇದು ಸೋನಿ IMX921 ಸೆನ್ಸಾರ್ ಜೊತೆ 50MP ರಿಯರ್ ಕ್ಯಾಮೆರಾ ಹೊಂದಿದೆ. ಇದರೊಂದಿಗೆ, ಫೋನ್ 50MP IMX882 ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಸಹ ಹೊಂದಿದೆ.
ವಿವೋ ಎಕ್ಸ್200 ಪ್ರೊ ದಲ್ಲಿರುವ ಹೊಸತನವೇನು?: ಫೋನ್‌ನ ಪ್ರೊ ಮಾದರಿಯು 6.67 ಇಂಚಿನ ಕ್ವಾಡ್-ಕರ್ವ್ಡ್ OLED LTPS ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 120Hz ವರೆಗೆ ವೇರಿಯಬಲ್ ರಿಫ್ರೆಶ್ ರೇಟ್ ಮತ್ತು 1.63mm ನ ಅಲ್ಟ್ರಾ-ಸ್ಲಿಮ್ ಬೆಜೆಲ್‌ಗಳನ್ನು ಸಪೋರ್ಟ್ ಮಾಡುತ್ತದೆ. ಈ ಮಾದರಿಯು 200MP Zeiss APO ಟೆಲಿಫೋಟೋ ಕ್ಯಾಮೆರಾ ಹೊಂದಿದೆ., ಇದು ಉತ್ತಮ ಕ್ಯಾಮೆರಾ ಅನುಭವವನ್ನು ನಿಮಗೆ ನೀಡುತ್ತದೆ. ಇದು Vivo V3+ ಇಮೇಜಿಂಗ್ ಚಿಪ್‌ನೊಂದಿಗೆ ಬರುತ್ತದೆ ಮತ್ತು 4K HDR ಸಿನಿಮಾ ಪೋರ್ಟ್ರೇಟ್ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.
ಪ್ರೊ ಮಾದರಿಯಲ್ಲಿ ಪವರ್ಫುಲ್ 6000mAh ಬ್ಯಾಟರಿ ಒದಗಿಸಲಾಗಿದೆ. ಈ ಬ್ಯಾಟರಿ 90W ಸ್ಪೀಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ, ಎರಡೂ ಮಾದರಿಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಇದು 3nm ಪ್ರೊಸೆಸರ್ ತಂತ್ರಜ್ಞಾನವನ್ನು ಆಧರಿಸಿದೆ.
ಬೆಲೆ ಎಷ್ಟು?: ವಿವೋ ಎಕ್ಸ್200ನ 12GB + 256GB ಸ್ಟೋರೇಜ್ ರೂಪಾಂತರದ ಬೆಲೆ 65,999 ರೂಗಳಾಗಿದ್ದು, ವಿವೋ ಎಕ್ಸ್200 ಪ್ರೊನ 16GB + 512GB ಸ್ಟೋರೇಜ್ ರೂಪಾಂತರದ ಬೆಲೆಯನ್ನು 94,999 ರೂಗಳಷ್ಟು ನಿಗದಿ ಮಾಡಲಾಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮಾರಾಟವು 19 ಡಿಸೆಂಬರ್ 2024 ರಿಂದ ಪ್ರಾರಂಭವಾಗಲಿದೆ. ನೀವು ಈ ಫೋನ್ಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇ-ಕಾಮರ್ಸ್ ಸೈಟ್ ಅಮೆಜಾನ್ ವೆಬ್ಸೈಟ್ನಿಂದ ಖರೀದಿಸಬಹುದು. ಈ ಫೋನ್ ಅನ್ನು ನೀವು ಎಚ್‌ಡಿಎಫ್‌ಸಿ ಕಾರ್ಡ್ ಮೂಲಕ ಖರೀದಿಸಿದ್ರೆ ಶೇಕಡಾ 10 ರಷ್ಟು ರಿಯಾಯಿತಿ ದೊರೆಯಲಿದೆ.
ಓದಿ: ಕಾರು ಖರೀದಿದಾರರಿಗೆ ಗುಡ್ ನ್ಯೂಸ್: ಮಹೀಂದ್ರಾ ಥಾರ್ ಮೇಲೆ 3 ಲಕ್ಷಕ್ಕೂ ಹೆಚ್ಚು ಡಿಸ್ಕೌಂಟ್!!