ETV Bharat / entertainment

'ಪೆನ್​ಡ್ರೈವ್'​ನಲ್ಲಿ ಮಾಲಾಶ್ರೀ, ತನಿಷಾ ಕುಪ್ಪಂಡ: ಸ್ಯಾಂಡಲ್​ವುಡ್​ನೊಂದಿಗೆ 30 ವರ್ಷದ ನಂಟಿರುವ ಸೆಬಾಸ್ಟಿನ್ ಡೈರೆಕ್ಷನ್​

ಕನಸಿನ ರಾಣಿ ಮಾಲಾಶ್ರೀ ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯದ 'ಪೆನ್​ಡ್ರೈವ್'​ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​​ ಕೆಲಸ ಸಾಗಿದೆ.

pen drive shooting completes
'ಪೆನ್​ಡ್ರೈವ್' ಶೂಟಿಂಗ್​ನಲ್ಲಿ ಮಾಲಾಶ್ರೀ, ತನಿಷಾ ಕುಪ್ಪಂಡ (Photo: ETV Bharat)
author img

By ETV Bharat Entertainment Team

Published : 2 hours ago

'ಪೆನ್ ಡ್ರೈವ್'. ಇದು ಕನ್ನಡ ಚಿತ್ರರಂಗದೊಂದಿಗೆ 30 ವರ್ಷಗಳ ನಂಟಿರುವ ಸೆಬಾಸ್ಟಿನ್ ಡೇವಿಡ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ವಿಭಿನ್ನ ಕಥಾಹಂದರ‌ದ ಚಿತ್ರ. ಮುಖ್ಯಪಾತ್ರದಲ್ಲಿ ಚಂದನವನದ ಕನಸಿನ ರಾಣಿ ಮಾಲಾಶ್ರೀ ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ಅಭಿನಯಿಸುತ್ತಿದ್ದಾರೆ.

ಪೋಸ್ಟ್​ ಪ್ರೊಡಕ್ಷನ್​​ ಕೆಲಸದಲ್ಲಿ ಪೆನ್​ಡ್ರೈವ್​​: ಆರ್.ಹೆಚ್.ಎಂಟರ್​ಪ್ರೈಸಸ್ ಲಾಂಛನದಲ್ಲಿ ಎನ್.ಹನುಮಂತರಾಜು ಹಾಗೂ ಲಯನ್ ಎಸ್.ವೆಂಕಟೇಶ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ‌‌ ಹಾಗೂ ಡಬ್ಬಿಂಗ್ ಪೂರ್ಣಗೊಂಡಿದೆ. ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ.

ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ,‌ ನಿರ್ದೇಶಕರಾಗಿ ಹಾಗೂ ಸ್ಟುಡಿಯೋ ಮಾಲೀಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಬಾಸ್ಟಿನ್ ಡೇವಿಡ್ ಈವರೆಗೂ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಪ್ರಸ್ತುತ 'ಪೆನ್​ಡ್ರೈವ್' ನಿರ್ದೇಶಿಸುತ್ತಿದ್ದಾರೆ. ಚಾಮುಂಡಿ, ದುರ್ಗಿ ಸೇರಿದಂತೆ ಮೊದಲಾದ ಆ್ಯಕ್ಷನ್ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಆ್ಯಕ್ಷನ್ ಕ್ವೀನ್ ಎಂದೇ ಜನಪ್ರಿಯರಾಗಿರುವ ಮಾಲಾಶ್ರೀ ಹಾಗೂ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ನಂತರ 'ಬೆಂಕಿ' ಅಂತಲೇ ಜನಪ್ರಿಯರಾಗಿರುವ ತನಿಷಾ ಕುಪ್ಪಂಡ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದಾರೆ. ಇಬ್ಬರು ನಟಿಯರ ಸಮಾಗಮದಲ್ಲಿ ಮೂಡಿಬರುತ್ತಿರುವ ಚಿತ್ರದ ಬಗ್ಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಇದೆ. ಜೊತೆಗೆ ‌'ಬಿಗ್ ಬಾಸ್' ಖ್ಯಾತಿಯ ಕಿಶನ್ ಕೂಡ ಅಭಿನಯಿಸಿದ್ದಾರೆ.

pen drive shooting completes
ಶೂಟಿಂಗ್​ನಲ್ಲಿ ಮಾಲಾಶ್ರೀ (Photo: ETV Bharat)

ಇದನ್ನೂ ಓದಿ: ಹರೀಶ್ ರಾಜ್ ನಟಿಸಿ, ನಿರ್ದೇಶಿಸುತ್ತಿರುವ 'ವೆಂಕಟೇಶಾಯ ನಮಃ' ಮುಹೂರ್ತ

ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ತಾರಾಬಳಗದಲ್ಲಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ನಾಗೇಶ್ ಅವರು ಸಂಕಲನ ಕಾರ್ಯದೊಂದಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ಆರ್.ಹೆಚ್.ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎನ್.ಹನುಮಂತರಾಜು ಹಾಗೂ ಲಯನ್ ಎಸ್.ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: 'ನಾನು ಯಾವಾಗಲು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್': ಸೆಟ್ಟೇರಿತು ಅಯೋಗ್ಯ-2, ಅಶ್ವಿನಿ ಪುನೀತ್​​ರಾಜ್​ಕುಮಾರ್​ ಸಾಥ್

ಸಮಾಜದಲ್ಲಿ ಹೆಚ್ಚು ಸುದ್ದಿಯಾದ ಘಟನೆಗಳು, ಚಲನಚಿತ್ರವೊಂದರ ಶೀರ್ಷಿಕೆ ಆಗೋದು ಹೊಸ ವಿಚಾರವೇನಲ್ಲ. ಅದೇ ರೀತಿ 'ಪೆನ್ ಡ್ರೈವ್' ಶೀರ್ಷಿಕೆಯಡಿ ಸಿನಿಮಾವೊಂದು ನಿರ್ಮಾಣಗೊಂಡು ಬಿಡುಗಡೆಗೆ ಎದುರು ನೋಡುತ್ತಿದೆ. ಆದ್ರೆ ರಾಜ್ಯದಲ್ಲಿ ನಡೆದ ಪೆನ್ ಡ್ರೈವ್ ಪ್ರಕರಣಕ್ಕೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಕಥೆಗೆ ತಕ್ಕನಾಗಿ ಈ ಎಂಬ ಶಿರ್ಷಿಕೆ ಇಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.