ETV Bharat / technology

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ನಂಬರ್​ ಒನ್​ ಆಗಿ ಮೆರೆಯುತ್ತಿದೆ ಹೀರೋ: ಎನ್‌ಫೀಲ್ಡ್​​ಗೆ ಎಷ್ಟನೇ ಸ್ಥಾನ ಗೊತ್ತಾ? - TWO WHEELERS SALES REPORT

Two Wheelers Sales Report in November: ದೇಶದಲ್ಲಿ ದ್ವಿಚಕ್ರ ವಾಹನಗಳ ಖರೀದಿ ಬಲು ಜೋರಾಗಿದೆ. ನವೆಂಬರ್​ ತಿಂಗಳ ದ್ವಿಚಕ್ರ ವಾಹನಗಳ ಮಾರಾಟ ವರದಿ ಬಿಡುಗಡೆಗೊಂಡಿದ್ದು, ಹೀರೋ ಎಲ್ಲರ ಮೆಚ್ಚುಗೆಯ ಬೈಕ್​ ಆಗಿದೆ.

TWO WHEELERS SALES IN NOVEMBER  HIGHEST SALES IN NOVEMBER  NOVEMBER BIKES SALES REPORT
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ನಂಬರ್​ ಒನ್​ ಆಗಿ ಮೆರೆಯುತ್ತಿದೆ ಹೀರೋ (Hero MotoCorp)
author img

By ETV Bharat Tech Team

Published : Dec 12, 2024, 11:10 AM IST

Two Wheelers Sales Report in November: ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಲು ಜನರಲ್ಲಿ ವಿಭಿನ್ನವಾದ ಕ್ರೇಜ್ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದಿಂದ ಹಿಡಿದು ದುಬಾರಿವರೆಗೆ ಎಲ್ಲ ರೀತಿಯ ಮೋಟಾರ್ ಸೈಕಲ್‌ಗಳು ಲಭ್ಯವಿವೆ. ಕಳೆದ ತಿಂಗಳು ಅಂದರೆ ನವೆಂಬರ್​ನ ದ್ವಿಚಕ್ರ ವಾಹನ ಮಾರಾಟ ವರದಿ ಬಿಡುಗಡೆಯಾಗಿದೆ. ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಯಾವ ಕಂಪನಿಯು ಯಾವ ಸ್ಥಾನವನ್ನು ಕಬಳಿಸಿಕೊಂಡಿದೆ ಎಂಬ ಮಾಹಿತಿ ಇಲ್ಲಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ಹೀರೋ ಮೋಟೊಕಾರ್ಪ್ ಮಾರುಕಟ್ಟೆಯಲ್ಲಿ ಲೀಡರ್ ಆಗಿ ಹೊರಹೊಮ್ಮಿದೆ. FADA ವರದಿಯ ಪ್ರಕಾರ, ಕಳೆದ ತಿಂಗಳು ನವೆಂಬರ್ 2024 ರಲ್ಲಿ ಒಟ್ಟು 9,15,468 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮಾರಾಟ 8,04,498 ಯುನಿಟ್ ಆಗಿತ್ತು. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನವೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾಗಿರುವುದು ಕಂಡು ಬಂದಿದೆ.

ಹೀರೋ ಬೈಕ್​ ನಂತರ ಹೋಂಡಾ ಮೋಟಾರ್ ಸೈಕಲ್ ಎರಡನೇ ಸ್ಥಾನದಲ್ಲಿದೆ. ಜಪಾನಿನ ಆಟೋಮೊಬೈಲ್ ತಯಾರಕರು ನವೆಂಬರ್ 2024 ರಲ್ಲಿ ಒಟ್ಟು 6,54,564 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದು ಕಳೆದ ವರ್ಷ 5,15,128 ಯುನಿಟ್‌ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾರಾಟವಾಗಿದೆ. ಮೂರನೇ ಸ್ಥಾನವನ್ನು ಟಿವಿಎಸ್ ದ್ವಿಚಕ್ರ ವಾಹನದ ಪಾಲಾಗಿದೆ. ಕಂಪನಿಯು ಒಟ್ಟು 4,20,990 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ 2023 ರಲ್ಲಿ ಮಾರಾಟವಾದ 3,66,896 ಯುನಿಟ್‌ಗಳಿಗಿಂತ ಹೆಚ್ಚು.

ಐದನೇ ಸ್ಥಾನದಲ್ಲಿದೆ ರಾಯಲ್ ಎನ್‌ಫೀಲ್ಡ್: ಬಜಾಜ್ ಆಟೋ ನಾಲ್ಕನೇ ಸ್ಥಾನದಲ್ಲಿದೆ. ಬಜಾಜ್ ಕಳೆದ ತಿಂಗಳು ಒಟ್ಟು 3,04,221 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ವೇಳೆಗೆ ಈ ಯುನಿಟ್​ಗಳು 2,75,119 ಇತ್ತು. ರಾಯಲ್ ಎನ್‌ಫೀಲ್ಡ್ ಐದನೇ ಸ್ಥಾನವನ್ನು ಅಲಂಕರಿಸಿದೆ.

ರಾಯಲ್ ಎನ್‌ಫೀಲ್ಡ್ ಕಳೆದ ತಿಂಗಳು ಒಟ್ಟು 93,530 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ 2023 ರಲ್ಲಿ 83,947 ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ. ಈ ಕಂಪನಿಗಳಲ್ಲದೇ ಸುಜುಕಿ, ಯಮಹಾ, ಓಲಾ ಮತ್ತು ಅಥರ್ ಕಂಪನಿಗಳ ಹೆಸರುಗಳೂ ಪಟ್ಟಿಯಲ್ಲಿ ಸೇರಿವೆ. ಒಟ್ಟಿನಲ್ಲಿ ಕಳೆದು ತಿಂಗಳು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ನಂಬರ್​ ಒನ್​ ಆಗಿ ಹೊರಹೊಮ್ಮಿದೆ.

ಓದಿ: 6G ಅಭಿವೃದ್ಧಿ ಕುರಿತು ಇಂಡೋ - ಅಮೆರಿಕ ದೀರ್ಘ ಚರ್ಚೆ: ಭಾರತದ ಗುರಿ ಏನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.