ETV Bharat / state

ಬಿಜೆಪಿ ಮೈಸೂರು ಚಲೋಗೆ ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಣೆ - BJP MYSURU CHALO

ಫೆ. 23ರ ಮಧ್ಯರಾತ್ರಿಯಿಂದ ಫೆ.24ರ ಮಧ್ಯರಾತ್ರಿವರೆಗೆ ಮೈಸೂರು ನಗರದಾದ್ಯಂತ ಬಿಎನ್‌ಎಸ್ ಕಾಯಿದೆ ಪ್ರಕಾರ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಬಿಜೆಪಿ
ಬಿಜೆಪಿ (ETV Bharat)
author img

By ETV Bharat Karnataka Team

Published : Feb 23, 2025, 7:20 PM IST

ಮೈಸೂರು : ಉದಯಗಿರಿ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಖಂಡಿಸಿ ಸೋಮವಾರ ಆಯೋಜಿಸಿದ್ದ ಜನ ಜಾಗೃತಿ ರ‍್ಯಾಲಿ ಮತ್ತು ಸಮಾವೇಶಕ್ಕೆ ನಗರ ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಿಸಲಾಗಿದೆ.

ರಾಷ್ಟ್ರ ಸುರಕ್ಷ ಜನಾಂದೋಲನ ಸಮಿತಿಯಿಂದ ಫೆ. 24 ರಂದು ಬೆಳಗ್ಗೆ 11ಕ್ಕ ಜೆಎಸ್‌ಎಸ್ ಮಹಾವಿದ್ಯಾಪೀಠದ ಆವರಣದಲ್ಲಿ ಮೈಸೂರು ಚಲೋ ಹಾಗೂ ಬೃಹತ್ ಜನಾಂದೋಲನ ರ‍್ಯಾಲಿ ಮತ್ತು ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭಾಗವಹಿಸುವುದಾಗಿ ಹೇಳಿದ್ದರು. ಗಾಂಧಿನಗರದ ದಲಿತ ಮಹಾಸಭಾ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ (ಫೆ. 24) ಮಧ್ಯಾಹ್ನ 12 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೌನ ಮೆರವಣಿಗೆ ಸಮಾವೇಶಕ್ಕೆ ಕರೆ ನೀಡಲಾಗಿತ್ತು. ಎರಡೂ ಸಮಾವೇಶಗಳಿಗೂ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅನುಮತಿ ನಿರಾಕರಿಸಿದ್ದಾರೆ.

ಉಭಯ ಸಂಘಟನೆಗಳವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಷ್ಠೆಯ ರೂಪದಲ್ಲಿ ಪರ ವಿರೋಧ ಪೋಸ್ಟ್​ಗಳನ್ನು ಹಾಕುತ್ತಿರುವುದಾಗಿ ಮಾಹಿತಿ ಬಂದಿದೆ. ಸಮಾವೇಶ ಹಮ್ಮಿಕೊಂಡಿರುವ ಸ್ಥಳದಲ್ಲಿ ವಾಹನ ಸಂಚಾರ ದಟ್ಟಣೆ, ಎಲ್ಲ ಧರ್ಮದ ಜನರು, ಪ್ರವಾಸಿಗರು ಸೇರುವ ಸ್ಥಳವಾಗಿದೆ. ಅಲ್ಲದೇ ಮೂರು ಸಮಿತಿಗಳು ಒಂದೇ ದಿನ, ಒಂದೇ ಸಮಯ, ಒಂದೇ ಮಾರ್ಗ ಹಾಗೂ ಸ್ಥಳದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಮಾವೇಶಗಳಿಗೆ ಹೊರ ಜಿಲ್ಲೆ ಹಾಗೂ ನಗರದ ವಿವಿಧ ಬಡಾವಣೆಗಳಿಂದ ಹೆಚ್ಚಿನ ಕಾರ್ಯಕರ್ತರು ಸೇರಲಿದ್ದು, ಪರ ವಿರೋಧ ಘೋಷಣೆಗಳನ್ನು ಕೂಗಿ ಘರ್ಷಣೆ ಉಂಟು ಮಾಡುವ ಸಾಧ್ಯತೆ ಇದೆ.

ಕೆಲವು ಕೋಮು ಸೂಕ್ಷ್ಮ ಪ್ರದೇಶಗಳಿಂದ ಬೈಕ್, ಆಟೋ, ಬೇರೆ ರೀತಿಯ ವಾಹನಗಳ ಮೂಲಕ ಹಾಗೂ ಕಾಲ್ನಡಿಗೆಯಲ್ಲಿ ಫ್ಲಾಗ್, ಧ್ವನಿವರ್ಧಕ, ಬಂಟಿಂಗ್ಸ್​ ಕಟ್ಟಿಕೊಂಡು ರ‍್ಯಾಲಿ ಮಾಡುವ ಸಾಧ್ಯತೆ ಇದೆ. ಯಾವುದೇ ರೀತಿಯ ಪರ ವಿರೋಧದ ಚಟುವಟಿಕೆಗಳು ನಡೆದರೂ ಸಹ ಸಾರ್ವಜನಿಕ ಶಾಂತಿ ಮತ್ತು ಸಹಬಾಳ್ವೆಗೆ ಕೋಮು ಸೌಹಾರ್ದತೆ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ. ಆದ್ದರಿಂದ ಫೆ. 23ರ ಮಧ್ಯರಾತ್ರಿಯಿಂದ ಫೆ. 24ರ ಮಧ್ಯರಾತ್ರಿವರೆಗೆ ಮೈಸೂರು ನಗರದಾದ್ಯಂತ ಬಿಎನ್‌ಎಸ್ ಕಾಯ್ದೆ ಪ್ರಕಾರ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಈ ಕುರಿತು ಸಮಿತಿ ಸಂಚಾಲಕ ಮಹೇಶ್​ ಕಡಗದಾಳು ಮಾತನಾಡಿ, "ಮೈಸೂರಿನ ಉದಯಗಿರಿಯಲ್ಲಿ ಇತ್ತೀಚೆಗೆ ನಡೆದ ಗಲಭೆಯನ್ನು ಖಂಡಿಸಿ, ಸಮಗ್ರ ತನಿಖೆಯನ್ನು ಮೂಲಕ ನಡೆಸಬೇಕೆಂದು ಆಗ್ರಹಿಸಿ ಫೆ.24ರಂದು ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ನಡೆಯುವ ಮೈಸೂರು ಚಲೋ, ಬೃಹತ್ ಜನಜಾಗೃತಿ ಸಭೆಯು ನಿಶ್ಚಿತ ಸ್ಥಳದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಮೈಸೂರು ಪೊಲೀಸರು ಅನುಮತಿ ನೀಡಿಲ್ಲ. ಹಾಗಾಗಿ ಈ ಸಂಬಂಧ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ಮೂಲಕ ಅನುಮತಿ ಸಿಗುವ ಭರವಸೆ ಇದೆ" ಎಂದರು.

ಇದನ್ನೂ ಓದಿ: ಉದಯಗಿರಿ ಘಟನೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಾಳೆ ಮೈಸೂರು ಚಲೋ : ಬಿ.ವೈ. ವಿಜಯೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.