ಕರ್ನಾಟಕ

karnataka

ETV Bharat / technology

ಗ್ಲೋಬಲ್ ಇಂಡಿಯಾಎಐ ಶೃಂಗಸಭೆ ಜುಲೈ 3ರಿಂದ: ವಿವಿಧ ರಾಷ್ಟ್ರಗಳ ತಜ್ಞರು ಭಾಗಿ - Global IndiaAI Summit - GLOBAL INDIAAI SUMMIT

ಜುಲೈ 2 ಮತ್ತು 3ರಂದು ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾಎಐ ಶೃಂಗಸಭೆ ನಡೆಯಲಿದೆ.

ಗ್ಲೋಬಲ್ ಇಂಡಿಯಾಎಐ ಶೃಂಗಸಭೆ ಜುಲೈ 3 ರಿಂದ
ಗ್ಲೋಬಲ್ ಇಂಡಿಯಾಎಐ ಶೃಂಗಸಭೆ ಜುಲೈ 3 ರಿಂದ (IANS)

By ETV Bharat Karnataka Team

Published : Jul 1, 2024, 12:51 PM IST

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳ ನೈತಿಕ ಮತ್ತು ಅಂತರ್ಗತ ಬೆಳವಣಿಗೆಗೆ ಭಾರತದ ಸಮರ್ಪಣೆಯನ್ನು ಒತ್ತಿ ಹೇಳುವುದರ ಜೊತೆಗೆ ಸಹಯೋಗ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸುವ ಗುರಿಯೊಂದಿಗೆ ಇದೇ ವಾರ 'ಗ್ಲೋಬಲ್ ಇಂಡಿಯಾಎಐ ಶೃಂಗಸಭೆ' (Global IndiaAI Summit) ನಡೆಸುವುದಾಗಿ ಕೇಂದ್ರ ಸರಕಾರ ಸೋಮವಾರ ಪ್ರಕಟಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈ 3 ಮತ್ತು 4ರಂದು ನಡೆಯಲಿರುವ ಈ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ತಜ್ಞರು ಭಾಗವಹಿಸಲಿದ್ದಾರೆ.

ಭಾರತವು ಕೃತಕ ಬುದ್ಧಿಮತ್ತೆಯ ಜಾಗತಿಕ ಸಹಭಾಗಿತ್ವದ (ಜಿಪಿಎಐ) (Global Partnership on Artificial Intelligence -GPAI) ಅಧ್ಯಕ್ಷನಾಗಿ ಈ ಶೃಂಗಸಭೆ ನಡೆಸುತ್ತಿದೆ ಎಂದು ಐಟಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಶೃಂಗಸಭೆಯು ವಿಜ್ಞಾನ, ಉದ್ಯಮ, ನಾಗರಿಕ ಸಮಾಜ, ಸರ್ಕಾರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರಮುಖ ಅಂತಾರಾಷ್ಟ್ರೀಯ ಎಐ ತಜ್ಞರಿಗೆ ಪ್ರಮುಖ ಎಐ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಜಿಪಿಎಐನ ನವದೆಹಲಿ ಘೋಷಣೆಯನ್ನು 28 ದೇಶಗಳು ಸರ್ವಾನುಮತದಿಂದ ಅಂಗೀಕರಿಸಿದ್ದವು. ಈ ಘೋಷಣೆಯು ಹೊಸ ಅವಕಾಶಗಳನ್ನು ಬಳಸಿಕೊಳ್ಳುವ ಮತ್ತು ಎಐ ಅಭಿವೃದ್ಧಿ, ನಿಯೋಜನೆ ಮತ್ತು ಬಳಕೆಯಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸುವ ಉದ್ದೇಶಗಳನ್ನು ಹೊಂದಿದೆ. ಸ್ಪಷ್ಟ ಮತ್ತು ಉತ್ತರದಾಯಿತ್ವದ ಜವಾಬ್ದಾರಿಗಳೊಂದಿಗೆ ಲಕ್ಷಾಂತರ ಜನರಿಗೆ ಎಐ ಬಳಕೆಯ ಅವಕಾಶವನ್ನು ಜಿಪಿಎಐ ಖಚಿತಪಡಿಸಿದೆ.

"ಈ ಮಿಷನ್ ಏಳು ಸ್ತಂಭಗಳ ಮೂಲಕ ಭಾರತದ ಎಐ ಪರಿಸರ ವ್ಯವಸ್ಥೆಯ ಜವಾಬ್ದಾರಿಯುತ ಮತ್ತು ಅಂತರ್ಗತ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ. ಇದು ಜಾಗತಿಕ ಭಾರತಎಐ ಶೃಂಗಸಭೆಯ ಪ್ರಮುಖ ಗುರಿಯಾಗಿದೆ" ಎಂದು ಐಟಿ ಸಚಿವಾಲಯ ತಿಳಿಸಿದೆ.

ಸರ್ಕಾರದ ಪ್ರಕಾರ, ಕಂಪ್ಯೂಟಿಂಗ್ ವಲಯವನ್ನು ಎಲ್ಲರಿಗೂ ಮುಕ್ತಗೊಳಿಸುವ, ಡೇಟಾ ಗುಣಮಟ್ಟವನ್ನು ಹೆಚ್ಚಿಸುವ, ಸ್ಥಳೀಯ ಎಐ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ, ಉನ್ನತ ಎಐ ಪ್ರತಿಭೆಗಳನ್ನು ಆಕರ್ಷಿಸುವ, ಉದ್ಯಮ ಸಹಯೋಗವನ್ನು ಸಕ್ರಿಯಗೊಳಿಸುವ, ಸ್ಟಾರ್ಟ್ಅಪ್​ಗಳಿಗೆ ರಿಸ್ಕ್ ಬಂಡವಾಳ ಒದಗಿಸುವ, ಸಾಮಾಜಿಕವಾಗಿ ಪರಿಣಾಮಕಾರಿ ಎಐ ಯೋಜನೆಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ನೈತಿಕ ಎಐ ಅನ್ನು ಉತ್ತೇಜಿಸುವ ಮೂಲಕ ಎಐ ನಾವೀನ್ಯತೆಯನ್ನು ಉತ್ತೇಜಿಸುವ ಸಮಗ್ರ ಪರಿಸರ ವ್ಯವಸ್ಥೆಯನ್ನು (Ecosystem) ನಿರ್ಮಿಸುವ ಗುರಿಯನ್ನು ಭಾರತ ಎಐ ಮಿಷನ್ ಹೊಂದಿದೆ.

ಇದನ್ನೂ ಓದಿ: ಸಣ್ಣ ರೈತರಿಗಾಗಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್​ ಟ್ರ್ಯಾಕ್ಟರ್​ ತಯಾರಿಸಿದ ಸಿಎಸ್​ಐಆರ್​ - Low Cost Compact Tractor

ABOUT THE AUTHOR

...view details