ಕರ್ನಾಟಕ

karnataka

ETV Bharat / technology

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌: ₹7 ಸಾವಿರಕ್ಕಿಂತ ಕಡಿಮೆ ಬೆಲೆಗೆ POCO 5G ಫೋನ್‌ - Discount On POCO Smartphones

POCO Smartphones: ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ POCO ಇಂಡಿಯಾ ತನ್ನ ಹಲವು ಉತ್ಪನ್ನಗಳಲ್ಲಿ ಭಾರಿ ಡಿಸ್ಕೌಂಟ್​ ನೀಡುವುದಾಗಿ ಘೋಷಿಸಿದೆ. ಈ ಲಿಸ್ಟ್‌ನಲ್ಲಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಅನೇಕ ಕೊಡುಗೆಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯ. ಅವು ಯಾವುವು ನೋಡೋಣ.

FLIPKART BIG BILLION DAYS SALE  POCO 5G PHONES UNDER 7K  POCO BUDGET PHONES  DISCOUNT ON POCO SMARTPHONES
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ (POCO, Flipkart)

By ETV Bharat Tech Team

Published : Sep 23, 2024, 11:31 AM IST

POCO Smartphones:ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಇದಕ್ಕೂ ಮೊದಲೇ ಅನೇಕ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ಕೊಡುಗೆಗಳು ಬಹಿರಂಗಗೊಳ್ಳಲು ಪ್ರಾರಂಭಿಸಿವೆ. POCO ಇಂಡಿಯಾ ತನ್ನ 'ಮ್ಯಾಡ್ ರೀಟೇಲ್ ಪ್ರೈಸಸ್' ಅಭಿಯಾನದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

POCO ಕಡಿಮೆ ಬೆಲೆಗಳನ್ನು ಭರವಸೆ ನೀಡುವುದಲ್ಲದೆ ಸಂಪೂರ್ಣ ಉತ್ಪನ್ನ ಶ್ರೇಣಿಯಾದ್ಯಂತ ಹೆಚ್ಚುವರಿ ಬ್ಯಾಂಕ್ ಆಫರ್​ಗಳನ್ನು ಒದಗಿಸುತ್ತಿದೆ. ಖರೀದಿದಾರರು ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟುಕುವ ದರದಲ್ಲಿ ಪಡೆಯಬಹುದು ಎಂದು ತಿಳಿಸಿದೆ.

ಈ ಸ್ಮಾರ್ಟ್‌ಫೋನ್‌ಗಳು POCO F6 5G, X6 Pro 5G ಮತ್ತು X6 Neo 5G ಅನ್ನು ಒಳಗೊಂಡಿವೆ. ಇವುಗಳು ಸುಧಾರಿತ ವೈಶಿಷ್ಟ್ಯಗಳಿಗೆ ಹೆಸರುವಾಸಿ. POCO F6 5G ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್ ಮತ್ತು ಡ್ಯುಯಲ್ 50MP ಸೋನಿ ಕ್ಯಾಮೆರಾ ಹೊಂದಿದೆ.

POCOನ ಪ್ರಭಾವಶಾಲಿ ಲೈನ್-ಅಪ್:POCO X6 Pro 5G ಪ್ರಭಾವಶಾಲಿ AnTuTu ಸ್ಕೋರ್ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. POCO X6 Neo 5G, ಅದರ ಶ್ರೇಣಿಯಲ್ಲಿ AMOLED ಡಿಸ್​ಪ್ಲೇ ಹೊಂದಿದ್ದು, ಇದು ಸೂಪರ್​ 5G ಫೋನ್ ಎಂದು ಹೇಳಲಾಗಿದೆ. ಹೆಚ್ಚುವರಿಯಾಗಿ, POCO C65 5G, C61 5G, M6 5G, M6 Plus 5G ಮತ್ತು X6 5G ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿನ ಬಿಗ್ ಬಿಲಿಯನ್ ಡೇಸ್ ಮಾರಾಟದ ವಿಶೇಷ ದರದಲ್ಲಿ ಲಭ್ಯವಿದೆ.

ಈ ಸಾಧನಗಳು POCO M6 5Gನಂತಹ ಬಜೆಟ್‌ಸ್ನೇಹಿ ಆಯ್ಕೆಗಳನ್ನು ಒಳಗೊಂಡಿವೆ. ಇದು ಭಾರತದ ಅತ್ಯಂತ ಕೈಗೆಟುಕುವ 5G ಫೋನ್ ಎಂದು ಹೇಳಲಾಗುತ್ತದೆ ಮತ್ತು POCO C61 5G, ಇದು ಫಾಸ್ಟ್ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡಾಟ್ ಡ್ರಾಪ್ HD+ ಡಿಸ್​ಪ್ಲೇ ಒಳಗೊಂಡಿದೆ.

POCO ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್​: ಕಂಪನಿಯು ತನ್ನ ಸಾಧನಗಳಿಗೆ ಕಡಿಮೆ ಬೆಲೆಗಳನ್ನು (MRP) ಘೋಷಿಸಿದೆ. ಈ ಮಾರಾಟದಲ್ಲಿ ಗ್ರಾಹಕರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಲು ಪರಿಪೂರ್ಣ ಅವಕಾಶ ನೀಡುತ್ತಿದೆ. POCO F6 5G ಬೆಲೆ ಈಗ 21,999 ರೂ ಆಗಿದ್ದು, POCO X6 Pro 5G ಅನ್ನು 18,999 ರೂ.ಗೆ ಲಭ್ಯವಾಗುವಂತೆ ಮಾಡಲಾಗಿದೆ.

ಇನ್ನೂ ಹೆಚ್ಚು ಕೈಗೆಟುಕುವ ಆಯ್ಕೆಯನ್ನು ಹುಡುಕುತ್ತಿರುವವರಿಗೆ, POCO X6 5G ಮತ್ತು POCO X6 ನಿಯೋ 5G ಕ್ರಮವಾಗಿ 14,999 ರೂ ಮತ್ತು 11,999 ರೂ ನಿಗದಿಪಡಿಸಲಾಗಿದೆ. ಮಾರಾಟದಲ್ಲಿ, POCO M6 Plus 5G ಅನ್ನು 10,999 ರೂ.ಗಳಿಗೆ ಮತ್ತು POCO M6 5G ಅನ್ನು 7,499 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಅತ್ಯಂತ ಬಜೆಟ್‌ಸ್ನೇಹಿ ಮಾದರಿಗಳು, POCO C65 5G ಮತ್ತು POCO C61 5G ಕ್ರಮವಾಗಿ 6,799 ರೂ ಮತ್ತು 6,299 ರೂ.ನಲ್ಲಿ ಲಭ್ಯ. ಈ ಬೆಲೆಗಳು ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ವ್ಯವಹಾರಗಳನ್ನು ಒಳಗೊಂಡಿವೆ ಎಂಬುದು ಗಮನಾರ್ಹ. ಆದರೂ ಈ ಬೆಲೆಗಳು ಬದಲಾವಣೆಗೆ ಒಳಪಟ್ಟಿರುತ್ತವೆ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ:OnePlus, Samsung ಸೇರಿದಂತೆ ಈ ಫೋನ್‌ಗಳಿಗೆ ಅಮೆಜಾನ್​ ಬಿಗ್ ಆಫರ್! - Amazon Offers On Smartphones

ABOUT THE AUTHOR

...view details