Dogs Understand Words :ನೀವು ಅನೇಕ ಶ್ವಾನಗಳ ವೈರಲ್ ವಿಡಿಯೋಗಳನ್ನು ನೋಡಿರಬಹುದು. ಅಲ್ಲಿ ಶ್ವಾನ ಮಾಲೀಕರ ಮಾತಿಗೆ ಪ್ರತಿಕ್ರಿಯಿಸುವುದನ್ನು ನೀವು ಗಮನಿಸಿರಬಹುದು. ಈಗ ಅನೇಕ ಜನರು ತಮ್ಮ ಶ್ವಾನದ ಜೊತೆ ಸಂವಹನ ನಡೆಸಲು ಸೌಂಡ್‌ಬೋರ್ಡ್ ಬಟನ್‌ಗಳನ್ನು ಬಳಸುತ್ತಿದ್ದಾರೆ. ತರಬೇತಿ ಪಡೆದ ಶ್ವಾನ ಸೌಂಡ್‌ಬೋರ್ಡ್ ಬಟನ್‌ಗಳನ್ನು ಬಳಸಿಕೊಂಡು ನಿಮ್ಮ ಪದಗಳನ್ನು ಸಹ ಗುರುತಿಸುತ್ತವೆ.
ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಾವು ಈ ರೀತಿಯ ವಿವಿಧ ವೀಡಿಯೊಗಳನ್ನು ನೋಡುತ್ತಿರುತ್ತವೆ. ಆದರೆ ಈ ಶ್ವಾನಗಳು ನಿಜವಾಗಿಯೂ ಸಂವಹನ ನಡೆಸುತ್ತಿವೆಯೇ ಅಥವಾ ಅವರು ತಮ್ಮ ಮಾಲೀಕರ ಸೂಚನೆಗಳಿಗೆ ಪ್ರತಿಕ್ರಿಯಿಸುತ್ತಿವೆಯಾ ಅಂತಾ ನಿಮಗೆ ಹತ್ತಾರು ಅನುಮಾನಗಳು ಮೂಡಿರಬಹುದು. ಆದ್ರೆ ಶ್ವಾನಗಳು ನಿಮ್ಮ ಮಾತಿಗೆ ಪ್ರತಿಕ್ರಿಯಿಸುತ್ತವೆ ಎಂದು ಸಂಶೋಧನೆಯೊಂದು ಸಾಬೀತುಪಡಿಸಿದೆ.
30 ನಾಯಿ ಸಂಶೋಧನೆ: PLOS ONE ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸೌಂಡ್‌ಬೋರ್ಡ್ ಬಟನ್‌ಗಳೊಂದಿಗೆ ತರಬೇತಿ ಪಡೆದ ಶ್ವಾನಗಳು ನಿರ್ದಿಷ್ಟ ಪದಗಳನ್ನು ಅರ್ಥಮಾಡಿಕೊಳ್ಳಬಹುದು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಮತ್ತು ಇತರ ಸಂಸ್ಥೆಗಳ ಸಂಶೋಧಕರು ಈ ಸಂಶೋಧನೆ ಮಾಡಿದ್ದಾರೆ.
UC ಸ್ಯಾನ್ ಡಿಯಾಗೋದಲ್ಲಿ ಕಾಗ್ನಿಟಿವ್ ಸೈನ್ಸಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಫೆಡೆರಿಕೊ ರೊಸ್ಸಾನೊ ನೇತೃತ್ವದ ತಂಡ, ತರಬೇತಿ ಪಡೆದ ಸಾಕುಪ್ರಾಣಿಗಳ ಮೇಲೆ ಮೊದಲ ಅಧ್ಯಯನ ಮಾಡಿದರು. ಸಂಶೋಧನೆಯಲ್ಲಿ ಎರಡು ಪೂರಕ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಮೊದಲ ಸಂಶೋಧನೆಯನ್ನು ಪ್ರತ್ಯೇಕ ಶ್ವಾನಗಳ ಮೇಲೆ ಮಾಡಲಾಯಿತು. ಸೌಂಡ್‌ಬೋರ್ಡ್ ಬಟನ್‌ಗಳಿಗೆ ಶ್ವಾನಗಳ ಪ್ರತಿಕ್ರಿಯೆಯನ್ನು ಪರೀಕ್ಷಿಸಲು ಸಂಶೋಧಕರು ದೇಶಾದ್ಯಂತ 30 ಶ್ವಾನಗಳನ್ನು ಸಮೀಕ್ಷೆ ಮಾಡಿದರು. ಎರಡನೇ ಪ್ರಯೋಗದಲ್ಲಿ, 29 ಸಾಕು ಶ್ವಾನಗಳ ಪರೀಕ್ಷೆಯನ್ನು ಮಾಲೀಕರ ಮನೆಯಲ್ಲಿ ಕೈಗೊಳ್ಳಲಾಗಿತ್ತು ಎಂದು ಸಂಶೋಧಕರು ಹೇಳಿದರು.