ETV Bharat / bharat

ಆಪ್​​ ಯೋಜನೆಗಳಿಂದ ದೆಹಲಿಯ ಪ್ರತಿ ಕುಟುಂಬಕ್ಕೆ ಮಾಸಿಕ 25 ಸಾವಿರ ರೂ. ಉಳಿತಾಯ: ಕೇಜ್ರಿವಾಲ್ - DELHI ELECTIONS 2025

ಆಮ್ ಆದ್ಮಿ ಪಕ್ಷದ ಸರ್ಕಾರದ ಯೋಜನೆಗಳಿಂದ ದೆಹಲಿ ಜನತೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಉಳಿತಾಯವಾಗುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ (ians)
author img

By ETV Bharat Karnataka Team

Published : Jan 31, 2025, 3:13 PM IST

ನವದೆಹಲಿ: ಎಎಪಿ ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ದೆಹಲಿಯಲ್ಲಿನ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 25,000 ರೂ.ಗಳಷ್ಟು ಉಳಿತಾಯವಾಗುತ್ತಿದೆ ಮತ್ತು ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಹೊಸ ಯೋಜನೆಗಳಿಂದಾಗಿ ಜನರಿಗೆ ಮಾಸಿಕ ಇನ್ನೂ 10 ಸಾವಿರ ರೂಪಾಯಿ ಲಾಭವಾಗಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ತಮ್ಮ ಪಕ್ಷದ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಆರ್ಥಿಕ ಪ್ರಯೋಜನಗಳನ್ನು ತೋರಿಸುವ ಉದ್ದೇಶದಿಂದ ಎಎಪಿಯ 'ಬಚತ್ ಪತ್ರ' ಅಭಿಯಾನಕ್ಕೆ ಚಾಲನೆ ನೀಡಿ ಮಾಜಿ ಮುಖ್ಯಮಂತ್ರಿ ಮಾತನಾಡಿದರು.

"ನಮ್ಮ ಸ್ವಯಂಸೇವಕರು ಜನರ ಬಳಿಗೆ ಹೋಗುತ್ತಾರೆ ಮತ್ತು 'ಬಚತ್ ಪತ್ರ' ವನ್ನು ಭರ್ತಿ ಮಾಡುವಂತೆ ಮಾಡುತ್ತಾರೆ. ಈ ಮೂಲಕ ನಮ್ಮ ಸರ್ಕಾರದ ಉಚಿತ ಕಲ್ಯಾಣ ಉಪಕ್ರಮಗಳ ಮೂಲಕ ಎಷ್ಟು ಉಳಿತಾಯವಾಗುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲಾಗುತ್ತದೆ" ಎಂದು ಕೇಜ್ರಿವಾಲ್ ಹೇಳಿದರು.

"ಎಎಪಿ ಸರ್ಕಾರದ ನೀತಿಗಳ ಅಡಿ ಸರಾಸರಿ ದೆಹಲಿ ಕುಟುಂಬವು ತಿಂಗಳಿಗೆ 25,000 ರೂ.ಗಳನ್ನು ಉಳಿಸುತ್ತದೆ ಮತ್ತು ಜನರು 'ಝಾಡು' (ಪೊರಕೆ - ಎಎಪಿಯ ಚುನಾವಣಾ ಚಿಹ್ನೆ) ಪಕ್ಕದ ಗುಂಡಿ ಒತ್ತುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ, ಹೊಸ ಯೋಜನೆಗಳ ಮೂಲಕ ಇನ್ನೂ 10,000 ರೂ.ಗಳಷ್ಟು ಕೊಡುಗೆಗಳನ್ನು ನೀಡಲಾಗುತ್ತದೆ. ಎಎಪಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿಯಂಥ ಯೋಜನೆಗಳು ಈ ಉಪಕ್ರಮಗಳಲ್ಲಿ ಸೇರಿವೆ" ಎಂದು ಅವರು ಹೇಳಿದರು.

ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಎಎಪಿಯ ನೀತಿಗಳನ್ನು ಬಿಜೆಪಿಯ ನೀತಿಗಳೊಂದಿಗೆ ಹೋಲಿಕೆ ಮಾಡಿ ಮಾತನಾಡಿದರು.

"ಬಜೆಟ್​ ನಂತರ ಸಾಮಾನ್ಯವಾಗಿ ಹಣದುಬ್ಬರ ಹೆಚ್ಚಾಗುತ್ತದೆ ಮತ್ತು ಇದರಿಂದ ಮನೆಯ ಹಣಕಾಸಿನ ಮೇಲೆ ಪರಿಣಾಮವಾಗುತ್ತದೆ. ಆದರೆ ದೆಹಲಿಯಲ್ಲಿ, ನಮ್ಮ ಸರ್ಕಾರವು ಪ್ರತಿ ಕುಟುಂಬಕ್ಕೆ ಉಳಿತಾಯ ಖಾತ್ರಿಪಡಿಸುತ್ತದೆ. ಮತ್ತೊಂದೆಡೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಪ್ರಯೋಜನಗಳನ್ನು ನಿಲ್ಲಿಸುವುದಾಗಿ ಪದೇ ಪದೆ ಹೇಳುತ್ತಿದೆ" ಎಂದು ಕೇಜ್ರಿವಾಲ್ ತಿಳಿಸಿದರು.

ಬಿಜೆಪಿ ತನ್ನ ಕಾರ್ಪೊರೇಟ್ ಮಿತ್ರಪಕ್ಷಗಳಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಹಣವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಅವರು ಆರೋಪಿಸಿದರು.

"ನಾವು ಬಜೆಟ್ ಅನ್ನು ಜನರ ಕಲ್ಯಾಣಕ್ಕಾಗಿ ಬಳಸುತ್ತೇವೆ, ಆದರೆ ಬಿಜೆಪಿ ಅದನ್ನು ತನ್ನ ಉದ್ಯಮಿ ಸ್ನೇಹಿತರಿಗಾಗಿ ಬಳಸುತ್ತದೆ. ಮುಂಬೈನಲ್ಲಿ, ಅವರು ಧಾರಾವಿಯ ಭೂಮಿಯನ್ನು ತಮ್ಮ ಮಿತ್ರರೊಬ್ಬರಿಗೆ ಹಸ್ತಾಂತರಿಸಿದ್ದಾರೆ. ಹಾಗೆಯೇ ದೆಹಲಿಯಲ್ಲಿಯೂ ಜನರ ಭೂಮಿ ಕಸಿದುಕೊಳ್ಳುವುದು ಅವರ ಗುರಿಯಾಗಿದೆಯೇ ಹೊರತು ಜನರಿಗೆ ಸೇವೆ ಸಲ್ಲಿಸುವುದಲ್ಲ" ಎಂದು ಅವರು ಹೇಳಿದರು. ದೆಹಲಿಯಲ್ಲಿ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ : 'ಹಿಂದುತ್ವದ ವರ್ಚಸ್ಸಿಗೆ ಧಕ್ಕೆ ತರಲು ಪಿತೂರಿ': ಮಹಾಕುಂಭ ಕಾಲ್ತುಳಿತದ ಬಗ್ಗೆ ಬಾಗೇಶ್ವರ್ ಬಾಬಾ ಆರೋಪ - MAHA KUMBH STAMPEDE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.