ETV Bharat / business

ಅಗ್ಗದ ಬೆಲೆಯಲ್ಲಿ ಚಿನ್ನ ಸಿಗುವುದು ಇಲ್ಲಿ ಮಾತ್ರ: ಇಲ್ಲಿಗೆ ಭೇಟಿ ನೀಡಿ ಟ್ಯಾಕ್ಸ್ ಇಲ್ಲದೇ ಬಂಗಾರ ಕೊಳ್ಳಿ, ಷರತ್ತುಗಳು ಅನ್ವಯ!! - CHEAPEST GOLD PRICE IN WORLD

ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುವ ದೇಶ ಯಾವುದು ಗೊತ್ತಾ? ದುಬೈ, ಸೌದಿ ಅರೇಬಿಯಾ, ಅಮೆರಿಕ, ಬ್ರಿಟನ್‌ ದೇಶಗಳಿಗಿಂತಲೂ ಅಗ್ಗದ ಚಿನ್ನವನ್ನು ನೀಡುವ ದೇಶ ನಮ್ಮ ನೆರೆಯ ದೇಶ.

CHEAPEST GOLD PRICE IN WORLD
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : Jan 31, 2025, 4:56 PM IST

ದುಬೈ, ಸೌದಿ ಅರೇಬಿಯಾ, ಅಮೆರಿಕ ಮತ್ತು ಬ್ರಿಟನ್‌ಗಿಂತ ಅಗ್ಗವಾದ ಚಿನ್ನ ಎಲ್ಲಿ ಸಿಗುತ್ತದೆ ಗೊತ್ತಾ? ಅಲ್ಲಿ ನೀವು ಖರೀದಿಸುವ ಬಂಗಾರದ ಮೇಲೆ ಒಂದೇ ಒಂದು ರೂಪಾಯಿ ಟ್ಯಾಕ್ಸ್ ನೀಡಬೇಕಿಲ್ಲ. ಅಲ್ಲಿಗೆ ತೆರಳಲು ವೀಸಾದ ಅಗತ್ಯವೂ ಇಲ್ಲ. ಹಾಗಾದ್ರೆ ಮತ್ತೇಕೆ ತಡ? ಪಕ್ಕದಲ್ಲಿರುವ ದೇಶಕ್ಕೆ ತೆರಳಿ ನಿಮ್ಮಿಷ್ಟದ ಚಿನ್ನಾಭರಣ ಖರೀದಿಸಬಹುದಾಗಿದೆ.

ಚಿನ್ನಾಭರಣಗಳನ್ನು ಇಷ್ಟಪಡದವರು ಯಾರೂ ಇಲ್ಲ. ಅದರಲ್ಲೂ ಭಾರತೀಯರಿಗೆ ಚಿನ್ನ ಎಂದರೆ ಎಲ್ಲಿಲ್ಲದ ಮೋಹ. ಚಿನ್ನ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ ಸಂಪತ್ತು, ಶಕ್ತಿ ಮತ್ತು ಸಮೃದ್ಧಿಯ ಸಂಕೇತ ಕೂಡ ಹೌದು. ಮದುವೆ, ಮುಂಜಿ, ಹಬ್ಬ- ಹರಿದಿನ ಮತ್ತು ಶುಭ ಸಂದರ್ಭಗಳಲ್ಲಿ ಚಿನ್ನಾಭರಣ ಧರಿಸುವುದೆಂದರೆ ಬಹಳ ಅಚ್ಚುಮೆಚ್ಚು. ಆಪದ್ಬಾಂಧವ ಎನಿಸುವ ಈ ಚಿನ್ನವನ್ನು ಹಲವರು ಹೂಡಿಕೆಯ ಸಾಧನವಾಗಿಯೂ ಬಳಸಿಕೊಳ್ಳುವುದುಂಟು. ಹಾಗಾಗಿ ಚಿನ್ನವು ಜಗತ್ತಿನ ಅತ್ಯಂತ ಅಮೂಲ್ಯ ಲೋಹಗಳಲ್ಲಿ ಒಂದಾಗಿದೆ. ಚಿನ್ನದ ದರದಲ್ಲಿ ನಿತ್ಯವೂ ಬದಲಾಗುವುದು ಸಾಮಾನ್ಯವಾದರರೂ ದೇಶಾದ್ಯಂತ ಏಕರೂಪತೆ ಹೇಗೆ ಇರುವುದಿಲ್ಲವೂ ಹಾಗೆಯೇ ದೇಶದಿಂದ ದೇಶಕ್ಕೆ ಅದರ ಬೆಲೆ ಕೂಡ ಬದಲಾಗುತ್ತದೆ. ಅದು ಆ ದೇಶದ ಆರ್ಥಿಕ ಮತ್ತು ಮಾರುಕಟ್ಟೆಯ ಏರಿಳಿತದ ಮೇಲೆ ಅವಲಂಬಿಸಿರುತ್ತದೆ. ಹಾಗಾಗಿ ಚಿನ್ನವನ್ನು ತುಂಬಾ ಪ್ರೀತಿಸುವ ಭಾರತೀಯರು, ಅಗ್ಗದ ಚಿನ್ನವನ್ನು ಖರೀದಿಸುವ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬೇಕಾದರೆ ನೀವು ಈಗಲೇ ನೆರೆಯ ದೇಶಕ್ಕೆ ಹೋದರೆ ಸಾಕು!

ಅಗ್ಗದ ಬೆಲೆಯ ಚಿನ್ನಕ್ಕಾಗಿ ಇಲ್ಲಿಗೆ ಭೇಟಿ ನೀಡಿ: ಚಿನ್ನಾಭರಣಗಳ ವಿಷಯಕ್ಕೆ ಬಂದರೆ ಮೊದಲು ಎಲ್ಲರಿಗೂ ನೆನಪಾಗುವ ಹೆಸರು ಗಲ್ಫ್ ರಾಷ್ಟ್ರಗಳು. ಅಲ್ಲಿನ ಐಷಾರಾಮಿ ಬದುಕಿನಲ್ಲಿ ಎಲ್ಲೆಲ್ಲೂ ಚಿನ್ನವೇ ಕಾಣ ಸಿಗುತ್ತಿದೆ. ದುಬೈನಲ್ಲಿ ವಿಶ್ವದ ಅತ್ಯಂತ ಅಗ್ಗದ ಚಿನ್ನ ಸಿಗುತ್ತದೆ ಎನ್ನುವುದು ಎಲ್ಲರ ನಂಬಿಕೆ. ಅಷ್ಟೇ ಅಲ್ಲದೇ ಅಮೆರಿಕ ಮತ್ತು ಬ್ರಿಟನ್‌ ದೇಶದಿಂದಲೂ ಅಗ್ಗದ ಬೆಲೆಗೆ ಚಿನ್ನ ಖರೀದಿಸಬಹುದು ಎಂದು ಭಾವಿಸುತ್ತಾರೆ. ಆದರೆ, ಇದು ನಿಜ ಅಲ್ಲ. ವಿಶ್ವದ ಅತ್ಯಂತ ಅಗ್ಗದ ಚಿನ್ನ ಭೂತಾನ್‌ನಲ್ಲಿ ಸಿಗುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಾ? ಭೂತಾನ ನಮ್ಮ ಪಕ್ಕದಲ್ಲೇ ಇರುವ ದೇಶವಾದರೂ ಇಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು.

ಕಡಿಮೆ ಬೆಲೆಗೆ ಏಕೆ? ಅದು ಒಂದೇ ಒಂದು ರೂಪಾಯಿ ಟ್ಯಾಕ್ಸ್ (ಸುಂಕ-ತೆರಿಗೆ) ಇಲ್ಲದೆಯೇ ಇಲ್ಲಿ ಚಿನ್ನ ಖರೀದಿ ಮಾಡಬಹುದಾಗಿದೆ! ಭೂತಾನ್‌ ದೇಶದಲ್ಲಿ ಅಗ್ಗದ ಬೆಲೆಯಲ್ಲಿ ಚಿನ್ನ ಸಿಗುವುದಕ್ಕೆ ಹಲವು ಕಾರಣಗಳಿದ್ದು, ಇದಕ್ಕೆ ಮುಖ್ಯ ಕಾರಣ ಅಲ್ಲಿನ ಸರ್ಕಾರ ಚಿನ್ನದ ಮೇಲೆ ತೆರಿಗೆ ವಿಧಿಸದಿರುವುದು. ಇದಲ್ಲದೇ, ಭೂತಾನ್‌ನಲ್ಲಿ ಈ ಅಪರೂಪದ ಲೋಹಗಳ ಮೇಲೆ ಕಡಿಮೆ ಆಮದು ಸುಂಕ ವಿಧಿಸುತ್ತದೆ. ಇದರರ್ಥ ಭೂತಾನ್‌ನಲ್ಲಿ ಚಿನ್ನವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿ ಲಭ್ಯ ಎಂದರ್ಥ. ಅದಕ್ಕಾಗಿಯೇ ಭೂತಾನ್ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಲಭ್ಯವಿರುವ ದೇಶವಾಗಿದೆ.

ಭಾರತೀಯರಿಗೆ ಒಳ್ಳೆಯ ಸುದ್ದಿ: ಪಕ್ಕದಲ್ಲಿರುವ ದೇಶ ಭೂತಾನ್​ಗೆ ಭೇಟಿ ಅತಿ ಕಡಿಮೆ ಬೆಲೆಗೆ ಚಿನ್ನ ಕೊಳ್ಳುವ ಸುದ್ದಿ ಭಾರತೀಯರಿಗೆ ಒಳ್ಳೆಯ ವಿಚಾರ. ಏಕೆಂದರೆ ಭಾರತೀಯರು ಭೂತಾನ್​ ದೇಶದಲ್ಲಿ ದುಬೈಗಿಂತಲೂ ಶೇ.5 ರಿಂದ 10ರಷ್ಟು ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಬಹುದು. ಇದಲ್ಲದೇ, ಭಾರತೀಯರಿಗೆ ಭೂತಾನ್‌ಗೆ ಪ್ರಯಾಣಿಸಲು ವೀಸಾ ಕೂಡ ಅಗತ್ಯವಿಲ್ಲ. ಅಲ್ಲಿಗೆ ಹೋಗುವುದು ಸುಲಭ. ಇನ್ನು ಭೂತಾನ್ ಮತ್ತು ಭಾರತದ ಕರೆನ್ಸಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಭೂತಾನಿನ ಕರೆನ್ಸಿಯಾದ ನ್ಗುಲ್ಟ್ರಮ್ (Ngultrum), ಭಾರತೀಯ ರೂಪಾಯಿಗೆ ಸರಿಸುಮಾರು ಸಮಾನವಾಗಿಯೇ ಇರುತ್ತದೆ. ಹೀಗಾಗಿ ಭೂತಾನ್‌ನಿಂದ ಚಿನ್ನವನ್ನು ಖರೀದಿಸುವುದು ಭಾರತೀಯರಿಗೆ ಲಾಭದಾಯಕ ಎಂದೇ ಹೇಳಬಹುದು. ಆದರೆ, ಭೂತಾನ್‌ನಲ್ಲಿ ಚಿನ್ನವನ್ನು ಖರೀದಿಸಲು, ಕೆಲವು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ.

ಹೇಗೆ ಖರೀದಿಸುವುದು?: ಭೂತಾನ್‌ನಲ್ಲಿ ಚಿನ್ನ ಖರೀದಿಸಲು ಕೆಲವು ನಿಯಮಗಳಿವೆ. ಎಲ್ಲೆಂದರಲ್ಲಿ ಚಿನ್ನ ಖರೀದಿಸಲು ಆಗುವುದಿಲ್ಲ. ಕೆಲವು ಷರತ್ತುಗಳು ಅನ್ವಯವಾಗುತ್ತವೆ.

  • ಭೂತಾನ್ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣೀಕೃತ ಹೋಟೆಲ್‌ನಲ್ಲಿ ಪ್ರವಾಸಿಗರು ಕನಿಷ್ಠ ಒಂದು ರಾತ್ರಿ ತಂಗಬೇಕು.
  • ಭೂತಾನ್‌ಗೆ ಹೋಗುವ ಪ್ರವಾಸಿಗರು ಅಮೆರಿಕನ್ ಡಾಲರ್‌ಗಳಿಂದ ಚಿನ್ನ ಖರೀದಿಸಬೇಕು.
  • ಚಿನ್ನ ಖರೀದಿಸಲು, ನೀವು ಸುಸ್ಥಿರ ಅಭಿವೃದ್ಧಿ ಶುಲ್ಕ (SDF) ಪಾವತಿಸಬೇಕು. ಭಾರತೀಯರಿಗೆ ಇದು 1,200 ರೂ.ಗಳಿಂದ 1,800 ರೂ.ಗಳವರೆಗೆ ಇರುತ್ತದೆ.
  • ಮೇಲಿನ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವವರು ಮಾತ್ರ ಭೂತಾನ್‌ನಲ್ಲಿ ಸರ್ಕಾರಿ ಸ್ವಾಮ್ಯದ 'ಸುಂಕ ರಹಿತ' ಅಂಗಡಿಗಳಿಂದ ಚಿನ್ನವನ್ನು ಖರೀದಿಸಬಹುದು.
  • ಈ ಅಂಗಡಿಗಳು ಭೂತಾನ್‌ನ ಹಣಕಾಸು ಸಚಿವಾಲಯದ ಒಡೆತನದಲ್ಲಿರುವುದರಿಂದ ಪ್ರವಾಸಿಗರು ಚಿನ್ನ ಖರೀದಿಸಲು ರಶೀದಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಚಿನ್ನ: 10 ಗ್ರಾಂ ಬೆಲೆ ಕೇಳಿದ್ರೆ! ಬೆಳ್ಳಿಯೂ ಭಾರವೇ - GOLD PRICE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.