Chemical plastics recycling: ವಿಶ್ವದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನು ಸಂಸ್ಕರಿಸಲು ಮತ್ತು ಮರುಬಳಕೆ ಮಾಡಲು ವಿಜ್ಞಾನಿಗಳು ಹೊಸ ವಿಧಾನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದ ಪ್ರಸ್ತುತ ಮರುಬಳಕೆಯ ಅಭ್ಯಾಸಗಳು ಬಹಳ ಸೀಮಿತವಾಗಿವೆ. ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾಂತ್ರಿಕವಾಗಿ ಮರುಬಳಕೆ ಮಾಡಲಾಗುತ್ತದೆ. ಈ ತ್ಯಾಜ್ಯವನ್ನು ಪುಡಿಮಾಡಿ ನಂತರ ಕರಗಿಸಲಾಗುತ್ತದೆ. ಈ ಪ್ರಕ್ರಿಯೆಯು ಹೊಸ ಪ್ಲಾಸ್ಟಿಕ್ ಉತ್ಪನ್ನಗಳನ್ನು ರಚಿಸಿದರೂ, ಪ್ರತಿ ಮರುಬಳಕೆಯೊಂದಿಗೆ ಅವುಗಳ ಗುಣಮಟ್ಟ ಕುಸಿಯುತ್ತಿರುವುದು ಗಮನಾರ್ಹ.
ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ:ಪ್ಲಾಸ್ಟಿಕ್ ತ್ಯಾಜ್ಯದ ಮೇಲೆ ರಾಸಾಯನಿಕ ಪ್ರಯೋಗಗಳನ್ನು ಮಾಡುವ ಮೂಲಕ ಮರುಬಳಕೆ ಮಾಡಬಹುದು. ಏಕೆಂದರೆ ಆಗ ಉತ್ಪನ್ನದ ಗುಣಮಟ್ಟವೂ ಉತ್ತಮವಾಗಿರುತ್ತದೆ. ಈ ವಿಧಾನದಲ್ಲಿ ಪ್ಲಾಸ್ಟಿಕ್ ಅಣುಗಳನ್ನು (ಪಾಲಿಮರ್‌ಗಳು) ಹೊಸ, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ಗಳಾಗಿ ಮರುಸಂಯೋಜಿಸಬಹುದು. ಇದು ಬಾಳಿಕೆ ಬರುವ ವಸ್ತುವನ್ನು ರಚಿಸುತ್ತದೆ. ಅಲ್ಲದೆ ನಾವು ಅದರಿಂದ ಇಂಧನವನ್ನು ತಯಾರಿಸಬಹುದು ಎಂದು ಸಂಶೋಧಕರು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ.
ತ್ಯಾಜ್ಯದಿಂದ ಇಂಧನ: ರಾಸಾಯನಿಕ ಮರುಬಳಕೆಯ ವಿಧಾನಗಳು ಅಭಿವೃದ್ಧಿಗೊಂಡಂತೆ ಆರಂಭಿಕ ಗಮನವು ಈ ಪಾಲಿಮರ್‌ಗಳನ್ನು (ಪ್ಲಾಸ್ಟಿಕ್ ಅಣುಗಳು) ಒಡೆಯುವುದರ ಮೇಲೆ ಇರುತ್ತದೆ. ಇದನ್ನು ದ್ರವ ಇಂಧನ ಅಥವಾ ಲೂಬ್ರಿಕಂಟ್ ಆಗಿ ಬಳಸಬಹುದು. ಇದು ಪ್ಲಾಸ್ಟಿಕ್ ತ್ಯಾಜ್ಯವನ್ನು ಪೆಟ್ರೋಲ್, ಜೆಟ್ ಇಂಧನ ಅಥವಾ ಎಂಜಿನ್ ಆಯಿಲ್‌ನಂತೆ ಬಳಸಬಹುದು ಎಂದು ಅಧ್ಯಯನ ತಿಳಿಸುತ್ತದೆ. ETH ಜ್ಯೂರಿಚ್‌ನ ವಿಜ್ಞಾನಿಗಳು ಈಗ ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಕೆಲಸದ ನಿರತರಾಗಿದ್ದಾರೆ.