Cars Price Hike 2025 in India: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎಂದಿನಂತೆ ದೇಶಿಯ ಐಷಾರಾಮಿ ಕಾರು ಬ್ರಾಂಡ್ ಕಂಪನಿಗಳು ತಮ್ಮ ಶ್ರೇಣಿಯ ವಾಹನಗಳ ಬೆಲೆಯನ್ನು ಏರಿಸಲು ಸಿದ್ಧವಾಗುತ್ತಿವೆ. ಈ ಮಟ್ಟಿಗೆ, ಪ್ರಮುಖ ಕಾರು ತಯಾರಕರು ತಮ್ಮ ಪೋರ್ಟ್ಫೋಲಿಯೋದ ಬೆಲೆಗಳನ್ನು ಹೆಚ್ಚಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಹಣದುಬ್ಬರದ ಒತ್ತಡ, ಇನ್ಪುಟ್ ವೆಚ್ಚ ಮತ್ತು ಕಾರ್ಯಾಚರಣೆ ವೆಚ್ಚದಲ್ಲಿ ಹೆಚ್ಚಳದ ಹಿನ್ನೆಲೆಯಲ್ಲಿ ಕಂಪನಿಗಳು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿವೆ. ಈ ಪರಿಷ್ಕೃತ ದರಗಳು 1ನೇ ಜನವರಿ 2025 ರಿಂದ ಅನ್ವಯವಾಗುತ್ತವೆ. ಯಾವ ಕಂಪನಿಗಳು ಯಾವ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತಿವೆ ಎಂಬುದ ಮಾಹಿತಿ ಇಲ್ಲಿದೆ..
Hyundai Motor India: ಕೊರಿಯಾದ ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ ಹ್ಯುಂಡೈ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ರೂ. 25,000 ವರೆಗೆ ಏರಿಸುವುದಾಗಿ ಘೋಷಿಸಿದೆ. ಕಂಪನಿಯು ಪ್ರಸ್ತುತ ವೆನ್ಯೂ, ಕ್ರೆಟಾ, ಎಕ್ಸೆಟರ್‌ನಂತಹ ಎಸ್‌ಯುವಿಗಳನ್ನು ಮತ್ತು ಹ್ಯುಂಡೈ ಔರಾ ಸೆಡಾನ್, ಗ್ರ್ಯಾಂಡ್ ಐ10 ನಿಯೋಸ್, ಐ20 ನಂತಹ ಹ್ಯಾಚ್‌ಬ್ಯಾಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇವುಗಳ ಹೊರತಾಗಿ, ಕಂಪನಿಯ ಪೋರ್ಟ್‌ಫೋಲಿಯೊವು 'Ioniq 5 EV' ಅನ್ನು ಸಹ ಒಳಗೊಂಡಿದೆ.
Nissan India:ಜಪಾನಿನ ಕಾರು ತಯಾರಕ ನಿಸ್ಸಾನ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ನಿಸ್ಸಾನ್ ಮ್ಯಾಗ್ನೆಟ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈಗ ಕಂಪನಿಯು ತನ್ನ ಬೆಲೆಯನ್ನು ಶೇಕಡಾ 2 ರಷ್ಟು ಹೆಚ್ಚಿಸಲಿದೆ. ಇದು ಕಂಪನಿಯ ಏಕೈಕ ಮೇಡ್ ಇನ್ ಇಂಡಿಯಾ SUV ಆಗಿದೆ. ಕಂಪನಿಯು ಇದನ್ನು ದೇಶೀಯವಾಗಿ ಮಾರಾಟ ಮಾಡುವುದರ ಜೊತೆಗೆ ವಿದೇಶಕ್ಕೂ ರಫ್ತು ಮಾಡುತ್ತಿದೆ.
Audi India: ಐಷಾರಾಮಿ ಕಾರು ತಯಾರಕ ಆಡಿ ಇಂಡಿಯಾ ಕೂಡ ತನ್ನ ಕಾರುಗಳು ಮತ್ತು SUV ಗಳ ಬೆಲೆಗಳನ್ನು ಜನವರಿ 1, 2025 ರಿಂದ ಶೇಕಡಾ 3 ರಷ್ಟು ಹೆಚ್ಚಿಸಲಿದೆ. ಕಂಪನಿಯು ಸ್ಥಳೀಯವಾಗಿ ಆಡಿ A4 ಮತ್ತು A6 ಸೆಡಾನ್‌ಗಳನ್ನು ಹಾಗೂ Audi Q3, Q3 ಸ್ಪೋರ್ಟ್‌ಬ್ಯಾಕ್, Q5 ಮತ್ತು Q7 SUVಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತದೆ. ಇವುಗಳ ಹೊರತಾಗಿ ಕಂಪನಿಯು A5 ಸ್ಪೋರ್ಟ್‌ಬ್ಯಾಕ್, Q8 SUV, ಅದರ ಎಲೆಕ್ಟ್ರಿಕ್ ಉತ್ಪನ್ನಗಳು, e-Tron GT, RS e-Tron GT ನಂತಹ ಆಮದು ಮಾಡಿಕೊಂಡ ಕಾರುಗಳನ್ನು ಮಾರಾಟ ಮಾಡುತ್ತದೆ.
BMW India:ಹೊಸ ವರ್ಷದಿಂದ ಕಾರುಗಳ ಬೆಲೆಯನ್ನು ಶೇ.3ರಷ್ಟು ಹೆಚ್ಚಿಸಲಿರುವ ಕಂಪನಿಗಳ ಪಟ್ಟಿಯಲ್ಲಿ ಬಿಎಂಡಬ್ಲ್ಯು ಇಂಡಿಯಾ ಹೆಸರೂ ಇದೆ. ಕಂಪನಿಯು ಸ್ಥಳೀಯವಾಗಿ BMW '2 ಸೀರಿಸ್ ಗ್ರ್ಯಾನ್ ಕೂಪೆ', '3 ಸೀರಿಸ್ ಗ್ರ್ಯಾನ್ ಲಿಮೋಸಿನ್', 'M340i', '5 ಸೀರಿಸ್ LWB', '7 ಸರಣಿ' ಸೆಡಾನ್ ಕಾರುಗಳು ಹಾಗೂ 'X1', 'X3', 'X5', 'X7' SUV ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗ್ತಿದೆ.