ISRO Sucessfully Docks Satellites: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಸ್ಪಾಡೆಕ್ಸ್ (ಸ್ಪೇಸ್ ಡಾಕಿಂಗ್ ಎಕ್ಸರ್ಸೈಸ್) ಮಿಷನ್ ಅಡಿಯಲ್ಲಿ ಎರಡು ಉಪಗ್ರಹಗಳನ್ನು ಡಾಕಿಂಗ್ ಮಾಡುವ ಪ್ರಕ್ರಿಯೆಯನ್ನು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ನಂತರ, ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಿದೆ.
ಸಂತಸ ಹಂಚಿಕೊಂಡ ಇಸ್ರೋ: ಡಾಕಿಂಗ್ ಪ್ರಕ್ರಿಯೆ ಯಶಸ್ವಿ.. ಸ್ಪೇಸ್ ಕ್ರಾಫ್ಟ್ ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ. ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ದಾಖಲಿಸಿದೆ! ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಪಡುತ್ತೇವೆ! ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4 ನೇ ರಾಷ್ಟ್ರ ಭಾರತವಾಗಿದೆ. ಇಡೀ ತಂಡಕ್ಕೆ ಮತ್ತು ಭಾರತಕ್ಕೆ ಅಭಿನಂದನೆಗಳು ಎಂದು ಇಸ್ರೋ 'ಎಕ್ಸ್' ಪೋಸ್ಟ್ ಮೂಲಕ ತಿಳಿಸಿದೆ.
ಇಸ್ರೋ ಹೇಳಿದ್ದು ಹೀಗೆ: ಡಾಕಿಂಗ್ ನಂತರ ಎರಡು ಉಪಗ್ರಹಗಳನ್ನು ಒಂದೇ ವಸ್ತುವಾಗಿ ನಿಯಂತ್ರಿಸುವುದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಅನ್‌ಡಾಕಿಂಗ್ ಪ್ರಕ್ರಿಯೆ ಮತ್ತು ವಿದ್ಯುತ್ ಟ್ರಾನ್ಸ್ಪರ್ ಪರಿಶೀಲನೆಗಳು ನಡೆಯಲಿವೆ ಎಂದು ಇಸ್ರೋ ಪೋಸ್ಟ್ ಮೂಲಕ ತಿಳಿಸಿದೆ.
SpaDeX Docking Update:
— ISRO (@isro) January 16, 2025
🌟Docking Success
Spacecraft docking successfully completed! A historic moment.
Let’s walk through the SpaDeX docking process:
Manoeuvre from 15m to 3m hold point completed. Docking initiated with precision, leading to successful spacecraft capture.…
ಸ್ಪಾಡೆಕ್ಸ್ ಮಿಷನ್‌ನ ಮಹತ್ವ: ಸ್ಪಾಡೆಕ್ಸ್ ಮಿಷನ್ ಅನ್ನು ಇಸ್ರೋ ಡಿಸೆಂಬರ್ 30, 2024 ರಂದು ಪ್ರಾರಂಭಿಸಿತು. ಇದು ಎರಡು ಸಣ್ಣ ಉಪಗ್ರಹಗಳನ್ನು - SDX01 (ಚೇಸರ್) ಮತ್ತು SDX02 (ಟಾರ್ಗೆಟ್) ಭೂಮಿಯ ಕೆಳ ಕಕ್ಷೆಗೆ ಬಿಟ್ಟಿತು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಡಾಕಿಂಗ್ ತಂತ್ರಜ್ಞಾನವನ್ನು ಪ್ರದರ್ಶಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು.
ಚಂದ್ರಯಾನ-4 ನಂತಹ ಕಾರ್ಯಾಚರಣೆಗಳಲ್ಲಿ ಡಾಕಿಂಗ್ ತಂತ್ರಜ್ಞಾನದ ಅಗತ್ಯವಿದೆ. ಇದು ಚಂದ್ರನಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿ ತರಲು ಪ್ರಮುಖವಾಗಿದೆ. ಅಲ್ಲದೆ ಈ ತಂತ್ರಜ್ಞಾನವು ಭಾರತದ ಬಾಹ್ಯಾಕಾಶ ಕೇಂದ್ರವು "ಭಾರತೀಯ ಬಾಹ್ಯಾಕಾಶ ನಿಲ್ದಾಣ" ಸ್ಥಾಪನೆಗೆ ಸಹ ಮಹತ್ವದ್ದಾಗಿದೆ. ಇದನ್ನು 2028 ರ ವೇಳೆಗೆ ಉಡಾವಣೆ ಮಾಡಲು ಯೋಜಿಸಲಾಗಿದೆ.
Dr. V. Narayanan, Secretary DOS, Chairman Space Commission and Chairman ISRO, congratulated the team ISRO.#SPADEX #ISRO pic.twitter.com/WlPL8GRzNu
— ISRO (@isro) January 16, 2025
ಡಾಕಿಂಗ್ ಪ್ರಕ್ರಿಯೆಯ ಸವಾಲುಗಳು: ಕಾರ್ಯಾಚರಣೆಯ ಅಡಿಯಲ್ಲಿ ಮೊದಲು ಎರಡೂ ಉಪಗ್ರಹಗಳನ್ನು 20 ಕಿಲೋಮೀಟರ್ ದೂರದಲ್ಲಿ ಇರಿಸಲಾಯಿತು. ನಂತರ ಚೇಸರ್ ಉಪಗ್ರಹವು ಟಾರ್ಗೆಟ್ ಉಪಗ್ರಹವನ್ನು ಸಮೀಪಿಸಿ 5 ಕಿಮೀ, 1.5 ಕಿಮೀ, 500 ಮೀ, 225 ಮೀ, 15 ಮೀ ಮತ್ತು ಕೊನೆದಾಗಿ 3 ಮೀ ದೂರವನ್ನು ಕ್ರಮಿಸಿತು. ಇದಾದ ನಂತರ ಎರಡೂ ಉಪಗ್ರಹಗಳನ್ನು ಒಟ್ಟಿಗೆ ಸಂಪರ್ಕಿಸಲಾಯಿತು. ಡಾಕಿಂಗ್ ನಂತರ ಉಪಗ್ರಹಗಳ ನಡುವಿನ ವಿದ್ಯುತ್ ವರ್ಗಾವಣೆಯನ್ನು ಮಾಡಲಾಯಿತು. ನಂತರ ಅವುಗಳ ಸಂಬಂಧಿತ ಪೇಲೋಡ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಎರಡನ್ನೂ ಬೇರ್ಪಡಿಸಲಾಯಿತು.
SpaDeX Docking Update:
— ISRO (@isro) January 16, 2025
Post docking, control of two satellites as a single object is successful.
Undocking and power transfer checks to follow in coming days.
#SPADEX #ISRO
ಭವಿಷ್ಯದ ಯೋಜನೆಗಳು: ಚಂದ್ರಯಾನ-4 ಕಾರ್ಯಾಚರಣೆಯಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರ್ಯಾಚರಣೆಯಲ್ಲಿ ಎರಡು ಮಾಡ್ಯೂಲ್‌ಗಳನ್ನು ಪ್ರತ್ಯೇಕ ಉಡಾವಣಾ ವಾಹನಗಳಿಂದ ಉಡಾಯಿಸಲಾಗುವುದು. ಇವು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ನಲ್ಲಿ ಡಾಕ್ ಆಗುತ್ತವೆ. ಚಂದ್ರನ ಮೇಲೆ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿ ತರಲು ಡಾಕಿಂಗ್ ತಂತ್ರಜ್ಞಾನವನ್ನು ಬಳಸಲಾಗುವುದು.
ಇದಲ್ಲದೆ ಮಾನವ ಕಾರ್ಯಾಚರಣೆಗಳು ಮತ್ತು ಬಾಹ್ಯಾಕಾಶ ಕೇಂದ್ರಗಳಿಗೂ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಗಳಿವೆ. ಸ್ಪಾಡೆಕ್ಸ್ ಮಿಷನ್‌ನ ಯಶಸ್ವಿ ಡಾಕಿಂಗ್ ಪರೀಕ್ಷೆಯು ಭಾರತವು ಬಾಹ್ಯಾಕಾಶ ವಿಜ್ಞಾನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಲು ಸಹಾಯ ಮಾಡಿದೆ. ಈ ಮಿಷನ್ ಭವಿಷ್ಯದಲ್ಲಿ ಇಸ್ರೋದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಗಳಿಗೆ ಒಂದು ಮೈಲಿಗಲ್ಲಾಗಲಿದೆ.
ಓದಿ: ಸ್ಪಾಡೆಕ್ಸ್ ಮಿಷನ್ ಪ್ರಾಯೋಗಿಕ ಪ್ರಯತ್ನ ಯಶಸ್ವಿ: ಉಪಗ್ರಹಗಳನ್ನು 3 ಮೀಟರ್ ಸಮೀಪಕ್ಕೆ ತಂದ ಇಸ್ರೋ