ಮೈಸೂರು: ನಾಡ ಅಧಿದೇವತೆ ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಚಾಮುಂಡೇಶ್ವರಿ ಸನ್ನಿಧಿಗೆ ಆಗಮಿಸಿದ ನಟ ವಿಶೇಷ ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿಯ ಪರಮ ಭಕ್ತರಾದ ನಟ ದರ್ಶನ್ ಪ್ರತೀ ವರ್ಷ ಅಷಾಢ ಮಾಸದ ಸಂದರ್ಭ ತಪ್ಪದೇ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಬರಲು ಸಾಧ್ಯವಾಗಲಿಲ್ಲ. ಪ್ರಕರಣವೊಂದರಲ್ಲಿ ಸಿಲುಕಿದ ಹಿನ್ನೆಲೆ ಕಳೆದ 8 ತಿಂಗಳಿನಿಂದ ಚಾಮುಂಡಿ ಬೆಟ್ಟಕ್ಕೆ ಅಗಮಿಸಿರಲಿಲ್ಲ. ಫೈನಲಿ ಇಂದು ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಿನ್ನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಬೆನ್ನುನೋವಿಗೆ ವೈದರ ಸಲಹೆ ಪಡೆದು ಬಂದ ಬಳಿಕ ಮಂಡ್ಯ ಜಿಲ್ಲೆಯ ಶಕ್ತಿ ದೇವತೆ ಆರತಿ ಉಕ್ಕಡದಮ್ಮನ ದರ್ಶನ ಪಡೆದಿದ್ದರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು
ಬುಧವಾರದಂದು ಬೆನ್ನು ನೋವಿನ ಹಿನ್ನೆಲೆ, ವೈದ್ಯರ ಸಲಹೆ ಪಡೆಯಲು ತಮ್ಮ ತೋಟದ ಮನೆಯಿಂದ ನಗರದ ಮಣಿಪಾಲ ಆಸ್ಪತ್ರೆಗೆ ಆಗಮಿಸಿದ್ದರು. ತಾವು ಹಿಂದಿನಿಂದಲೂ ಸಲಹೆ ಪಡೆಯುತ್ತಿದ್ದ ಡಾ.ಅಜಯ್ ಹೆಗ್ಡೆ ಅವರನ್ನು ಭೇಟಿಯಾಗಿ ತಮ್ಮ ಆರೋಗ್ಯದ ಬಗ್ಗೆ ಚರ್ಚೆ ನಡೆಸಿ. ಬಳಿಕ ಅವರಿಂದ ಕೆಲ ಸಲಹೆ ಸೂಚನೆ ಪಡೆದು ವಾಪಸ್ ಆಗಿದ್ದಾರೆ. ಮಂಗಳವಾರದಂದು ತಮ್ಮ ತೋಟದ ಮನೆಯಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್