ETV Bharat / bharat

ಚುನಾವಣಾ ಪ್ರಚಾರದಲ್ಲಿ AI ತಂತ್ರಜ್ಞಾನ ಜವಾಬ್ದಾರಿಯುತವಾಗಿ ಬಳಸಿ: ಚುನಾವಣಾ ಆಯೋಗದ ಸಲಹೆ - AI TECHNOLOGY

ಎಐ ನಿಂದ ರಚಿಸಲಾದ ಕಂಟೆಂಟ್​ ಮೇಲೆ ಲೇಬಲ್ ಹಾಕುವಂತೆ ಚುನಾವಣಾ ಆಯೋಗವು ಸಲಹೆ ನೀಡಿದೆ.

ಚುನಾವಣಾ ಪ್ರಚಾರದಲ್ಲಿ AI ತಂತ್ರಜ್ಞಾನ ಜವಾಬ್ದಾರಿಯುತವಾಗಿ ಬಳಸಿ: ಚು. ಆಯೋಗ ಸಲಹೆ
ಚುನಾವಣಾ ಪ್ರಚಾರದಲ್ಲಿ AI ತಂತ್ರಜ್ಞಾನ ಜವಾಬ್ದಾರಿಯುತವಾಗಿ ಬಳಸಿ: ಚು. ಆಯೋಗ ಸಲಹೆ (ani)
author img

By ANI

Published : Jan 16, 2025, 5:30 PM IST

ನವದೆಹಲಿ: ಚುನಾವಣಾ ಪ್ರಚಾರದ ಸಮಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಮತ್ತು ಪಾರದರ್ಶಕವಾಗಿ ಬಳಸುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ. ಪ್ರಚಾರದಲ್ಲಿ ಬಳಸಿಕೊಳ್ಳಲಾಗುವ ಯಾವುದೇ ಕಂಟೆಂಟ್​ ಎಐ ಉತ್ಪಾದಿಸಿದ ಸಂಶ್ಲೇಷಿತ ಕಂಟೆಂಟ್ ಆಗಿದ್ದಲ್ಲಿ ಆ ಮಾಹಿತಿಯನ್ನು​ ಸೂಕ್ತವಾಗಿ ಬಹಿರಂಗಪಡಿಸಲು ಅದರ ಮೇಲೆ ಲೇಬಲ್ ಮಾಡುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮನವಿ ಮಾಡಿದೆ.

ರಾಜಕೀಯ ಪ್ರಚಾರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಸಂಶ್ಲೇಷಿತವಾಗಿ ರಚಿಸಲಾದ ಕಂಟೆಂಟ್​ (synthetically generated content)ಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಮತದಾರರ ಅಭಿಪ್ರಾಯಗಳು ಹಾಗೂ ನಂಬಿಕೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಪ್ರಚಾರದಲ್ಲಿ ಎಐ - ರಚಿತ ಕಂಟೆಂಟ್ ಬಳಸುವಾಗ ಪಾರದರ್ಶಕತೆ ಮತ್ತು ಜವಾಬ್ದಾರಿಯುತವಾಗಿ ವರ್ತಿಸುವಂತೆ ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದೆ.

ತಪ್ಪು ಮಾಹಿತಿ ಹರಡುವಲ್ಲಿ ಎಐ ಮತ್ತು ಡೀಪ್ ಫೇಕ್​ಗಳ ಅಪಾರ ಸಾಮರ್ಥ್ಯದ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಪದೇ ಪದೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ದೆಹಲಿ ವಿಧಾನಸಭಾ ಚುನಾವಣೆಗಳನ್ನು ಘೋಷಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಇಸಿ, ತಪ್ಪು ಮಾಹಿತಿ ಹರಡುವ ಯಾವುದೇ ಪ್ರಯತ್ನಗಳ ಬಗ್ಗೆ ಜಾಗರೂಕವಾಗಿರುವಂತೆ ಮತ್ತು ಅವುಗಳನ್ನು ತಡೆಗಟ್ಟಲು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಆಡಳಿತಕ್ಕೆ ನಿರ್ದೇಶನ ನೀಡಿದರು. ಪ್ರಚಾರದಲ್ಲಿ ಘನತೆ ಮತ್ತು ಸಭ್ಯತೆ ಕಾಪಾಡಿಕೊಳ್ಳುವಂತೆ ಅವರು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದರು.

ಈ ವಿಷಯದಲ್ಲಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಚುನಾವಣಾ ಆಯೋಗವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಐ ಕಂಟೆಂಟ್​ ಲೇಬಲ್ ಮಾಡುವ ಮತ್ತು ಆ ಬಗ್ಗೆ ಮಾಹಿತಿ ಬಹಿರಂಗಪಡಿಸುವ ಬಗ್ಗೆ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಹೊಸ ಸಲಹೆ ಪ್ರಕಾರ ರಾಜಕೀಯ ಪಕ್ಷಗಳು ಎಐ ತಂತ್ರಜ್ಞಾನಗಳಿಂದ ಉತ್ಪತ್ತಿಯಾದ ಅಥವಾ ಗಮನಾರ್ಹವಾಗಿ ಮಾರ್ಪಡಿಸಿದ ಯಾವುದೇ ಚಿತ್ರಗಳು, ವಿಡಿಯೋಗಳು, ಆಡಿಯೋ ಅಥವಾ ಇತರ ವಸ್ತುಗಳ ಮೇಲೆ ಎಐ-ಜನರೇಟೆಡ್ ಅಥವಾ ಡಿಜಿಟಲ್ ವರ್ಧಿತ ಅಥವಾ ಸಿಂಥೆಟಿಕ್ ಕಂಟೆಂಟ್ ಎಂಬುದಾಗಿ ಸ್ಪಷ್ಟವಾಗಿ ಲೇಬಲ್ ಮಾಡಬೇಕಾಗುತ್ತದೆ. ಸಂಶ್ಲೇಷಿತ ಕಂಟೆಂಟ್ ಅನ್ನು ಎಲ್ಲಿ ಬಳಸಲಾಗುತ್ತದೆಯೋ ಅಲ್ಲಿ ಪ್ರಚಾರ ಜಾಹೀರಾತುಗಳು ಅಥವಾ ಪ್ರಚಾರ ವಿಷಯದ ಪ್ರಸಾರದ ಸಮಯದಲ್ಲಿ ರಾಜಕೀಯ ಪಕ್ಷಗಳು ಹಕ್ಕು ನಿರಾಕರಣೆಗಳನ್ನು ಕೂಡ ಸೇರಿಸಬೇಕಾಗುತ್ತದೆ.

ಎಐ ಮತ್ತು ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಆಯೋಗದ ಪ್ರಯತ್ನಗಳಿಗೆ ಅನುಗುಣವಾಗಿ ಈ ಸಲಹೆ ನೀಡಲಾಗಿದೆ. 2024 ರ ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ, ಆಯೋಗವು ಸಾಮಾಜಿಕ ಮಾಧ್ಯಮ ವೇದಿಕೆಗಳ ಜವಾಬ್ದಾರಿಯುತ ಮತ್ತು ನೈತಿಕ ಬಳಕೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಇದನ್ನೂ ಓದಿ: ಚೆನ್ನೈನಲ್ಲಿ ಎನ್​ಕೌಂಟರ್: ವಾಂಟೆಡ್ ಕ್ರಿಮಿನಲ್ 'ಬಾಂಬ್' ಸರವಣನ್ ಬಂಧನ - ENCOUNTER IN CHENNAI

ETV Bharat Logo

Copyright © 2025 Ushodaya Enterprises Pvt. Ltd., All Rights Reserved.