ETV Bharat / bharat

ಕಾಂಗ್ರೆಸ್​ 4ನೇ ಗ್ಯಾರಂಟಿ: ₹500 ಗ್ಯಾಸ್​ ಸಿಲಿಂಡರ್​, 300 ಯೂನಿಟ್​ ವಿದ್ಯುತ್​, ಪಡಿತರ ಉಚಿತ - CONGRESS 4TH GUARANTEE

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ತನ್ನ ನಾಲ್ಕನೇ ಗ್ಯಾರಂಟಿಯನ್ನು ಇಂದು ಘೋಷಿಸಿತು.

ಕಾಂಗ್ರೆಸ್​ 4ನೇ ಗ್ಯಾರಂಟಿ
ಕಾಂಗ್ರೆಸ್​ 4ನೇ ಗ್ಯಾರಂಟಿ (congress x handle)
author img

By ANI

Published : Jan 16, 2025, 5:25 PM IST

ನವದೆಹಲಿ: ದೆಹಲಿ ಚುನಾವಣಾ ಕಣದಲ್ಲಿ ಕಾಂಗ್ರೆಸ್​ ತನ್ನ ನಾಲ್ಕನೇ ಭರವಸೆಯನ್ನು ಗುರುವಾರ ಘೋಷಿಸಿದೆ. ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್, ಉಚಿತ ಪಡಿತರ ಮತ್ತು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಈ ಘೋಷಣೆ ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನೀಡಿದ ಎಲ್ಲ ಭರವಸೆಗಳನ್ನು ದೆಹಲಿಯಲ್ಲಿ ಜಾರಿ ಮಾಡಲಾಗುವುದು. ಸತತ 3 ಬಾರಿ ಆಡಳಿತ ನಡೆಸಿದರೂ, ರಾಷ್ಟ್ರ ರಾಜಧಾನಿಯ ಜನರ ಜೀವನವನ್ನು ಸುಧಾರಿಸಲು ಪ್ರಧಾನಿ ಮೋದಿ ಮತ್ತು ಅರವಿಂದ್​ ಕೇಜ್ರಿವಾಲ್ ಅವರ ಸರ್ಕಾರಗಳು ವಿಫಲವಾಗಿದೆ ಎಂದು ಟೀಕಿಸಿದರು.

"ಮೋದಿ ಮತ್ತು ಕೇಜ್ರಿವಾಲ್ ಅವರ ನಡುವೆ ಹೆಸರಿನ ವ್ಯತ್ಯಾಸ ಬಿಟ್ಟರೆ ಏನೂ ಇಲ್ಲ. ಇಬ್ಬರೂ ಸುಳ್ಳು ಹೇಳುತ್ತಾರೆ. ಕೇಜ್ರಿವಾಲ್ ಮೂರು ಬಾರಿ ಸಿಎಂ ಆಗಿದ್ದಾರೆ. ಮೋದಿ ಕೂಡ ಮೂರು ಬಾರಿ ಪ್ರಧಾನಿಯಾಗಿದ್ದಾರೆ. ಆದರೆ ದೆಹಲಿ ಅಭಿವೃದ್ಧಿಯಲ್ಲಿ ಅವರ ಸಾಧನೆ ಶೂನ್ಯವಾಗಿದೆ. ದೆಹಲಿಯು ವಾಸಿಸಲು ಸೂಕ್ತವಲ್ಲದ ಸ್ಥಿತಿ ಇದೆ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಅನ್ನು ಗೆಲ್ಲಿಸುವ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕು ಎಂದು ಮನವಿ ಮಾಡಿದರು.

ಇತರ ಭರವಸೆಗಳು: ಕಾಂಗ್ರೆಸ್​ ತನ್ನ ಮೊದಲ ಭರವಸೆಯಾದ ಪ್ಯಾರಿ ದೀದಿ ಯೋಜನೆಯನ್ನು ಜನವರಿ 6 ರಂದು ಪ್ರಕಟಿಸಿತು. ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಮೂಲಕ ಅನಾವರಣವಾದ ಈ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಸಿಗಲಿದೆ.

ಎರಡನೇ ಗ್ಯಾರಂಟಿಯಾದ 'ಜೀವನ್ ರಕ್ಷಾ ಯೋಜನೆ'ಯನ್ನು ಜನವರಿ 8 ರಂದು ಘೋಷಿಸಲಾಯಿತು. ಇದರಡಿ, ದೆಹಲಿಯ ಪ್ರತಿ ವ್ಯಕ್ತಿಗೆ 25 ಲಕ್ಷ ರೂ.ಗಳ ಆರೋಗ್ಯ ವಿಮೆ ನೀಡುವುದಾಗಿ ಭರವಸೆ ನೀಡಿದೆ.

ಜನವರಿ 12 ರಂದು, ಕಾಂಗ್ರೆಸ್ ತನ್ನ ಮೂರನೇ ಗ್ಯಾರಂಟಿ 'ಯುವ ಉಡಾನ್ ಯೋಜನೆ'ಯನ್ನು ಅನಾವರಣಗೊಳಿಸಿತು. ಚುನಾವಣೆಯಲ್ಲಿ ಪಕ್ಷ ಗೆದ್ದರೆ ದೆಹಲಿಯ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಒಂದು ವರ್ಷದವರೆಗೆ ಮಾಸಿಕ 8,500 ರೂ.ಗಳ ಸಹಾಯಧನ ನೀಡುವುದಾಗಿ ಭರವಸೆ ನೀಡಿದೆ.

ದೆಹಲಿ ವಿಧಾನಸಭಾ ಚುನಾವಣೆಯು ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. ದೆಹಲಿಯಲ್ಲಿ ಸತತ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಒಂದೂ ಸ್ಥಾನ ಗೆಲ್ಲಲಾಗದೇ ಹೀನಾಯ ಪ್ರದರ್ಶನ ನೀಡಿದೆ. 2020 ರ ಚುನಾವಣೆಯಲ್ಲಿ ಆಪ್​ 70 ಸ್ಥಾನಗಳಲ್ಲಿ 62 ರಲ್ಲಿ ಗೆದ್ದು ಪ್ರಾಬಲ್ಯ ಮೆರೆದಿತ್ತು. ಬಿಜೆಪಿ 8 ಸ್ಥಾನಗಳಲ್ಲಿ ಜಯ ಕಂಡಿದೆ.

ಇದನ್ನೂ ಓದಿ: ದೆಹಲಿ ವಿಧಾನಸಭೆ ಚುನಾವಣೆ: ಎಲ್ಲ 70 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್​

ಓದಿ: ದೆಹಲಿ ಚುನಾವಣೆ: ನಾಮಪತ್ರ ಸಲ್ಲಿಸಿದ ಸಿಸೋಡಿಯಾ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದ ಮಾಜಿ ಡಿಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.