ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ ವಕ್ಫ್ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ವಕ್ಫ್ ಕರಡು ಮಸೂದೆಯನ್ನು ಸ್ವೀಕರಿಸಲಾಗಿದೆ. ಮಸೂದೆಯ ಪರವಾಗಿ 14 ಹಾಗೂ ವಿರುದ್ಧ 11 ಮತಗಳು ಚಲಾವಣೆಯಾದವು. ಜೆಪಿಸಿಯ ವಿರೋಧ ಪಕ್ಷದ ಸದಸ್ಯರು ಇಂದು (ಜ.29) ಸಂಜೆ 4 ಗಂಟೆಯೊಳಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ದಾಖಲಿಸಬಹುದು.
ಸಭೆಗೂ ಮುನ್ನ ಮಾತನಾಡಿದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್, ಸಮಿತಿಯ ಕರಡು ವರದಿ ಮತ್ತು ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಆವೃತ್ತಿಯನ್ನು ಬುಧವಾರದ ಸಭೆಯಲ್ಲಿ ಅಂಗೀಕರಿಸಲಾಗುವುದು ಎಂದು ಹೇಳಿದ್ದರು. ಬಹುಶಃ ಈ ಸಭೆಯು ಸಮಿತಿಯ ಕೊನೆಯ ಸಭೆಯಾಗಬಹುದು ಎನ್ನಲಾಗಿದೆ.
#WATCH | Delhi | JPC on Waqf Amendment Bill 2024 members interact with committee chairman and BJP MP Jagadambika Pal. pic.twitter.com/4NyEtKbz0S
— ANI (@ANI) January 29, 2025
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳೊಂದಿಗೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಜೆಪಿಸಿ ಸೋಮವಾರ ಅಂಗೀಕರಿಸಿತ್ತು. ವಿರೋಧ ಪಕ್ಷದ ಸಂಸದರು 44 ಬದಲಾವಣೆಗಳನ್ನು ಪ್ರಸ್ತಾಪಿಸಿದ್ದರು. ಆದರೆ, ಅವುಗಳನ್ನು ತಿರಸ್ಕರಿಸಲಾಯಿತು. ಇದು ರಾಜಕೀಯ ಪಕ್ಷಗಳ ಕೋಲಾಹಲಕ್ಕೆ ಕಾರಣವಾಗಿತ್ತು. ಸದ್ಯ ಪ್ರಸ್ತಾವಿತ ಬದಲಾವಣೆಗಳ ಮೇಲೆ ಇಂದು ಮತದಾನ ನಡೆಯಿತು.
ದೇಶಾದ್ಯಂತ ವಕ್ಫ್ ಮಂಡಳಿಗಳನ್ನು ನಿರ್ವಹಿಸುವ ವಿಧಾನದಲ್ಲಿ ಸುಧಾರಣೆಗಳನ್ನು ತರಲು ಉದ್ದೇಶಿಸಲಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ಸೋಮವಾರ ಜೆಪಿಸಿ 16:10 ಸದಸ್ಯರ ಮತಗಳ ಅಂತರದಿಂದ (ಎನ್ಡಿಎಯಿಂದ 16 ಮತ್ತು ವಿರೋಧ ಪಕ್ಷಗಳಿಂದ 10) ಅಂಗೀಕರಿಸಿತ್ತು.
ಪ್ರಸ್ತಾವಿತ ಮಸೂದೆಯಲ್ಲಿನ ಒಂದು ತಿದ್ದುಪಡಿಯು ಆಸ್ತಿಯು ವಕ್ಫ್ ಆಸ್ತಿಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲು ಅಧಿಕಾರಿಯೊಬ್ಬರನ್ನು ನೇಮಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಗುರಿ ಹೊಂದಿದೆ. ಹಿಂದಿನ ಕಾನೂನಿನ ಪ್ರಕಾರ ಈ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದೆ. 1995ರ ವಕ್ಫ್ ಕಾಯ್ದೆಯಲ್ಲಿ ಆಸ್ತಿಯ ಮಾಲೀಕತ್ವ ನಿರ್ಧರಿಸುವ ಅಧಿಕಾರವನ್ನು ಸರ್ವೇ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರಿಗೆ ನೀಡಲಾಗಿತ್ತು.
#WATCH | Chairman of JPC on Waqf (Amendment) Bill, 2024, BJP MP Jagdambika Pal says," the draft report and amended bill has been adopted by a majority. now we will present it before the speaker tomorrow ..." pic.twitter.com/uGBWiNma4X
— ANI (@ANI) January 29, 2025
ಪ್ರಸ್ತುತ ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನೂ ಸಮಿತಿ ಅನುಮೋದಿಸಿದೆ.
ತಿದ್ದುಪಡಿ ಮಸೂದೆಯಲ್ಲಿ 'ಕಡ್ಡಾಯ' ಎಂಬ ಪದವನ್ನು ಕೈಬಿಡಲಾಗಿದ್ದು, ಓರ್ವ ವಿದ್ವಾಂಸ ಸೇರಿದಂತೆ ಮಂಡಳಿಯ ಸದಸ್ಯರ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ವರದಿಗಳ ಪ್ರಕಾರ, ವಕ್ಫ್ ಮಸೂದೆಯಲ್ಲಿ ಒಟ್ಟು 66 ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಆಡಳಿತಾರೂಢ ಬಿಜೆಪಿ ಸಂಸದರು 23 ಮತ್ತು ವಿರೋಧ ಪಕ್ಷದ ಸಂಸದರು 44 ಬದಲಾವಣೆಗಳನ್ನು ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: ದೆಹಲಿ ಚುನಾವಣೆ: ಭರಪೂರ ಉಚಿತ ಕೊಡುಗೆ, ಅಭಿವೃದ್ಧಿ ಮಂತ್ರ - ಮತದಾರರ ಓಲೈಕೆಗೆ ಪಕ್ಷಗಳ ಕಸರತ್ತು - DELHI ELECTIONS