ETV Bharat / state

ವಾಟ್ಸ್‌ಆ್ಯಪ್‌ನಲ್ಲಿ 'ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗವಾಗಿದೆ' ಎಂದು ಮೆಸೇಜ್‌ ಕಳುಹಿಸಿ ಸುಲಿಗೆ - FRAUD CASE

ನಿಮ್ಮ ಮೇಲೆ ಪ್ರಯೋಗವಾಗಿರುವ ಬ್ಲ್ಯಾಕ್​ ಮ್ಯಾಜಿಕ್​ ಅನ್ನು ಪರಿಹರಿಸುತ್ತೇನೆ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಗೃಹಿಣಿಯಿಂದ 80 ಸಾವಿರ ರೂ. ಸುಲಿಗೆ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jan 29, 2025, 12:43 PM IST

ಬೆಂಗಳೂರು: ದಿನಕ್ಕೊಂದರಂತೆ ಹೊಸ ಹೊಸ ಮಾರ್ಗಗಳ ಮೂಲಕ ಸಾರ್ವಜನಿಕರ‌ ಜೇಬಿಗೆ ಕನ್ನ ಹಾಕುತ್ತಿರುವ ಖದೀಮರು, ಬ್ಲ್ಯಾಕ್ ಮ್ಯಾಜಿಕ್ ಹೆಸರಿನಲ್ಲಿ ಬೆದರಿಸಿ ಹಣ ವರ್ಗಾಯಿಸಿಕೊಂಡ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.

ಬ್ಲ್ಯಾಕ್ ಮ್ಯಾಜಿಕ್ ಮಾಡಲಾಗಿದೆ ಎಂದು ಗೃಹಿಣಿಯೊಬ್ಬರಿಗೆ ಬೆದರಿಸಿ, ಅದನ್ನು ಪರಿಹಾರ ಮಾಡುವುದಾಗಿ ಅಪರಿಚಿತನೋರ್ವ 80 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾನೆ. 29 ವರ್ಷದ ಮಹಿಳೆ ನೀಡಿರುವ ದೂರಿನನ್ವಯ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ದೂರುದಾರರಿಗೆ ಜನವರಿ 21ರಂದು ಅಪರಿಚಿತ ನಂಬರ್‌ನಿಂದ "ಹಲೋ ಫ್ರೆಂಡ್" ಎಂಬ ವಾಟ್ಸ್‌ಆ್ಯಪ್ ಸಂದೇಶ ಬಂದಿದೆ. ಯಾರು ಎಂದು ದೂರುದಾರರು ವಿಚಾರಿಸಿದಾಗ, "ಬಾಲ್ಯದಿಂದಲೂ ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗವಾಗಿದೆ. ಅದು ನಿಮ್ಮ ಪತಿಯ ಮೇಲೂ ಪ್ರಯೋಗವಾಗಲಿದೆ" ಎಂದು ಎಂದು ಬೆದರಿಸಿದ್ದಾನೆ. ಬಳಿಕ "ಬ್ಲ್ಯಾಕ್ ಮ್ಯಾಜಿಕ್‌ ಅನ್ನು ನಾನು ಪರಿಹರಿಸುತ್ತೇನೆ, ಆದರೆ ಹಣ ಕೊಡಬೇಕಾಗುತ್ತದೆ" ಎಂದಿದ್ದಾನೆ. ಆತನ ಮಾತಿನಿಂದ ಬೆದರಿದ ದೂರುದಾರ ಮಹಿಳೆ ತಕ್ಷಣ ಎಟಿಎಂಗೆ ತೆರಳಿ 80 ಸಾವಿರ ರೂ. ವಿತ್‌ಡ್ರಾ ಮಾಡಿ ಆರೋಪಿ ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ. ಇದಾದ ಬಳಿಕವೂ ಆರೋಪಿ ವಾಟ್ಸ್‌ಆ್ಯಪ್​ ಸಂದೇಶಗಳನ್ನು ಕಳಿಸುತ್ತಿದ್ದು, ಬೆದರಿಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನನ್ವಯ ಅಪರಿಚಿತ ವಂಚಕನ ವಿರುದ್ಧ ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 308 (ಬೆದರಿಸಿ ಸುಲಿಗೆ), ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸೈಬರ್ ವಂಚನೆ; 10 ಸಾವಿರ ರೂಪಾಯಿ ಹಿಂಪಡೆಯಲು ಹೋಗಿ 20 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.