Sex And Pregnancy In Space :ಅಂತರಿಕ್ಷ - ಮಾನವರಿಗೆ ಹೆಚ್ಚಿನ ಆಸ್ತಕಿ ನೀಡುವ ಅಂಶವಾಗಿದೆ. ಬಾಹ್ಯಾಕಾಶದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ನಿಮಗೆ ಗೊತ್ತಿರುವಂತೆ ಭಾರತ ಈಗ ಗಗನಯಾನ ಮಿಷನ್ನತ್ತ ಗಮನ ಹರಿಸಿದೆ. ಅಷ್ಟೇ ಅಲ್ಲ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಇನ್ನು ಭಾರತ ಸೇರಿದಂತೆ ಹಲವಾರು ದೇಶಗಳು ಗ್ರಹಗಳ ಕುರಿತು ಸಂಶೋಧನೆ ನಡೆಸುತ್ತಿವೆ. ಮಂಗಳ ಗ್ರಹವು ಭೂಮಿಯನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆ ಸಂಶೋಧನೆಯ ನೆಲೆಯಾಗಿ ಮಾರ್ಪಟ್ಟಿರುವ ಬಾಹ್ಯಾಕಾಶದ ಕುರಿತು ಮನುಷ್ಯನ ತಲೆಯಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತಿವೆ. ಈಗ ಗಗನಯಾತ್ರಿಗಳ ಮಧ್ಯೆ ಲೈಂಗಿಕ ಕ್ರಿಯೆ ಸಾಧ್ಯವೇ, ಮಹಿಳೆಯರು ಗರ್ಭಿಣಿಯಾಗಬಹುದೇ, ಅಂತರಿಕ್ಷದಲ್ಲಿ ಜನಸಿದ ಮಕ್ಕಳು ಹೇಗಿರುತ್ತಾರೆ ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳುವ ಕುತೂಹಲ ಬಹಳಷ್ಟು ಜನರಿಗೆ ಇರುತ್ತದೆ.
ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ?: ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಗರ್ಭಿಣಿಯಾಗಲು ಸಾಧ್ಯವೇ?.. ಅಂದರೆ, ಆದಷ್ಟು ಸಾಧ್ಯವಾಗಬಹುದು. ಆದರೆ ಬಾಹ್ಯಾಕಾಶದಲ್ಲಿನ ವಿಭಿನ್ನ ಹವಾಮಾನ ಪರಿಸ್ಥಿತಿಗಳು ಗರ್ಭಿಣಿ ಮಹಿಳೆ ಮತ್ತು ಅವಳ ಭ್ರೂಣಕ್ಕೆ ಅಪಾಯವನ್ನುಂಟು ಮಾಡುತ್ತವೆ. ಗುರುತ್ವಾಕರ್ಷಣೆಯ ಕೊರತೆ ಮತ್ತು ಭಾರೀ ವಿಕಿರಣವು ಗರ್ಭಾಶಯದಲ್ಲಿನ ಭ್ರೂಣದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯದ ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದೆ. ಪ್ರಸ್ತುತ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ನಿರ್ದಿಷ್ಟ ನೀತಿಯನ್ನು ಹೊಂದಿಲ್ಲ. ಇದುವರೆಗೆ ಯಾವುದೇ ನಾಸಾ ಗಗನಯಾತ್ರಿಗಳು ಬಾಹ್ಯಾಕಾಶ ಯಾತ್ರೆಯಲ್ಲಿ ಇದನ್ನು ಮಾಡಿಲ್ಲ ಎಂಬುದು ಗಮನಾರ್ಹ.
ಮೂಳೆ ಸಾಂದ್ರತೆಯ ಕಡಿಮೆಯಾಗುವ ಸಮಸ್ಯೆ:ಬಾಹ್ಯಾಕಾಶದಲ್ಲಿ ಜನಿಸಿದ ಶಿಶುಗಳು ಹುಟ್ಟುವಾಗಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಬಹುದುದಾಗಿದೆ. ಗುರುತ್ವಾಕರ್ಷಣೆಯ ಕೊರತೆಯಿಂದಾಗಿ, ಬಾಹ್ಯಾಕಾಶದಲ್ಲಿ ಜನಿಸಿದ ಶಿಶುಗಳ ಮೂಳೆ ಸಾಂದ್ರತೆಯು ಕಡಿಮೆಯಾಗುತ್ತವೆ. ಬಾಹ್ಯಾಕಾಶ ಪರಿಸರದಲ್ಲಿ ಆರು ತಿಂಗಳ ಕಾಲ ಕಳೆದ ನಂತರ ಗಗನಯಾತ್ರಿಗಳ ಮೂಳೆ ಸಾಂದ್ರತೆಯು ಸರಾಸರಿ 12 ಪ್ರತಿಶತದಷ್ಟು ಕಡಿಮೆಯಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಮಗು ಬಾಹ್ಯಾಕಾಶದಲ್ಲಿ ಜನಿಸುವ ಹೊತ್ತಿಗೆ ಮೂಳೆ ಸಾಂದ್ರತೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಪೆಲ್ವಿಕ್ ಮೂಳೆಗಳು ಬಹಳ ದುರ್ಬಲಗೊಳ್ಳುತ್ತವೆ. ಹೆರಿಗೆಯ ಸಮಯದಲ್ಲಿ ಮಗುವಿನ ಮೂಳೆಗಳು ಮುರಿಯುವ ಅಪಾಯವಿರುತ್ತದೆ. ಅಂತರಿಕ್ಷ ರೆಡಿಯೇಶನ್ ಪ್ರಭಾವದಿಂದ ಮಹಿಳಾ ಗಗನಯಾತ್ರಿ ಗರ್ಭದಲ್ಲಿರುವ ಭ್ರೂಣದಲ್ಲಿ ಆನುವಂಶಿಕ ದೋಷಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇತರ ಆರೋಗ್ಯ ಸಮಸ್ಯೆಗಳೂ ಸಹ ಮಗುವಿಗೆ ಬರಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ.