Paytm Solar Soundbox: ಪೇಟಿಎಂ ಭಾರತದ ಪ್ರಮುಖ ಯುಪಿಐ ಸಂಗ್ರಾಹಕಗಳಲ್ಲಿ ಒಂದು. ಡಿಜಿಟಲ್ ಪಾವತಿಗಳತ್ತ ಒಲವು ಹೆಚ್ಚುತ್ತಿರುವ ಸಮಯದಲ್ಲಿ ಪೇಟಿಎಂ ಇಂಟರ್ನ್ಯಾಷನಲ್ ಇತ್ತೀಚೆಗೆ ಯುಪಿಐ ಪಾವತಿಗಳನ್ನು ಪ್ರಾರಂಭಿಸಿದೆ. ಇದು ಭಾರತೀಯರು ವಿದೇಶಗಳಲ್ಲಿಯೂ ಪೇಟಿಎಂ ಸೌಲಭ್ಯವನ್ನು ಬಳಸಲು ಅನುಕೂಲ ಕಲ್ಪಿಸಿದೆ.
ಇತ್ತೀಚೆಗೆ ಪೇಟಿಎಂನ ಪೋಷಕ ಕಂಪನಿ 'ಒನ್97 ಕಮ್ಯುನಿಕೇಷನ್ಸ್' ಮತ್ತೊಂದು ವಿಷಯದೊಂದಿಗೆ ಸುದ್ದಿಯಲ್ಲಿದೆ. ವ್ಯಾಪಾರಿಗಳಿಗಾಗಿ ದೇಶದ ಮೊದಲ ಸೌರಶಕ್ತಿ ಚಾಲಿತ 'ಸೋಲಾರ್ ಪೇಮೆಂಟ್ ಸೌಂಡ್‌ಬಾಕ್ಸ್' ಅನ್ನು ಪ್ರಾರಂಭಿಸಿದೆ. ಇದು ಹಗಲಿನಲ್ಲಿ ಸಾಮಾನ್ಯ ಸೂರ್ಯನ ಬೆಳಕಿನಲ್ಲಿಯೂ ಚಾರ್ಜ್ ಆಗುತ್ತದೆ. ಈ ಮಟ್ಟಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ವಿದ್ಯುತ್ ಚಾರ್ಜ್/ಕನೆಕ್ಷನ್ ಅಗತ್ಯವಿಲ್ಲದೆಯೇ ಇದನ್ನು ಬಳಸಬಹುದು. ಈ ಮೂಲಕ ವಿದ್ಯುತ್ ವೆಚ್ಚವನ್ನೂ ಕಡಿಮೆ ಮಾಡಬಹುದು. ಹೀಗಾಗಿ ಸಣ್ಣ ಬೀದಿ ವ್ಯಾಪಾರಿಗಳಿಗೆ ತುಂಬಾ ಉಪಕಾರಿಯಾಗಲಿದೆ. ವಿದ್ಯುತ್ ವೆಚ್ಚ ಕಡಿಮೆ ಮಾಡಲು ಇವುಗಳನ್ನು ವ್ಯಾಪಾರಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಪೇಟಿಎಂ ಹೇಳಿದೆ.
Introducing the Paytm Solar Soundbox – an innovation by our Founder & CEO @vijayshekhar that runs on solar power, works even in minimal sunlight, reduces electricity costs and provides instant payment alerts. ☀️🔊
— Paytm (@Paytm) February 20, 2025
⚡ Auto-charges in sunlight
🔋 10-day long-lasting battery
🥳… pic.twitter.com/MbLvGDhZa6
ವಿಶೇಷತೆಗಳು: ಪೇಟಿಎಂ ಸೋಲಾರ್ ಸೌಂಡ್ ಬಾಕ್ಸ್‌ಗಳು ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಹೊಂದಿವೆ. ಇದರರ್ಥ ನೀವು ಈ ಬಾಕ್ಸ್ ಅನ್ನು ಬಿಸಿಲಲ್ಲಿಟ್ಟರೆ ಅದು ಆಟೋಮೆಟಿಕ್ ಆಗಿ ಚಾರ್ಜ್ ಆಗುತ್ತದೆ. ಇಲ್ಲದಿದ್ದರೆ ಎರಡು ಬ್ಯಾಟರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಒಂದನ್ನು ಸೌರಶಕ್ತಿಯಿಂದ ಚಾರ್ಜ್ ಮಾಡಬಹುದು ಮತ್ತು ಇನ್ನೊಂದು ಬ್ಯಾಟರಿಯನ್ನು ಕರೆಂಟ್‌ನಿಂದ ಚಾರ್ಜ್ ಮಾಡಬಹುದು. 2ರಿಂದ 3 ಗಂಟೆಗಳ ಕಾಲ ಆರಾಮವಾಗಿ ಚಾರ್ಜ್ ಮಾಡಿದರೆ ದಿನವಿಡೀ ಬಳಸಬಹುದು ಎಂದು ಕಂಪನಿ ಹೇಳುತ್ತದೆ.
ಸೌರ ಸೌಂಡ್‌ಬಾಕ್ಸ್ ಎಲೆಕ್ಟ್ರಿಕ್ ಬ್ಯಾಟರಿ ಒಮ್ಮೆ ಸಂಪೂರ್ಣವಾಗಿ ಕರೆಂಟ್ ಚಾರ್ಜ್ ಮಾಡಿದರೆ 10 ದಿನಗಳವರೆಗೆ ಕೆಲಸ ಮಾಡುತ್ತದೆ ಎಂದು ಪೇಟಿಎಂ ಹೇಳಿದೆ. 4G ಸಂಪರ್ಕವನ್ನು ಬೆಂಬಲಿಸುವ ಈ ಸೌಂಡ್‌ಬಾಕ್ಸ್, 3W ಸ್ಪೀಕರ್ ಮೂಲಕ ತ್ವರಿತ ಆಡಿಯೊ ಪಾವತಿ ಧ್ವನಿ ಕೇಳಲು ನಿಮಗೆ ಅನುಮತಿಸುತ್ತದೆ. ಸೌಂಡ್‌ಬಾಕ್ಸ್ 11 ಭಾರತೀಯ ಭಾಷೆಗಳಲ್ಲಿ ಆಡಿಯೊ ನೋಟಿಫಿಕೇಶನ್ಗಳನ್ನು ಸಪೋರ್ಟ್ ಮಾಡುತ್ತದೆ.
ವಿದ್ಯುತ್ ವ್ಯತ್ಯಯವಿರುವ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತ: ತಳ್ಳುಗಾಡಿ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಮೀಣ ಪ್ರದೇಶದ ಉದ್ಯಮಿಗಳಿಗೆ ಇದು ತುಂಬಾ ಉಪಯುಕ್ತವಾಗಲಿದೆ. ವಿದ್ಯುತ್ ಕಡಿತಗೊಂಡ ಪ್ರದೇಶಗಳಲ್ಲಿಯೂ ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸುತ್ತದೆ. ಸಣ್ಣ ವ್ಯವಹಾರಗಳನ್ನು ಸಬಲೀಕರಣಗೊಳಿಸುವ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವತ್ತ ಮಹತ್ವದ ಹೆಜ್ಜೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಮಾತನಾಡಿ, ಕಂಪನಿಯು ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಬದ್ಧವಾಗಿದೆ ಎಂದರು.
ಇದನ್ನೂ ಓದಿ: ಟೆಸ್ಲಾ ಭಾರತ ಪ್ರವೇಶ ಡೌಟ್! ತನ್ನ ಸಲಹೆಗಾರ ಮಸ್ಕ್ ಮೇಲೆಯೇ ಟ್ರಂಪ್ ಅಸಮಾಧಾನ!