ಕರ್ನಾಟಕ

karnataka

ETV Bharat / technology

ಭಾರತಕ್ಕೆ ಕಾಲಿಟ್ಟ 7 ಸೀಟರ್​ ಫ್ಯಾಮಿಲಿ ಎಲೆಕ್ಟ್ರಿಕ್ ಕಾರ್​: ಸಿಂಗಲ್​ ಚಾರ್ಜ್​ನಲ್ಲಿ 530 ಕಿ.ಮೀ. ಪ್ರಯಾಣ - 7 SEATER FAMILY EV LAUNCHED

BYD ಭಾರತದಲ್ಲಿ 7 ಸೀಟರ್​ ಫ್ಯಾಮಿಲಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಸಿಂಗಲ್​ ಚಾರ್ಜ್​ನಲ್ಲಿ 530 ಕಿ.ಮೀವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನ ಬೆಲೆ ಹಾಗೂ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

BYD EMAX 7 MPV FEATURES  BYD EMAX 7 MPV LAUNCHED IN INDIA  BYD EMAX 7 MPV PRICE
ಭಾರತಕ್ಕೆ ಕಾಲಿಟ್ಟ 7 ಸೀಟರ್​ ಫ್ಯಾಮಿಲಿ ಎಲೆಕ್ಟ್ರಿಕ್ ಕಾರ್ (BYD India)

By ETV Bharat Tech Team

Published : Oct 9, 2024, 9:00 AM IST

BYD eMAX7: ಚೀನಾದ ಕಾರು ತಯಾರಕ BYD ತನ್ನ ಹೊಸ ಸಂಪೂರ್ಣ ಎಲೆಕ್ಟ್ರಿಕ್ MPV BYD eMAX 7 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಎಲೆಕ್ಟ್ರಿಕ್ MPV ಅನ್ನು ಎರಡು ವೈವಿಧ್ಯಮಯ ಮಾಡೆಲ್​ಗಳಲ್ಲಿ ಪರಿಚಯಿಸಿದೆ. ಇದರಲ್ಲಿ ಪ್ರೀಮಿಯಂ ಮತ್ತು ಸುಪೀರಿಯರ್ ಸೇರಿವೆ. ಈ ಹೊಸ ಮಾದರಿಯು BYD e6 ನ ಮುಂದುವರೆದ ಭಾಗವಾಗಿದೆ. ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಅಪ್​ಡೇಟ್ ಮಾಡಲಾಗಿದೆ.

BYD eMAX 7 ಬೇಸ್ ಪ್ರೀಮಿಯಂ 6 ಸೀಟರ್​ ವಾಹನಕ್ಕೆ 26.90 ಲಕ್ಷ ರೂ.(ಎಕ್ಸ್-ಶೋ ರೂಂ) ಬೆಲೆ ಇದೆ. ಆದರೆ 7 ಸೀಟರ್​​ ವೆಹಿಕಲ್​ಗೆ 27.50 ಲಕ್ಷ ರೂ. (ಎಕ್ಸ್ ಶೋ ರೂಂ) ಕ್ಕೆ ನಿಗದಿಪಡಿಸಲಾಗಿದೆ. ಟಾಪ್-ಸ್ಪೆಕ್ ಸುಪೀರಿಯರ್ ಟ್ರಿಮ್‌ನ 6 ಸೀಟರ್​ನ ಬೆಲೆಗಳು 29.30 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ. ಮತ್ತು 7 ಸೀಟರ್​ಅನ್ನು​ 29.90 ಲಕ್ಷ ರೂ. (ಎಕ್ಸ್-ಶೋ ರೂಂ) ವರೆಗೆ ಮಾರಾಟ ಮಾಡಲಾಗುತ್ತಿದೆ.

ಭಾರತಕ್ಕೆ ಕಾಲಿಟ್ಟ 7 ಸೀಟರ್​ ಫ್ಯಾಮಿಲಿ ಎಲೆಕ್ಟ್ರಿಕ್ ಕಾರ್ (BYD India)

ಹೊಸ BYD eMAX 7ನಲ್ಲಿನ 'e' ಅದರ ಎಲ್ಲಾ-ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಸೂಚಿಸುತ್ತದೆ. ಆದರೆ 'MAX' ಕಂಪನಿಯ ಅಸ್ತಿತ್ವದಲ್ಲಿರುವ BYD e6 ಗೆ ಹೋಲಿಸಿದರೆ ಶ್ರೇಣಿ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳಿವೆ. '7' BYD ಯ ಎಲೆಕ್ಟ್ರಿಕ್ MPV ಲೈನ್‌ನಲ್ಲಿ ಮುಂದಿನ ಪೀಳಿಗೆಗೆ ತಕ್ಕಂತೆ ವೈಶಿಷ್ಟ್ಯಗಳಿವೆ. ಇದು ತಂತ್ರಜ್ಞಾನ ಮತ್ತು ವಿನ್ಯಾಸದಲ್ಲಿನ ವಿಕಾಸವನ್ನು ತೋರುತ್ತದೆ.

ಬಾಹ್ಯ ಮತ್ತು ವಿನ್ಯಾಸದಲ್ಲಿ ಬದಲಾವಣೆ: BYD eMAX 7 ಅಸ್ತಿತ್ವದಲ್ಲಿರುವ e6ನ ವಿನ್ಯಾಸದಿಂದ ಬೇರೆಯಾಗಿದೆ. ಆಕರ್ಷಕ ನೋಟ, BYD ಯ 'ಡ್ರ್ಯಾಗನ್ ಫೇಸ್' ವಿನ್ಯಾಸ ಎಲ್ಲರ ಗಮನ ಸೆಳೆಯುತ್ತಿದೆ. ಇದು ಸಿಂಗಲ್ ಕ್ರೋಮ್ ಸ್ಟ್ರಿಪ್, ಕೋನೀಯ ಏರ್ ಡಕ್ಟ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ 18-ಇಂಚಿನ ಅಲಾಯ್​ ವ್ಹೀಲ್​ಗಳಿಂದ ಸಂಪರ್ಕಿಸಲಾದ ಅಪ್​ಡೇಟ್ಡ್​ LED ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಕಾರಿನ ಹಿಂಭಾಗವು ಸಂಪರ್ಕಿತ ಎಲ್ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ. ಇದು ಮಾರ್ಡನ್​ ಮತ್ತು ಪಾಲಿಶ್​ ಅಸ್ತೆಟಿಕ್​ ಲುಕ್​ ನೀಡುತ್ತದೆ.

ಭಾರತಕ್ಕೆ ಕಾಲಿಟ್ಟ 7 ಸೀಟರ್​ ಫ್ಯಾಮಿಲಿ ಎಲೆಕ್ಟ್ರಿಕ್ ಕಾರ್ (BYD India)

ಬ್ಯಾಟರಿ ಮತ್ತು ಕಾರ್ಯಕ್ಷಮತೆ:ಕಂಪನಿಯು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಈ MPV ಅನ್ನು ಪರಿಚಯಿಸಿದೆ. ಪ್ರವೇಶ ಮಟ್ಟದ ಪ್ರೀಮಿಯಂ ಟ್ರಿಮ್ 55.4kWh ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ 161bhp ಪವರ್ ಮತ್ತು 310Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಇದರ ವ್ಯಾಪ್ತಿಯು 420km ಎಂದು ಹೇಳಲಾಗುತ್ತದೆ. ಸುಪೀರಿಯರ್ ಟ್ರಿಮ್ 71.8kWh ನ ದೊಡ್ಡ ಬ್ಯಾಟರಿ ಅಳವಡಿಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 201bhp ಪವರ್ ಮತ್ತು 310Nm ಟಾರ್ಕ್ ಅನ್ನು ಉತ್ಪಾದಿಸುತ್ತಿದ್ದು, ಇದರ ವ್ಯಾಪ್ತಿಯು 530km ಆಗಿದೆ.

Emax 7 ಸುಪೀರಿಯರ್ ರೂಪಾಂತರವು ಹಂತ 2 ADAS ವೈಶಿಷ್ಟ್ಯಗಳನ್ನು ಹೊಂದಿದೆ. BYD ಬ್ಯಾಟರಿಯ ಮೇಲೆ 8 ವರ್ಷಗಳು/1.6 ಲಕ್ಷ ಕಿಲೋಮೀಟರ್‌ಗಳ ಪ್ರಮಾಣಿತ ವಾರಂಟಿ ನೀಡಲಾಗುತ್ತಿದೆ. ಮೋಟಾರ್ ಮೇಲೆ 8 ವರ್ಷಗಳು/ 5 ಲಕ್ಷ ಕಿಲೋಮೀಟರ್ ವಾರಂಟಿ ಇದೆ. ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.

ಭಾರತಕ್ಕೆ ಕಾಲಿಟ್ಟ 7 ಸೀಟರ್​ ಫ್ಯಾಮಿಲಿ ಎಲೆಕ್ಟ್ರಿಕ್ ಕಾರ್ (BYD India)

ವೈಶಿಷ್ಟ್ಯಗಳು ಮತ್ತು ಇಂಟಿರಿಯರ್​: BYD eMAX 7 ಹೊಸ 12.8-ಇಂಚಿನ ರೋಟೇಟಿಂಗ್​ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಹೊಸ ಡ್ಯಾಶ್‌ಬೋರ್ಡ್ ಸೇರಿದಂತೆ e6 ಗಿಂತ ಹಲವಾರು ಅಪ್​ಡೇಟ್​ ಹೊಂದಿದೆ. ಈ ಮಾರ್ಡನ್​ ಅಪ್​ಡೇಟ್​ ಹೊರತಾಗಿಯೂ, ಇದು ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಉಳಿಸಿಕೊಂಡಿದೆ. ಕಾರು 6 ಸೀಟರ್​ ಮತ್ತು 7 ಸೀಟರ್​ಗಳೊಂದಿಗೆ ಬರುತ್ತದೆ. 6 ಸೀಟರ್​ ಆಯ್ಕೆಯು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್​ಗಳನ್ನು ಹೊಂದಿದೆ.

ಭಾರತಕ್ಕೆ ಕಾಲಿಟ್ಟ 7 ಸೀಟರ್​ ಫ್ಯಾಮಿಲಿ ಎಲೆಕ್ಟ್ರಿಕ್ ಕಾರ್ (BYD India)

ಹೆಚ್ಚುವರಿ ವೈಶಿಷ್ಟ್ಯಗಳೆಂದರೆ, ಕ್ವಾರ್ಟ್ಜ್ ಬ್ಲೂ, ಹಾರ್ಬರ್ ಗ್ರೇ, ಕ್ರಿಸ್ಟಲ್ ವೈಟ್ ಮತ್ತು ಕಾಸ್ಮೊಸ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಗ್ಲಾಸ್ ರೂಫ್, 360 ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, NFC ಕಾರ್ಡ್ ಕೀ ಮತ್ತು ವೆಂಟಿಲೈಟೆಡ್​ ಫ್ರಂಟ್​ ಸೀಟ್‌ಗಳನ್ನು ಒಳಗೊಂಡಿದೆ. MPV ಸಹ ವೆಹಿಕಲ್-ಟು-ಲೋಡ್ (V2L) ಕಾರ್ಯವನ್ನು ಬೆಂಬಲಿಸಲಿದ್ದು, ಬಾಹ್ಯ ಸಾಧನಗಳಿಗೆ ಶಕ್ತಿ ನೀಡಲಿದೆ.

ಓದಿ:ಕ್ರೆಟಾದ ಹೊಸ ಆವೃತ್ತಿ ಬಿಡುಗಡೆ ಮಾಡಲಿರುವ ಹುಂಡೈ ಮೋಟಾರ್ ಇಂಡಿಯಾ - Hyundai Creta SE

ABOUT THE AUTHOR

...view details