ಮುಂಬೈ: ಭಾರತದೊಂದಿಗಿನ ಮತ್ತು ಇಲ್ಲಿನ ಜನರ ಕುರಿತಾದ ಸಂಬಂಧದ ಬಗ್ಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ. ಬಿಲೆನಿಯೇರ್ ಬಿಲ್ ಗೇಟ್ಸ್ ಮಾತನಾಡಿದ್ದಾರೆ. ಝೆರೋಧಾ ಸಹ ಸಂಸ್ಥಾಪಕರಾಗಿರುವ ನಿಖಿಲ್ ಕಾಮತ್ ಜೊತೆಗಿನ ಪೋಡ್ಕಾಸ್ಟ್ನಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ನಿಖಿಲ್ ಕಾಮತ್ ಅವರ 'ಪಿಪಲ್ ಬೈ ಡಬ್ಲೂಟಿಎಫ್' ಪೋಡ್ಕಾಸ್ಟ್ನಲ್ಲಿ ಮಾತನಾಡಿರುವ ಗೇಟ್ಸ್, ಭಾರತದೊಂದಿಗಿನ ಸಂಬಂಧ ಅದ್ಭುತ. ನಾವು ಕೆಲವು ಪ್ರತಿಭಾನಿತ್ವ ಐಟಿ ಪದವೀಧರರನ್ನು ಆಯ್ಕೆ ಮಾಡಿ ಸಿಯಾಟಲ್‌ಗೆ ಕರೆ ತಂದೆವು ಎಂದಿದ್ದಾರೆ.
'ಭಾರತದೊಂದಿಗೆ ಅದ್ಬುತ ಸಂಬಂಧವನ್ನು ಹೊಂದಿದ್ದೇನೆ. ಅಲ್ಲಿನ ಪ್ರತಿಭಾನ್ವಿತ ಐಟಿ ಪದವೀಧರರನ್ನು ನಮ್ಮ ಸಂಸ್ಥೆಗೆ ನೇಮಿಸಿಕೊಂಡು, ಅವರನ್ನು ಸಿಯಾಟಲ್‌ಗೆ ಕರೆತಂದಿದ್ದೇವೆ. ಬಳಿಕ ಅವರು ಹಿಂದಿರುಗಿ ನಮ್ಮ ಅಭಿವೃದ್ಧಿ ಕೇಂದ್ರವನ್ನು ಸೃಷ್ಟಿಸಿದರು. ಇದೀಗ ಭಾರತದಲ್ಲಿ ನಾವು ನಾಲ್ಕು ಸ್ಥಳದಲ್ಲಿ ಸುಮಾರು 25 ಸಾವಿರ ಜನರೊಂದಿಗೆ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇವೆ. ಮೈಕ್ರೋಸಾಫ್ಟ್‌ನಲ್ಲಿ ನಾನು ಕೆಲಸ ಮಾಡಿದಾಗ ಬಹಳಷ್ಟು ಅದ್ಭುತ ವ್ಯಕ್ತಿಗಳು ಭಾರತದಿಂದ ನೇಮಕಗೊಂಡಿದ್ದರು' ಎಂದು ಗೇಟ್ಸ್ ಸ್ಮರಿಸಿಕೊಂಡರು.
ಇದೇ ವೇಳೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರನ್ನು ಪ್ರಶಂಸಿದ ಅವರು, ಪ್ರಸ್ತುತ ಸಿಇಒ ಆಗಿ ಉತ್ತಮ ಕೆಲಸ ಮಾಡುತ್ತಿರುವ ಸತ್ಯ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನನ್ನ ಮೊದಲ ಡಿಜಿಟಲ್ ವೃತ್ತಿಜೀವನದಲ್ಲಿ ಭಾರತದೊಂದಿಗಿನ ಸಂಪರ್ಕವು ವಿನೋದಮಯವಾಗಿತ್ತು. ಕಂಪನಿಯು ಇಷ್ಟೊಂದು ಔನ್ನತ್ಯಕ್ಕೆ ಏರಲು ಸಾಧ್ಯವಾಯಿತು ಅಂತಾನೂ ಹೇಳಿದರು.