ETV Bharat / technology

ಆಧಾರ್​ ಅಪ್​ಡೇಟ್‌ಗೆ ಗಡುವು ವಿಸ್ತರಣೆ: 6 ಹಂತಗಳಲ್ಲಿ ಫ್ರೀಯಾಗಿ ಅಪ್​ಡೇಟ್ ಮಾಡಿ

Free Aadhaar Update: UIDAI myAadhaar ಪೋರ್ಟಲ್‌ನಲ್ಲಿ ಇತ್ತೀಚಿನ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಉಚಿತವಾಗಿ ಅಪ್​ಡೇಟ್​ ಮಾಡಬಹುದು.

AADHAAR UPDATE  AADHAAR UPDATE LAST DATE  AADHAAR CARD DOWNLOAD
ಆಧಾರ್ ಕಾರ್ಡ್​ ಅಪ್​ಡೇಟ್​ (ETV Bharat)
author img

By ETV Bharat Tech Team

Published : Nov 28, 2024, 10:59 AM IST

Free Aadhaar Update: ಆಧಾರ್ ಕಾರ್ಡ್ ಅಪ್​ಡೇಟ್​ ಮಾಡುವವರಿಗೆ ಇದು ಪ್ರಮುಖ ಮಾಹಿತಿ. UIDAI (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ಆಧಾರ್ ಅಪ್​ಡೇಟ್​ಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕೊನೆಯ ದಿನಾಂಕವನ್ನು ಡಿಸೆಂಬರ್ 14 ರವರೆಗೆ ವಿಸ್ತರಿಸಿದೆ. ಈಗ ಹೆಸರು ಬದಲಾವಣೆಗೆ ಗೆಜೆಟ್ ಕಡ್ಡಾಯ. ವಂಚನೆಗಳನ್ನು ತಡೆಯಲು ಯುಐಡಿಎಐ ಈ ಕ್ರಮ ಕೈಗೊಂಡಿದೆ.

ಆಧಾರ್ ಕಾರ್ಡ್ ಅಪ್​ಡೇಟ್​: ನೀವು ಆಧಾರ್ ಕಾರ್ಡ್ ಅಪ್​ಡೇಟ್​ ಮಾಡಲು ನೀವು ಬಯಸಿದರೆ, ನಾವು ನಿಮಗೆ ಕೆಲವು ಮಾಹಿತಿಯನ್ನು ನೀಡಲಿದ್ದೇವೆ. ಈ ಮಾಹಿತಿಯ ಸಹಾಯದಿಂದ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಸುಲಭವಾಗುತ್ತದೆ. UIDAI ಅಪ್‌ಡೇಟ್ ಪ್ರಕಾರ, ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕವನ್ನು ಡಿಸೆಂಬರ್ 14 ಎಂದು ನಿಗದಿಪಡಿಸಲಾಗಿದೆ. ಅಂದರೆ ನೀವು ಈ ಮಧ್ಯೆ ಆಧಾರ್ ಕಾರ್ಡ್ ಅಪ್​ಡೇಟ್​ಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು.

ಯಾವ ದಾಖಲೆಗಳನ್ನು ಸಲ್ಲಿಸಬಹುದು?: ಐಡಿ ಪ್ರೂಪ್​, ವಿಳಾಸ ಪುರಾವೆಯ ಮಾಹಿತಿಯನ್ನು ಡಿಸೆಂಬರ್ 14ರವರೆಗೆ ಅಪ್‌ಲೋಡ್ ಮಾಡಬಹುದು. UIDAI ನೀಡಿದ ಗಡುವಿನೊಳಗೆ ನೀವು ಈ ಕಾರ್ಯವನ್ನು ಪೂರ್ಣಗೊಳಿಸಬೇಕು.

ಗೆಜೆಟ್ ಬೇಡಿಕೆ: ಆಧಾರ್ ಕಾರ್ಡ್ ನವೀಕರಿಸಲು ಗೆಜೆಟ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುಐಡಿಎಐ ಹೊಸ ನಿರ್ಧಾರ ಕೈಗೊಂಡಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವಂಚನೆಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಹೆಸರು ಬದಲಾಯಿಸಬೇಕಾದರೆ ಗೆಜೆಟ್ ಪೇಪರ್ ಕೊಡಬೇಕು. ಇತರ ಬದಲಾವಣೆಗಳನ್ನೂ ಸಹ ಮಾಡಬಹುದು. ಆದರೆ ಅದಕ್ಕಾಗಿ ನೀವು ಪೋಷಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಕುರಿತು ಇತ್ತೀಚೆಗೆ ನಿರ್ಧಾರ ಕೈಗೊಳ್ಳಲಾಗಿದೆ.

ಯುಐಡಿಎಐ ಕೇಂದ್ರಕ್ಕೆ ಭೇಟಿ ನೀಡಿ: ನೀವು ಯುಐಡಿಎಐ ಕೇಂದ್ರಕ್ಕೆ ಭೇಟಿ ನೀಡುವ ಮೂಲಕವೂ ಅಪ್​ಡೇಟ್​ ಮಾಡಬಹುದು. ನೀವು DOBನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಲು ಬಯಸಿದರೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಏಕೆಂದರೆ ಈ ಬದಲಾವಣೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದಿಲ್ಲ. ಅದಕ್ಕಾಗಿ ಹತ್ತಿರದ ಕೇಂದ್ರಕ್ಕೆ ಹೋಗುವುದು ಕಡ್ಡಾಯವಾಗಿರುತ್ತದೆ.

ಆಧಾರ್ ಕಾರ್ಡ್ ನೀಡುವುದು ಯಾರು?: ಆಧಾರ್ ಕಾರ್ಡ್ ನೀಡುವ ಪ್ರಾಧಿಕಾರ ಯುಐಡಿಎಐ (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ-ಯುಐಡಿಎಐ) ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಸೌಲಭ್ಯವನ್ನು ಕೊನೆಗೊಳಿಸಲಿದೆ. ಸೆಪ್ಟೆಂಬರ್ 14ರ ನಂತರ, ಯಾವುದೇ ರೀತಿಯ ಅಪ್​ಡೇಟ್​ಗಾಗಿ ನೀವು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ನೀವು ಇನ್ನೂ ಎರಡು ದಿನಗಳ ಸಮಯವನ್ನು ಹೊಂದಿದ್ದೀರಿ. ಇದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು. ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಅವಧಿ ಈಗಾಗಲೇ ವಿಸ್ತರಿಸಲ್ಪಟ್ಟಿದೆ. ಆದ್ದರಿಂದ ಈ ಬಾರಿ ಸೆಪ್ಟೆಂಬರ್ 14ರ ನಂತರ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ತುಂಬಾ ಕಡಿಮೆ.

ನಾವಿಲ್ಲಿ ನಿಮಗೆ ಹಂತ ಹಂತವಾಗಿ ಆಧಾರ್ ಕಾರ್ಡ್ ನವೀಕರಿಸುವ ಸುಲಭ ಮಾರ್ಗವನ್ನು ಹೇಳುತ್ತೇವೆ. ಅದನ್ನು ಅನುಸರಿಸುವ ಮೂಲಕ ಆಧಾರ್​ ಕಾರ್ಡ್​ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು.

ಹಂತ 1: myAadhaar ಪೋರ್ಟಲ್‌ಗೆ ಹೋಗಿ.

ಹಂತ 2: Enter ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚ ಕೋಡ್ ನಮೂದಿಸಿ. 'ಸೆಂಡ್ OTP' ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಆಯ್ಕೆಯನ್ನು ಕ್ಲಿಕ್ಕಿಸಿ.

ಹಂತ 3: ಡಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.

ಹಂತ 4: ಸೂಚನೆಗಳನ್ನು ಓದಿದ ನಂತರ ಮುಂದಿನ ಆಯ್ಕೆ ಕ್ಲಿಕ್ಕಿಸಿ.

ಹಂತ 5: ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಪುಟದಲ್ಲಿ ನೀಡಲಾದ 'ಮೇಲಿನ ವಿವರಗಳು ಸರಿಯಾಗಿವೆಯೇ ಎಂದು ನಾನು ಪರಿಶೀಲಿಸುತ್ತೇನೆ' ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಆಯ್ಕೆಗೆ ತೆರಳಿ.

ಹಂತ 6: ID ಪುರಾವೆ ಮತ್ತು ವಿಳಾಸ ಪುರಾವೆಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಇದರ ನಂತರ, ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್ 7 ದಿನಗಳಲ್ಲಿ ಅಪ್​ಡೇಟ್​ ಆಗುತ್ತದೆ.

ಇದನ್ನೂ ಓದಿ: ಬಯೋಟೆಕ್​​ ಕ್ಷೇತ್ರ: ಸ್ವಿಟ್ಜರ್ಲೆಂಡ್ ಮೈಕ್ರೋಬ್ ಇನ್ವೆಸ್ಟಿಗೇಷನ್ಸ್​​ ಸ್ವಾಧೀನಪಡಿಸಿಕೊಂಡ ಅನಾಬಿಯೋ ಟೆಕ್ನಾಲಜೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.