ಮಕ್ಕಳಿಂದ ಹಿಡಿದು ವೃದ್ಧರವರೆಗೂ ಫಿಟ್ನೆಸ್ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪ್ಪಿಸಲು ಕಟ್ಟುನಿಟ್ಟಾದ ಆಹಾರ ನಿಯಮಗಳನ್ನು ಪಾಲಿಸಲಾಗುತ್ತದೆ. ಇದರೊಂದಿಗೆ ಪ್ರತಿದಿನ ವಾಕಿಂಗ್, ಜಾಗಿಂಗ್ ಮತ್ತು ಓಟವನ್ನು ಮಾಡಲಾಗುತ್ತದೆ. ಇನ್ನೂ ಕೆಲವರು ಜಿಮ್ಗೆ ಹೋಗಿ ವರ್ಕೌಟ್ ಮಾಡುವ ಮೂಲಕ ಫಿಟ್ ಆಗಿರಲು ಪ್ರಯತ್ನಿಸುತ್ತಿದ್ದಾರೆ.
ಇಂಥವರಿಗಾಗಿಯೇ ಪ್ರಮುಖ ಎಲೆಕ್ಟ್ರಾನಿಕ್ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನದ ಫಿಟ್ನೆಸ್ ಬ್ಯಾಂಡ್ ಅಥವಾ ಫಿಟ್ನೆಸ್ ಟ್ರ್ಯಾಕರ್ಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತಿವೆ. ಈ ಬ್ಯಾಂಡ್ಗಳು ಹೃದಯ ಬಡಿತ ಮತ್ತು ಉಸಿರಾಟದ ಮಾನಿಟರಿಂಗ್, ಬರ್ನ್ ಮಾಡಿದ ಕ್ಯಾಲೊರಿಗಳು, ಕಾರ್ಡಿಯೋ ಫಿಟ್‌ನೆಸ್, ಸ್ಲೀಪ್ ಟ್ರ್ಯಾಕಿಂಗ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಟಾಪ್-5 ಫಿಟ್‌ನೆಸ್ ಬ್ಯಾಂಡ್‌ಗಳನ್ನು ನೋಡೋಣ.
1. Honor Band 5i :'ಹಾನರ್ ಬ್ಯಾಂಡ್ 5i' ಫಿಟ್ನೆಟ್ ಕಾಪಾಡುವವರಿಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಬ್ಲೂಟೂತ್ 4.2 ನೊಂದಿಗೆ Android ಮತ್ತು iOS ಫೋನ್‌ಗಳೊಂದಿಗೆ ಸಂಪರ್ಕಿಸಬಹುದು. ಮಾರುಕಟ್ಟೆಯಲ್ಲಿ ಈ ಫಿಟ್ ನೆಸ್ ಬ್ಯಾಂಡ್ನ ಬೆಲೆ ಅಂದಾಜು ರೂ.1,999.
ವೈಶಿಷ್ಟ್ಯಗಳು :
- 2.44 cm LCD ಡಿಸ್ಪ್ಲೇ
- 91 mAh ಬ್ಯಾಟರಿ
- ಬ್ಯಾಟರಿ ಸಾಮರ್ಥ್ಯ - ಕನಿಷ್ಠ 7 ದಿನ
- ಆಯತಾಕಾರದ, ಫ್ಲಾಟ್ ಡಯಲ್
- ಸೆನ್ಸಾರ್: ಆಪ್ಟಿಕಲ್ ಹೃದಯ ಬಡಿತ ಸೆನ್ಸಾರ್, ಪೆಡೋಮೀಟರ್, SPO2 ಸೆನ್ಸಾರ್
- ದರ: 1,999 /-
2. OnePlus Band Steven Harrington Edition : ಈ ವಾಚ್ ಉತ್ತಮವಾದ ಬ್ರಾಂಡೆಡ್ ಫಿಟ್ನೆಸ್ ಟ್ರ್ಯಾಕರ್ನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಬಯಸುವವರಿಗೆ ಬೆಸ್ಟ್ ಚಾಯ್ಸ್. ಇದು Android ಮತ್ತು iOS ಮೊಬೈಲ್ಗಳೊಂದಿಗೆ ಕನೆಕ್ಟ್ ಆಗುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು ರೂ.1,799.
ವೈಶಿಷ್ಟ್ಯಗಳು:
- 2.79 ಸೆಂ ಅಮೋಲ್ಡ್ ಡಿಸ್ಪ್ಲೇ
- 100 mAh ಬ್ಯಾಟರಿ
- ಬ್ಯಾಟರಿ ಸಾಮರ್ಥ್ಯ - 14 ದಿನಗಳು
- ವಾಟರ್ಪ್ರೂಫ್ - IP68 ರೇಟಿಂಗ್
- ಆಯತಾಕಾರದ, ಫ್ಲಾಟ್ ಡಯಲ್
- ಸೆನ್ಸಾರ್: ಅಕ್ಸೆಲೆರೋಮೀಟರ್, ಗೈರೋ, ಆಪ್ಟಿಕಲ್ ಹಾರ್ಟ್ ರೇಟ್ ಸೆನ್ಸರ್, SPO2 ಸೆನ್ಸಾರ್
- ದರ: 1,799/-