ಹೈದರಾಬಾದ್: ಪ್ರಸ್ತುತ ಭಾರತದಲ್ಲಿ ಯಾವುದೇ ಉನ್ನತ ಬ್ರಾಂಡ್ ಫೋನ್‌ಗಳಿಗೆನೂ ಕೊರತೆ ಇಲ್ಲ. iPhone, Samsung ನಿಂದ Xiaomi ಮತ್ತು OnePlus ವರೆಗೆ ಎಲ್ಲ ರೀತಿಯ ಬ್ರಾಂಡ್ ಫೋನ್‌ಗಳು ಭಾರತದಲ್ಲಿ ಲಭ್ಯವಿದೆ. ಈಗ 20 ಸಾವಿರ ರೂ. ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಇರುವ ಅತ್ಯುತ್ತಮ ಟಾಪ್ 6 ಮೊಬೈಲ್‌ಗಳ ಒಂದೊಂದಾಗಿಯೇ ತಿಳಿಯುತ್ತಾ ಹೋಗೋಣ.
1.Vivo T2 5G :ಇಪ್ಪತ್ತು ಸಾವಿರ ರೂ ಬಜೆಟ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್‌ಗಳಲ್ಲಿ Vivo T2 5G ಒಂದಾಗಿದೆ. ಇದರ ಗುಣಮಟ್ಟವೂ ಸೂಪರ್ ಆಗಿದೆ. ಈ ಫೋನ್ ಸೂಪರ್ ಚಿಪ್ ಅನ್ನು ಹೊಂದಿರುವುದರಿಂದ ಅದರ ಕಾರ್ಯಕ್ಷಮತೆಯೂ ಅತ್ಯುತ್ತಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ಉತ್ತಮ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸೆಲ್ಫಿ ಪ್ರಿಯರಿಗೆ ತುಂಬಾ ಇಷ್ಟವಾದ ಫೋನ್ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ.
ಡಿಸ್ಪ್ಲೇ: 6.38 ಇಂಚಿನ ಮಲ್ಟಿ - ಟಚ್ ಸ್ಕ್ರೀನ್
ಪ್ರೊಸೆಸರ್: ಸ್ನಾಪ್ಡ್ರಾಗನ್ 695
RAM: 6 GB/ 8 GB
ಸ್ಟೋರೇಜ್:128 GB
ಹಿಂಬದಿ ಕ್ಯಾಮೆರಾ: 64MP + 2MP
ಮುಂಭಾಗದ ಕ್ಯಾಮೆರಾ: 16MP
OS: FunTouch OS 13 (Android 13 )
ಬ್ಯಾಟರಿ: 4500mAh
Vivo T2 5G ಬೆಲೆ: ಮಾರುಕಟ್ಟೆಯಲ್ಲಿ ಈ Vivo T2 5G ಫೋನ್‌ನ ಬೆಲೆ ಅಂದಾಜು 15,799 ರೂ. ಇದೆ.
2. OnePlus Nord CE2 Lite 5G: ಈ OnePlus Nord ಫೋನ್‌ನ ಕಾರ್ಯಶೀಲತೆ ಮತ್ತು ಉಪಯುಕ್ತತೆ ತುಂಬಾ ಉತ್ತಮವಾಗಿದೆ. ಇದು ಮೂರು ಬಣ್ಣಗಳಲ್ಲಿ ಲಭ್ಯವಿದೆ - ಬಹಾಮಾಸ್ ಬ್ಲೂ, ಬ್ಲೂ ಟೈಡ್ ಮತ್ತು ಬ್ಲೂ ವಾಯ್ಡ್. ಛಾಯಾಗ್ರಹಣ ಪ್ರಿಯರಿಗೆ ಇದು ತುಂಬಾ ಒಳ್ಳೆಯ ಮೊಬೈಲ್ ಇದಾಗಿದೆ.
ಡಿಸ್ಪ್ಲೇ: 6.59 ಇಂಚಿನ ಪರದೆ
ಪ್ರೊಸೆಸರ್: Qualcomm Snapdragon 695
RAM: 6 GB/ 8 GB
ಸ್ಟೋರೇಜ್: 128 GB
ಹಿಂಬದಿಯ ಕ್ಯಾಮೆರಾ: 64MP + 2MP + 2MP
ಮುಂಭಾಗದ ಕ್ಯಾಮೆರಾ: 16MP
ಓಎಸ್: ಆಂಡ್ರಾಯ್ಡ್ 12 ಆಧಾರಿತವಾಗಿದೆ
ಬ್ಯಾಟರಿ: 5000mAh
OnePlus Nord CE2 Lite 5G ಬೆಲೆ: ಮಾರುಕಟ್ಟೆಯಲ್ಲಿ ಈ OnePlus Nord ಫೋನ್‌ನ ಬೆಲೆ ಅಂದಾಜು 17,999ಕ್ಕೆ ಲಭ್ಯವಿದೆ.
3. Oppo A78 5G: ಈ Oppo ಫೋನ್ 33W SuperWook ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಲ್ಲದೇ ಇದರ ಬ್ಯಾಟರಿ ಬಾಳಿಕೆ ತುಂಬಾ ಹೆಚ್ಚಿರುವುದು ಪ್ಲಸ್ ಪಾಯಿಂಟ್. ಇದು AI ಪೋರ್ಟ್ರೇಟ್ ರಿಟೌಚಿಂಗ್, ಪೋರ್ಟ್ರೇಟ್ ಮೋಡ್, ಏಕವರ್ಣದ ವಿಡಿಯೋದಂತಹ ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾಗಿ ಛಾಯಾಗ್ರಹಣವನ್ನು ಇಷ್ಟಪಡುವವರಿಗೆ ಇದು ತುಂಬಾ ಒಳ್ಳೆಯ ಸ್ಮಾರ್ಟ್ಫೋನ್ ಆಗಿದೆ.
ಡಿಸ್ಪ್ಲೇ :6.67 ಇಂಚಿನ ಸೂಪರ್ AMOLED ಸ್ಕ್ರೀನ್
ಪ್ರೊಸೆಸರ್: ಮೀಡಿಯಾ ಟೆಕ್ 6833
RAM: 8GB
ಸಂಗ್ರಹಣಾ ಸಾಮರ್ಥ್ಯ: 128 GB
ಹಿಂಬದಿ ಕ್ಯಾಮೆರಾ: 50MP + 2MP
ಮುಂಭಾಗದ ಕ್ಯಾಮೆರಾ: 8MP
ಓಎಸ್: ಆಂಡ್ರಾಯ್ಡ್ 13.0
ಬ್ಯಾಟರಿ: 5000mAh
Oppo A78 5G ಬೆಲೆ: ಮಾರುಕಟ್ಟೆಯಲ್ಲಿ ಈ Oppo A78 5G ಫೋನ್‌ನ ಬೆಲೆ ಅಂದಾಜು 17,999 ರೇಂಜ್ನಲ್ಲಿದೆ.