ಕರ್ನಾಟಕ

karnataka

ETV Bharat / technology

AI ಜನರೇಟೆಡ್​ ಎರರ್ ​- ಪ್ರೋನ್​ ಫೀಚರ್ಸ್ ತೆಗೆದುಹಾಕಲು ಆಪಲ್​ ನಿರ್ಧಾರ, ಕಾರಣವೇನು? - ERROR PRONE FEATURE SUSPEND

Error-Prone Feature Suspend: ಎಐ ಜನರೇಟೆಡ್​ ಎರರ್ ​- ಪ್ರೋನ್​ ಫೀಚರ್ಸ್ ಅನ್ನು ಆಪಲ್​ ತೆಗೆದುಹಾಕಲು ನಿರ್ಧರಿಸಿದೆ. ಇದಕ್ಕೆ ಕಾರಣವೆನೆಂಬುದು ತಿಳಿಯೋಣ ಬನ್ನಿ..

ERROR PRONE FEATURE  AI GENERATED NEWS SUMMARIES  BETA IPHONE SOFTWARE  APPLE
ಆಪಲ್ (Photo Credit: AP File Photo)

By ETV Bharat Tech Team

Published : Jan 18, 2025, 5:40 PM IST

Error-Prone Feature Suspend:ಆಪಲ್​ ಕಂಪನಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಎಐ ಜನರೇಟೆಡ್​ ಎರರ್​-ಪ್ರೋನ್​ ಫೀಚರ್ಸ್ ಅನ್ನು ತೆಗೆದುಹಾಕಲಿದೆ. ಇದರ ವಿರದ್ಧ ಅನೇಕ ಆರೋಪಗಳು ಕೇಳಿ ಬಂದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಹೌದು, ಕೆಲ ಐಫೋನ್ ಮಾಲೀಕರಿಗೆ ಬೋಗಸ್​ ನ್ಯೂಸ್​ ಅಲರ್ಟ್ ಎಚ್ಚರಿಕೆಗಳನ್ನು ನೀಡುವ ಎಐ ಜನರೇಟೆಡ್​ ಎರರ್ ​ - ಪ್ರೋನ್​ ಫೀಚರ್ಸ್​ ಆಪಲ್ ತೆಗೆದುಹಾಕಲು ನಿರ್ಧರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಮುಂದಿನ ಸಾಫ್ಟ್‌ವೇರ್ iOS 18.3 ಅಪ್​ ಡೇಟ್​ ಕಾರ್ಯ ಭರದಿಂದ ಸಾಗಿದೆ. ಈ ಟೆಸ್ಟ್​ ವರ್ಸನ್​ ಭಾಗವಾಗಿ ಆಪಲ್​ ತನ್ನ ಮಹತ್ವದ ನಿರ್ಧಾರವನ್ನು ತಿಳಿಸಿದೆ. ಈ ಬೀಟಾ ವರ್ಸನ್​ ಐಫೋನ್ ಬಳಕೆದಾರರು ಮತ್ತು ಡೆವಲಪರ್‌ಗಳ ಗುಂಪಿಗೆ ಮಾತ್ರ ಲಭ್ಯವಿದೆ. ಆದರೆ, ಟೆಸ್ಟ್​ ವರ್ಸನ್​ ಅನ್ನು ಮುಂದಿನ ದಿನಗಳಲ್ಲಿ ಎಲ್ಲರಿಗೂ ದೊರೆಯುವಂತೆ ಮಾಡಲಾಗುತ್ತಿತ್ತು.

ಆದರೆ, ಬೀಟಾ ಅಪ್‌ಡೇಟ್‌ನಲ್ಲಿ ಟೆಕ್ನಾಲಾಜಿ ಇನ್ಫಾರೇಷನ್​ ಮಾಹಿತಿ ರೂಪಿಸಲು ಕಾರಣವಾಗುವ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿರುವಾಗ ನ್ಯೂಸ್​ ಮತ್ತು ಎಂಟರ್​ಟೈನ್ಮೆಂಟ್​ಗಾಗಿ​ ಎಐ-ಜನರೇಟೆಡ್​ ಫೀಚರ್​ ಅನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ. ಈ ಬಗ್ಗೆ ಆಪಲ್ ಅಧಿಕೃತವಾಗಿ ಹೇಳಿದೆ. ಆದರೆ, ಆಪಲ್‌ನ ಐಪ್ಯಾಡ್ ಮತ್ತು ಮ್ಯಾಕ್ ಕಂಪ್ಯೂಟರ್‌ಗಳಿಗೆ ಇದೇ ರೀತಿಯ ಸಾಫ್ಟ್‌ವೇರ್ ಅಪ್​ಡೇಟ್​ಗಳು ಸಹ ಪರೀಕ್ಷಾ ಹಂತದಲ್ಲಿವೆ.

ಇದು ಕೇವಲ ತಾತ್ಕಾಲಿಕವಾಗಿದ್ದರೂ ಸಹ ನಿಷ್ಕ್ರಿಯಗೊಳಿಸುವಿಕೆಯಿಂದ ಐಫೋನ್ ಮತ್ತು ಅದರ ಇತರ ಉತ್ಪನ್ನಗಳಿಗೆ ಎಐ ಅನ್ನು ತರುವ ಆಪಲ್‌ನ ಪ್ರಯತ್ನಗಳಿಗೆ ಹಿಂದೇಟು ಬಿದ್ದಿದೆ ಎಂದು ಹೇಳಬಹುದು. ಕಳೆದ ಸೆಪ್ಟೆಂಬರ್‌ನಲ್ಲಿ ಐಫೋನ್ 16 ಸೀರಿಸ್​ ಪ್ರಾರಂಭದ ಜೊತೆ ಈ ಪ್ರಯತ್ನ ಶುರುವಾಯಿತು. ಇದು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊ ಕಂಪನಿಯು "ಆಪಲ್ ಇಂಟೆಲಿಜೆನ್ಸ್" ಎಂದು ಕರೆಯುವ ತಂತ್ರಜ್ಞಾನಕ್ಕೆ ಅಗತ್ಯವಾದ ಕಂಪ್ಯೂಟರ್ ಚಿಪ್‌ನೊಂದಿಗೆ ಸಜ್ಜುಗೊಂಡಿದೆ. 2023 ರ ಪ್ರೀಮಿಯಂ ಐಫೋನ್ 15 ಮಾದರಿಗಳು ಸಹ AI ಪ್ರೊಸೆಸರ್ ಒಳಗೊಂಡಿವೆ.

ಸರ್ಚ್​ ರಿಸಲ್ಟ್​ ಗಳ ಮೇಲೆ ಎಐ-ಜನರೇಟೆಡ್​ನ ಕೆಲವು ವಿಲಕ್ಷಣ ಉತ್ತರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದವು. ಇದರೊಂದಿಗೆ ಕೆಲ ತಪ್ಪಾದ ಮಾಹಿತಿ ಹೊರಹಾಕುತ್ತಿರುವುದು ಕಂಡು ಬಂತು. ಈ ಘಟನೆ ಬಳಿಕ ಕಳೆದ ವರ್ಷ ಗೂಗಲ್ ತನ್ನ ಸರ್ಚ್ ಎಂಜಿನ್‌ನ ಹೊಸ ಆವೃತ್ತಿಯನ್ನು ಮರು ಪರಿಶೀಲಿಸುವಂತೆ ಮಾಡಿತು.

ಓದಿ:ಸಚಿವಾಲಯ ಸಿಬ್ಬಂದಿಗಾಗಿ ವಿಧಾನಸೌಧದ ಆವರಣದಲ್ಲಿ ಇವಿ ವಾಹನ ಮೇಳ

ABOUT THE AUTHOR

...view details