ಕರ್ನಾಟಕ

karnataka

ETV Bharat / technology

ಬಿದ್ದರೂ, ಎಸೆದರೂ ಏನೂ ಆಗಲ್ಲ: ಆಟೋರಿಕ್ಷಾ ಪ್ರಯಾಣದ ಮೂಲಕ ಐಫೋನ್​ 15ರ ಬಾಳಿಕೆ ಪ್ರದರ್ಶಿಸಿದ ಆಪಲ್​ - apple new campaign in India

ಐಫೋನ್​ ಉತ್ತಮ ಫೀಚರ್​, ಭದ್ರತೆ ದೃಷ್ಟಿಯಿಂದ ಮಾತ್ರವಲ್ಲ, ಅದು ಬಾಳಿಕೆಯಲ್ಲೂ ಸದೃಢತೆ ಹೊಂದಿದೆ ಎಂದು ಆಪಲ್​ ಜಾಹೀರಾತಿನ ಮೂಲಕ ತೋರಿಸಿದೆ.

By ETV Bharat Karnataka Team

Published : Apr 23, 2024, 11:32 AM IST

apple  new campaign in India shows  iPhone 15 durability
apple new campaign in India shows iPhone 15 durability

ನವದೆಹಲಿ: ತನ್ನ ವಿಶಿಷ್ಟ ಫೀಚರ್​, ಉತ್ತಮ ಗುಣಮಟ್ಟ, ಬಾಳಿಕೆ ಸೇರಿದಂತೆ ಹಲವು ಕಾರಣಗಳಿಂದ ಈಗಾಗಲೇ ​ಐಫೋನ್​ ಗ್ರಾಹಕರನ್ನು ಸೆಳೆದಿದೆ. ಇನ್ನು ಈ ಫೋನ್​ಗಳ ಬಾಳಿಕೆ ಮಟ್ಟದಲ್ಲಿ ಗ್ರಾಹಕರು ಯಾವ ಮಟ್ಟಿಗೆ ನಂಬಬಹುದು ಎಂಬುದನ್ನು ಇದೀಗ ಹೊಸ ಜಾಹೀರಾತಿನ ಮೂಲಕ ಆಪಲ್​ ತೋರಿಸಿದೆ. ಭಾರತದಲ್ಲಿ ಈ ಹೊಸ ಪ್ರಚಾರಕ್ಕೆ ಮುಂದಾಗಿರುವ ಆಪಲ್​ನ ಈ ಜಾಹೀರಾತು ಸದ್ಯ ಎಲ್ಲ ಗ್ರಾಹಕರನ್ನು ಸೆಳೆದಿದೆ.

ಮೊಬೈಲ್​ಗಳ ವೀಕ್ಷಣೆ ವೇಳೆ ಭಾರತದಂತಹ ಇಕ್ಕಟಾದ ತಿರುವಿನ ರಸ್ತೆ, ಗುಂಡಿ, ಬಂಪರ್​ ಮೇಲಿನ ಪ್ರಯಾಣ ವೇಳೆ ಐಫೋನ್​ ಬಿದ್ದರೂ, ಉರುಳಿಸಿದರೂ, ಎಸೆದರೂ ಕೂಡ ಅದಕ್ಕೆ ಯಾವುದೇ ಹಾನಿಯಾಗದೇ ಸದೃಢ ಬಾಳಿಕೆ ಬರಲಿದೆ ಎಂಬುದನ್ನು ಒಂದು ಆಟೋ ರಿಕ್ಷಾದ ಜಾಹೀರಾತಿನ ಮೂಲಕ ತೋರಿಸಲಾಗಿದೆ. ಈ ಮೂಲಕ ಅದರ ಗುಣಮಟ್ಟವನ್ನು ಪ್ರದರ್ಶಿಸಲಾಗಿದೆ.

ಐಪಿಎಲ್​​​ ಕ್ರಿಕೆಟ್​ ಸೀಸನ್​ ಮಧ್ಯದಲ್ಲಿ ಈ ಜಾಹೀರಾತು ಬಿಡುಗಡೆಯಾಗಿದೆ. 'ರಿಲಾಕ್ಸ್​ ಇದು ಐಫೋನ್'​ ಎಂಬ ಶೀರ್ಷಿಕೆಯಲ್ಲಿ ಅವರು ತಮ್ಮ ಇಷ್ಟದ ಆಟವನ್ನು ಒಂದು ಕ್ಷಣವೂ ವಿರಾಮವಿಲ್ಲದೇ ಅಥವಾ ಅವರ ಐಫೋನ್​ಗೆ ಹಾನಿ ಇಲ್ಲದೇ ಎಲ್ಲಿಯಾದರೂ ಅದರ ಮೋಜು ಸವಿಯಬಹುದು ಎಂಬುದು ಜಾಹೀರಾತಿನ ಮೂಲ ಉದ್ದೇಶ

ಆಪಲ್​ನ ಹೊಸ ಪ್ರಚಾರದ ಜಾಹೀತಾರು ಡಿಜಿಟಲ್​ ಪ್ರಿ- ರೋಲ್​, ಟಿವಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದಾಗಿದೆ. ಕಠಿಣ ಬಂಪ್​ಗಳ, ಮೊನಚಾದ ತಿರುವಿನಲ್ಲೂ ಕೂಡ ಎತ್ತಿ ಹಾಕುವ ಆಟೋದ ಪ್ರಯಾಣದಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ಐಫೋನ್​ ಬಳಕೆ ಮಾಡಬಹುದು. ಈ ಮೂಲಕ ಕಠಿಣ ಪ್ರಯಾಣದಲ್ಲೂ ಅದು ಹೆಚ್ಚು ಬಳಕೆ ಬರಲಿದ್ದು, ಸದೃಢವಾಗಿದೆ ಎಂದು ತೋರಿಸಿದೆ.

ಐಫೋನ್​ 15 ಹಿಂಭಾಗದಲ್ಲಿ ಗ್ಲಾಸ್​​ನೊಂದಿಗೆ ಕಸ್ಟಮ್ ಡ್ಯುಯಲ್ ಅಯಾನ್ ಎಕ್ಸ್​ಚೆಂಜ್​ ಪ್ರತಿಕ್ರಿಯೆ ಹೊಂದಿದೆ. ಏರೋಸ್ಪೇಸ್- ಗ್ರೇಡ್ ಅಲ್ಯೂಮಿನಿಯಂ ಅನ್ನು ಹೊಂದುವ ಮೂಲಕ ಅಸಾಧ್ಯ ಬಾಳಿಕೆಯನ್ನು ಇದು ಹೊಂದಿದೆ ಎಂದು ತಿಳಿಸಿದೆ.

ಇತರೆ ಸ್ಮಾರ್ಟ್​ಫೋನ್​ ಗ್ಲಾಸ್​ಗಿಂತ ಹೆಚ್ಚಿನ ಕಠಿಣ ಸೆರಾಮಿಕ್​ ಶೀಲ್ಡ್​ ಕವರ್​​ ಹೊಂದಿದ್ದು, ಇದು ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿದೆ. ಇತರೆ ಸ್ಮಾರ್ಟ್​​ಫೋನ್​ಗಿಂತ ಇದು ಹೆಚ್ಚು ಸಮಯ ಬಾಳಿಕೆ ಮೌಲ್ಯವನ್ನು ಹೊಂದಿದೆ. ಇಷ್ಟೇ ಅಲ್ಲದೇ ಇದು ವೇಗ ಮತ್ತು ಸಾಮರ್ಥ್ಯದ ಎ16 ಬಯೋನಿಕ್​ ಚಿಪ್​​ ಹೊಂದಿದ್ದು, ಇದು ಇದರ ಸಾಮರ್ಥ್ಯ ಸಾಬೀತು ಮಾಡಿದೆ. ಡೈನಾಮಿಕ್ ಐಲ್ಯಾಂಡ್, ಕಂಪ್ಯೂಟೇಶನಲ್ ಫೋಟೋಗ್ರಾಫಿ ಇದರ ಸಾಮರ್ಥ್ಯವನ್ನು ಮತ್ತಷ್ಟು ಶಕ್ತಿಯುತಗೊಳಿಸಿದೆ.

ಇದನ್ನೂ ಓದಿ: ಸ್ಪೈವೇರ್​ ದಾಳಿ: ಭಾರತ ಸೇರಿದಂತೆ 91 ದೇಶದಲ್ಲಿ ಐಫೋನ್​ ಬಳಕೆದಾರರಿಗೆ ಆಪಲ್​ ಎಚ್ಚರಿಕೆ ಸಂದೇಶ ರವಾನೆ

ABOUT THE AUTHOR

...view details