MacBook Pro:ಭಾರತದಲ್ಲಿ ಆ್ಯಪಲ್ ಪ್ರೊಡಕ್ಟ್ಗಳಿಗೆ ಬೇಡಿಕೆ ಜಾಸ್ತಿ. ಆ್ಯಪಲ್ ಸಿಲಿಕಾನ್ನ ಎಂ4 ಸೀರಿಸ್ನ ಪ್ರೊಸೆಸರ್ನಿಂದ ರನ್ ಆಗುವ ಇತ್ತೀಚಿನ ಜನರೇಶನ್ನ ಮ್ಯಾಕ್‌ಬುಕ್ ಪ್ರೊ ಕಳೆದ ವಾರ ದೇಶದ ಮಾರುಕಟ್ಟೆಗಳಲ್ಲಿ ಭರ್ಜರಿಯಾಗಿ ಮಾರಾಟವಾಯಿತು.
14 ಇಂಚಿನ ಮ್ಯಾಕ್‌ಬುಕ್ ಪ್ರೋ ಮಾಡೆಲ್ 1,69,900 ರೂ.ಗೆ ಮಾರಾಟವಾಗುತ್ತಿದೆ. ಈ ಮಾಡೆಲ್ ಎಂ4 ಚಿಪ್, 16GB RAM ಮತ್ತು 512GB ಸ್ಟೋರೇಜ್ ಒಳಗೊಂಡಿದೆ. ಆದ್ರೆ ಅತ್ಯಂತ ಪವರ್‌ಫುಲ್ ಮ್ಯಾಕ್‌ಬುಕ್ ಪ್ರೋ ಬೆಲೆ 7,34,900 ರೂ.ಗೆ ನಿಗದಿಪಡಿಸಲಾಗಿದೆ. ಇದು ಮಾರುತಿ ಡಿಸೈರ್ ಕಾರಿಗಿಂತಲೂ ದುಬಾರಿ ಎಂಬುದು ಗಮನಾರ್ಹ. ಈ ದರದಲ್ಲಿ ಆ್ಯಪಲ್ ಅಸಾಧಾರಣ ಕಂಪ್ಯೂಟಿಂಗ್ ಪವರ್ ನೀಡುತ್ತದೆ. ಅಷ್ಟೇ ಅಲ್ಲದೇ, ಇದು ವಿಶ್ವದ ಅತ್ಯಂತ ಪವರ್‌ಫುಲ್ ಲ್ಯಾಪ್ಟಾಪ್ಗಳಲ್ಲಿ ಒಂದು.
ಅಡ್ವಾನ್ಸ್‌ಡ್ ಮ್ಯಾಕ್‌ಬುಕ್ ಪ್ರೋ ಖರೀದಿಸುವವರು ಆ್ಯಪಲ್‌ನ ಅಧಿಕೃತ ವೆಬ್ಸೈಟ್ನಿಂದ ಆರ್ಡರ್ ಮಾಡುವುದು ಒಳ್ಳೆಯದು. ಇಲ್ಲಿ ಕಂಪನಿ ತನ್ನ ಬಳಕೆದಾರರಿಗೆ ಡಿಸ್ಪ್ಲೇ, ಮೆಮೊರಿ ಮತ್ತು ಸ್ಟೋರೇಜ್ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತಿದೆ.
16 ಇಂಚಿನ ಮ್ಯಾಕ್‌ಬುಕ್ ಪ್ರೋ ಎಂ4 ಮ್ಯಾಕ್ಸ್ ಚಿಪ್, 16-ಕೋರ್ CPU, 40-ಕೋರ್ GPU, 16-ಕೋರ್ ನ್ಯೂರಲ್ ಎಂಜಿನ್, 128GB ಯುನಿಫೈಡ್ ಮೆಮೊರಿ ಮತ್ತು 8TB SSD ಸ್ಟೋರೇಜ್ ಹೊಂದಿದೆ. ನ್ಯಾನೊ-ಟೆಕ್ಸ್ಚರ್ಡ್ ಡಿಸ್ಪ್ಲೇ ಮತ್ತು ಮೂರು ಥಂಡರ್ಬೋಲ್ಟ್ 5 ಪೋರ್ಟ್‌ಗಳನ್ನು ಒಳಗೊಂಡಿದೆ. ಅಂದಹಾಗೆ, ಇದರ ಬೆಲೆ 7,34,900 ರೂ. ಆಗಿದೆ.
ಎಂ4 ಮ್ಯಾಕ್ಸ್‌ನಲ್ಲಿನ 40-ಕೋರ್ GPU ಎನ್ವಿಡಿಯಾದ RTX 4090, ಅತ್ಯಂತ ಪವರ್‌ಫುಲ್ ಗೇಮಿಂಗ್ GPUನ ಪರ್ಫಾರ್ಮೆನ್ಸ್ಗೆ ಪ್ರತಿಸ್ಪರ್ಧಿ. ಗೇಮರ್ಗಳಿಗಿದು ಒಳ್ಳೆಯ ಲ್ಯಾಪ್ಟಾಪ್ ಅಲ್ಲ. ಏಕೆಂದರೆ MacOS ಇನ್ನೂ ಅನೇಕ AAA ಗೇಮಿಂಗ್ ಶೀರ್ಷಿಕೆಗಳಿಗೆ ಸಪೋರ್ಟ್ ಮಾಡುವುದಿಲ್ಲ, ಆದರೂ ಇದು ಕ್ರಮೇಣ ಸುಧಾರಿಸುತ್ತಿದೆ.
ಕಾನ್ಫಿಗರೇಶನ್ ಬದಲಾಯಿಸುವ ಮೂಲಕ ಹಣ ಉಳಿತಾಯ:ನಿಮಗೆ ಮ್ಯಾಕ್‌ಬುಕ್ ಪ್ರೋ ದುಬಾರಿಯಾದ್ರೆ ಕಾನ್ಫಿಗರೇಶನ್ ಬದಲಾಯಿಸುವ ಮೂಲಕ ಹಣ ಉಳಿಸಬಹುದು. ಅಂದರೆ, ಎಂ4 ಮ್ಯಾಕ್ಸ್ ಚಿಪ್, 48GB RAM ಮತ್ತು 1TB ಸ್ಟೋರೇಜ್ನ 16-ಇಂಚಿನ ಮ್ಯಾಕ್‌ಬುಕ್ ಪ್ರೊ ಬೆಲೆ 4,14,900 ರೂ.ಗೆ ಖರೀದಿಸಬಹುದು. ನ್ಯಾನೊ-ಟೆಕ್ಸ್ಚರ್ಡ್ ಡಿಸ್ಪ್ಲೇ ಬೇಡವೆಂದಾದಲ್ಲಿ ಬೆಲೆ 3,99,900 ರೂ. ಆಗುತ್ತದೆ.
RAMಗೆ ಆದ್ಯತೆ, ಎಕ್ಸರ್ನಲ್ ಸ್ಟೋರೇಜ್ ಸೂಕ್ತ: ಮ್ಯಾಕ್‌ಬುಕ್ ಪ್ರೊನಲ್ಲಿನ RAM ಮತ್ತು ಸ್ಟೋರೇಜ್ ಅಪ್ಗ್ರೇಡ್ಸ್ ಬೆಲೆಬಾಳುವವು. ಈ ಯುನಿಟ್ಗಳು ಬಳಕೆದಾರರಿಗೆ ಅಪ್‌ಗ್ರೇಡ್ ಮಾಡಲಾಗದ ಕಾರಣ RAMಗೆ ಆದ್ಯತೆ ನೀಡುವುದು ಬುದ್ಧಿವಂತಿಕೆ. ಸ್ಟೋರೇಜ್ಗಾಗಿ ಆ್ಯಪಲ್ ಶುಲ್ಕದ ಒಂದು ಭಾಗದಲ್ಲಿ ವೇಗದ ಡೇಟಾ ವರ್ಗಾವಣೆ ವೇಗವನ್ನು ನೀಡುವ ಬಾಹ್ಯ SSDಗಳನ್ನು ಬಳಸುವುದನ್ನು ಪರಿಗಣಿಸಬೇಕು. ತಡೆರಹಿತ ಬಹುಕಾರ್ಯಕವನ್ನು ಅವಲಂಬಿಸಿರುವ ಡೆವಲಪರ್‌ಗಳು ಮತ್ತು ವಿಡಿಯೋ ಎಡಿಟರ್ಗಳಿಗೆ RAM ಹೆಚ್ಚು ಮುಖ್ಯವಾಗಿದೆ. ಹೊಸ M4 Mac ಮಿನಿ ಮತ್ತು MacBook Air M2/M3 ಸೇರಿದಂತೆ ಎಲ್ಲಾ ಮ್ಯಾಕ್ ರೂಪಾಂತರಗಳಲ್ಲಿ ಆ್ಯಪಲ್ ಈಗ ಕನಿಷ್ಟ 16GB RAM ನೀಡುತ್ತದೆ.
ಇದನ್ನೂ ಓದಿ:ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆಪಲ್ನದ್ದೇ ಅಧಿಪತ್ಯ; ಒನ್ಪ್ಲಸ್ಗೆ ನಷ್ಟ; ಐಡಿಸಿ