ಕರ್ನಾಟಕ

karnataka

ETV Bharat / technology

ಮಾರುಕಟ್ಟೆಯಲ್ಲಿ ಆಪಲ್​ ಹವಾ - ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ ಲಾಂಚ್​ - APPLE MAC MINI LAUNCHED

Apple Mac Mini Launched: ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್​ ತನ್ನದೇ ಹವಾ ಕ್ರಿಯೆಟ್​ ಮಾಡುತ್ತಿದೆ. ಸದ್ಯ ಆಪಲ್​ ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ ಮಾರುಕಟ್ಟೆಗೆ ಪರಿಚಯಿಸಿದೆ.

APPLE MAC MINI M4  APPLE MAC MINI M4 PRO  APPLE MAC MINI FEATURES  APPLE MAC MINI PRICE
ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ ಲಾಂಚ್​ (Apple)

By ETV Bharat Tech Team

Published : Oct 31, 2024, 12:40 PM IST

Apple Mac Mini Launched:ಟೆಕ್ ದೈತ್ಯ ಆಪಲ್ ರೋಲ್‌ನಲ್ಲಿದೆ. ಇತ್ತೀಚೆಗಷ್ಟೆ ಆಪಲ್​ ಪವರ್​ಫುಲ್​ M4 ಚಿಪ್‌ನೊಂದಿಗೆ ಹೊಸ iMac ಅನ್ನು ಹೊರ ತಂದಿದೆ.. ಈಗ ಸೂಪರ್ ಸ್ಪೀಡ್‌ನೊಂದಿಗೆ ಕಾರ್ಯನಿರ್ವಹಿಸುವ Mac mini ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಆಪಲ್ ಕಾಂಪ್ಯಾಕ್ಟ್ ಡೆಸ್ಕ್‌ಟಾಪ್ ಕಂಪ್ಯೂಟರ್ ಮ್ಯಾಕ್ ಮಿನಿಯಲ್ಲಿ ಎರಡು ಚಿಪ್‌ಸೆಟ್ ಆಯ್ಕೆಗಳು ಲಭ್ಯವಿದೆ. ಈ ಸಂದರ್ಭದಲ್ಲಿ ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ ಬನ್ನಿ..

ಮ್ಯಾಕ್ ಮಿನಿ ಚಿಪ್ಸೆಟ್ ಆಯ್ಕೆಗಳು:

  • M4
  • M4 ಪ್ರೊ

M4 Pro ಈ ಎರಡು ಚಿಪ್‌ಸೆಟ್‌ಗಳಲ್ಲಿ ಹೊಸ ಆಯ್ಕೆಯಾಗಿದೆ. ಈ ಹೊಸ Mac Mini M4 ರೂಪಾಂತರವು Mac Mini M1 ಗಿಂತ 1.7 ಪಟ್ಟು ವೇಗದ ಕಾರ್ಯಕ್ಷಮತೆ ನೀಡುತ್ತದೆ. ಮತ್ತೊಂದೆಡೆ M4 Pro ಚಾಲಿತ ಡೆಸ್ಕ್‌ಟಾಪ್ ಕಂಪ್ಯೂಟರ್ ಬ್ಲೆಂಡರ್‌ನಲ್ಲಿ 3D ರೆಂಡರ್‌ಗಳನ್ನು 2.9 ಪಟ್ಟು ವೇಗವಾಗಿ ಪೂರ್ಣಗೊಳಿಸುತ್ತದೆ.

ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ (Apple)

M4 ಚಿಪ್‌ನೊಂದಿಗೆ Mac mini ನ ವಿಶೇಷತೆಗಳು:M4 ಚಿಪ್‌ಸೆಟ್‌ನೊಂದಿಗೆ Mac mini 10-ಕೋರ್ CPU, 10-ಕೋರ್ GPU, 24GB ಯೂನಿಫೈಡ್​ ಮೆಮೊರಿ, 512GB ವರೆಗಿನ ಆನ್‌ಬೋರ್ಡ್ SSD ಸ್ಟೋರೇಜ್​ನೊಂದಿಗೆ ಬರುತ್ತದೆ. M1 ಮಾದರಿಗೆ ಹೋಲಿಸಿದರೆ ಇದು 1.8 ಪಟ್ಟು CPU ಪ್ರದರ್ಶನ 2.2 ಪಟ್ಟು ಉತ್ತಮ GPU ಕಾರ್ಯಕ್ಷಮತೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ (Apple)

ಈ ಹೊಸ ಮಿನಿ ಮ್ಯಾಕ್ ಅದರ ಹಿಂದಿನ ಪೀಳಿಗೆಯ ಮ್ಯಾಕ್‌ಗಿಂತ 5x5 ಇಂಚುಗಳಷ್ಟು ಚಿಕ್ಕದಾದ ಫಾರ್ಮ್ ಫ್ಯಾಕ್ಟರ್‌ನಲ್ಲಿ ಬರುತ್ತದೆ. ಇದು ಆನ್-ಡಿವೈಸ್ AI (ಕೃತಕ ಬುದ್ಧಿಮತ್ತೆ) ಅನ್ನು ಹೊಂದಿದ್ದು, MacWhisper ನಲ್ಲಿ 2x ವೇಗವಾಗಿ ಲಿಪ್ಯಂತರ ಮಾಡುವ ಸ್ಪೀಚ್​ ಟು ಟೆಕ್ಸ್ಟ್​​ ಹೊಂದಿದೆ.

M4 ಪ್ರೊ ಚಿಪ್‌ನೊಂದಿಗೆ ಬರುವ ಮ್ಯಾಕ್ ಮಿನಿ ವಿಶೇಷತೆಗಳು: ಕಂಪನಿಯು ಈ ಮ್ಯಾಕ್ ಮಿನಿಯಲ್ಲಿ ಇತ್ತೀಚಿನ M-4 ಪ್ರೊ ಚಿಪ್ ತಂದಿದೆ. ಇದು 14-ಕೋರ್ CPU, 20-ಕೋರ್ GPU, 64GB ವರೆಗೆ ಏಕೀಕೃತ ಮೆಮೊರಿ, 8TB SSD ಸ್ಟೋರೇಜ್​ ಜೊತೆ ಬರುತ್ತದೆ. Mac Mini ಗೆ ಹೋಲಿಸಿದರೆ M2 Pro ತನ್ನ RAM ನಲ್ಲಿ ಎರಡು ಪಟ್ಟು ವೇಗವಾಗಿ ಚಲನೆಯ ಗ್ರಾಫಿಕ್ಸ್ ಅನ್ನು ನೀಡುತ್ತದೆ ಎಂದು Apple ಹೇಳುತ್ತದೆ.

ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ (Apple)

ಮ್ಯಾಕ್ ಮಿನಿ ಕನೆಕ್ಟಿವಿಟಿ ವೈಶಿಷ್ಟ್ಯಗಳು: M4 ಮತ್ತು M4 ಪ್ರೊ ಚಿಪ್‌ಸೆಟ್‌ಗಳೊಂದಿಗೆ ಎರಡೂ ಮ್ಯಾಕ್ ಮಿನಿ ಮಾದರಿಗಳು Apple ಇಂಟೆಲಿಜೆನ್ಸ್ ಅನ್ನು ಸಪೋರ್ಟ್​ ಮಾಡುತ್ತವೆ. ಇದು USB 3 ವೇಗದೊಂದಿಗೆ ಎರಡು USB ಟೈಪ್-C ಪೋರ್ಟ್‌ಗಳನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದೆ. Mac Mini M4 ಹಿಂಭಾಗದಲ್ಲಿ ಮೂರು Thunderbolt 4 ಪೋರ್ಟ್‌ಗಳನ್ನು ಹೊಂದಿದ್ರೆ, M4 Pro ರೂಪಾಂತರವು ಮೂರು Thunderbolt 5 ಪೋರ್ಟ್‌ಗಳನ್ನು ಹೊಂದಿದೆ. ಎರಡೂ ಮಾದರಿಗಳು ಗಿಗಾಬಿಟ್ ಈಥರ್ನೆಟ್ ಮತ್ತು HDMI ಪೋರ್ಟ್‌ಗಳನ್ನು ಹೊಂದಿವೆ.

ಬೆಲೆ ಎಷ್ಟು?: ಭಾರತೀಯ ಮಾರುಕಟ್ಟೆಯಲ್ಲಿ, M4 ಚಿಪ್, 10-ಕೋರ್ CPU, 10-ಕೋರ್ GPU, 16GB ಯೂನಿಫೈಡ್​ ಮೆಮೊರಿ, 256GB ಆನ್‌ಬೋರ್ಡ್ SSD ಸಂಗ್ರಹಣೆಯೊಂದಿಗೆ Mini Mac ನ ಮೂಲ ಮಾದರಿಯು ರೂ.59,900 ರಿಂದ ಪ್ರಾರಂಭವಾಗುತ್ತದೆ. ಈ ಮಾದರಿಯನ್ನು ಗರಿಷ್ಠ 24GB RAM ಮತ್ತು 512GB ಸ್ಟೋರೇಜ್​ನೊಂಗಿಗೆ ಕಾನ್ಫಿಗರ್ ಮಾಡಬಹುದು.

ಓದಿ:M4, M4 Pro ಮತ್ತು M4 ಮ್ಯಾಕ್ಸ್ ಚಿಪ್‌ಗಳೊಂದಿಗೆ ಮ್ಯಾಕ್​ಬುಕ್​ ಪ್ರೊ ಘೋಷಿಸಿದ ಆಪಲ್​, ಇದರ ಬೆಲೆ, ವೈಶಿಷ್ಟ್ಯಗಳು ಹೀಗಿವೆ

ABOUT THE AUTHOR

...view details