Apple First Foldable Phone:ಈಗಾಗಲೇ ಐಫೋನ್ ಮೂಲಕ ಜಾಗತಿಕ ಸೆಲ್ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್ ತನ್ನದೇ ಆದ ಛಾಪು ಮೂಡಿಸಿದೆ. ಇದೀಗಆಪಲ್ ಪ್ರಿಯರಿಗೊಂದು ಕ್ರೇಜಿ ಸುದ್ದಿ ಬಂದಿದೆ. ಕಂಪನಿಯು ಶೀಘ್ರದಲ್ಲೇ ತನ್ನ ಮೊದಲ ಫೋಲ್ಡಬಲ್ ಫೋನ್ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ ಎಂದು ಸುಳಿವು ನೀಡಿದಂತೆ ತೋರುತ್ತಿದೆ. ಆಪಲ್‌ನಿಂದ ಮುಂಬರುವ ಫೋಲ್ಡಬಲ್ ಫೋನ್‌ಗಳ ಕುರಿತು ವದಂತಿಗಳು ಬಹಳ ಸಮಯದಿಂದ ಹರಿದಾಡುತ್ತಿವೆ. ಆದರೆ ಇತ್ತೀಚಿನ ವರದಿಗಳು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಂತಿವೆ.
ಮಾರುಕಟ್ಟೆಯಲ್ಲಿ ಆ್ಯಪಲ್ ಐಫೋನ್ಗಳ ಕ್ರೇಜ್ ಎಷ್ಟಿದೆ ಎಂದು ಹೇಳಬೇಕಾಗಿಲ್ಲ. ಕಂಪನಿ ತಂದಿರುವ ಹೊಸ ಉತ್ಪನ್ನಗಳಿಗಾಗಿ ಟೆಕ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಪಲ್ ಹೊಸದನ್ನು ಏನು ತರುತ್ತದೆ? ಇದು ಯಾವ ಹೊಸ ವೈಶಿಷ್ಟ್ಯಗಳನ್ನು ನೀಡುತ್ತದೆ? ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ.
ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿವೆ. ಇದರೊಂದಿಗೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಈ ವಿಭಾಗದಲ್ಲಿ ಹೊಸ ಮಾದರಿಗಳನ್ನು ತರಲು ಆಸಕ್ತಿ ತೋರಿಸುತ್ತಿವೆ. ಈ ಕ್ರಮದಲ್ಲಿ ಈಗಾಗಲೇ ಹಲವು ಕಂಪನಿಗಳ ಫೋಲ್ಡಬಲ್ ಫೋನ್ಗಳು ಮಾರುಕಟ್ಟೆ ಪ್ರವೇಶಿಸಿ ಸದ್ದು ಮಾಡಿವೆ. ಆದರೆ ಈಗ ಆಪಲ್ ಕೂಡ ಈ ವಿಭಾಗಕ್ಕೆ ಕಾಲಿಟ್ಟು ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದೆಯಂತೆ.