Android 15 Update:ಆಂಡ್ರಾಯ್ಡ್ ಅಪ್ಡೇಟ್ಗಾಗಿ ಕಾಯುತ್ತಿರುವವರಿಗೆ ಗೂಗಲ್ ಗುಡ್ ನ್ಯೂಸ್ ನೀಡಿದೆ. ಆಂಡ್ರಾಯ್ಡ್ 15 ಸ್ಥಿರ ಆವೃತ್ತಿಯನ್ನು ಪಿಕ್ಸೆಲ್ ಫೋನ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಪಿಕ್ಸೆಲ್ 9 ಸರಣಿಯ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಆಯ್ದ ಪಿಕ್ಸೆಲ್ ಮೊಬೈಲ್‌ಗಳಿಗೆ ಆಂಡ್ರಾಯ್ಡ್ 15 ಅಪ್‌ಡೇಟ್ ಈಗ ಹೊರತರುತ್ತಿದೆ.
ಆಂಡ್ರಾಯ್ಡ್ 15 ಜೊತೆಗೆ, ಅಕ್ಟೋಬರ್ ಪಿಕ್ಸೆಲ್ ಡ್ರಾಪ್‌ನ ಭಾಗವಾಗಿ ಪಿಕ್ಸೆಲ್‌ಗಳಿಗೆ ಬರುವ ಹೊಸ ವೈಶಿಷ್ಟ್ಯಗಳ ಪಟ್ಟಿಯನ್ನು ಗೂಗಲ್ ಘೋಷಿಸಿದೆ. ಬಳಕೆದಾರರ ಗೌಪ್ಯತೆ ಮತ್ತು ಬಹುಕಾರ್ಯಕ ಸಾಮರ್ಥ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಗೂಗಲ್ ಇವುಗಳನ್ನು ಹೊರ ತಂದಿದೆ.
ಆಂಡ್ರಾಯ್ಡ್ 15 ನಲ್ಲಿನ ಪ್ರಮುಖ ಬದಲಾವಣೆಗಳು ಇವು: ಆಂಡ್ರಾಯ್ಡ್ 15 ನೊಂದಿಗೆ ಪಿಕ್ಸೆಲ್ ಮೊಬೈಲ್‌ಗಳಲ್ಲಿ ಬರುತ್ತಿರುವ ಕೆಲವು ಪ್ರಮುಖ ಬದಲಾವಣೆಗಳನ್ನು ಗೂಗಲ್ ವಿವರಿಸಿದೆ. ಇವುಗಳಲ್ಲಿ ಡಿಸೈನ್ ಬದಲಾವಣೆಗಳು, ಥೆಫ್ಟ್ ಡಿಟೆಕ್ಷನ್ ಲಾಕ್, ಪ್ರೈವೇಟ್ ಸ್ಪೇಸ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
1. ಥೆಫ್ಟ್ ಡಿಟೆಕ್ಷನ್ ಲಾಕ್:ಗೂಗಲ್ ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಥೆಫ್ಟ್ ಪ್ರೊಟೆಕ್ಷನ್ ಅಡಿ 3 ಹೊಸ ಭದ್ರತಾ ವೈಶಿಷ್ಟ್ಯಗಳನ್ನು ತಂದಿದೆ. ಇವುಗಳು ಕಳ್ಳತನದ ಸಂದರ್ಭದಲ್ಲಿ ಫೋನ್‌ನ ಸ್ಕ್ರೀನ್ ಆಟೋಮೆಟಿಕ್ ಆಗಿ ಲಾಕ್ ಮಾಡುತ್ತವೆ.
- ಸ್ಮಾರ್ಟ್ ಲಾಕ್ ಫೀಚರ್:ಸ್ಮಾರ್ಟ್ ಫೋನ್ ಕಳ್ಳತನವಾದರೆ, ಈ ಫೀಚರ್ AI ತಂತ್ರಜ್ಞಾನದೊಂದಿಗೆ ಪತ್ತೆ ಮಾಡುತ್ತದೆ ಮತ್ತು ತಕ್ಷಣವೇ ಮೊಬೈಲ್‌ನ ಸ್ಕ್ರೀನ್ ಅನ್ನು ಆಟೋಮೆಟಿಕ್ ಆಗಿ ಲಾಕ್ ಮಾಡುತ್ತದೆ.
- ಆಫ್‌ಲೈನ್ ಡಿವೈಸ್ ಲಾಕ್:ಮೇಲಿನ ಥೆಫ್ಟ್ ಲಾಕ್ ವೈಶಿಷ್ಟ್ಯವು ಕಳ್ಳತನ ಪತ್ತೆಹಚ್ಚಲು ವಿಫಲವಾದರೆ ಆಫ್‌ಲೈನ್ ಡಿವೈಸ್ ಲಾಕ್, ರಿಮೋಟ್ ಲಾಕ್ ವೈಶಿಷ್ಟ್ಯಗಳು ಸಹಾಯಕ್ಕೆ ಬರುತ್ತವೆ. ಈ ಆಫ್‌ಲೈನ್ ಡಿವೈಸ್ ಲಾಕ್ ವೈಶಿಷ್ಟ್ಯವು ನಿಮ್ಮ ಮೊಬೈಲ್ ಇಂಟರ್ನೆಟ್ ಆಫ್ ಆಗಿರುವಾಗಲೂ ಸಹ ಕಳ್ಳರು ನಿಮ್ಮ ಕದ್ದ ಮೊಬೈಲ್‌ನ ಸಂಪರ್ಕವನ್ನು ಕಡಿತಗೊಳಿಸಲು ಪ್ರಯತ್ನಿಸಿದಾಗ ಆಟೋಮೆಟಿಕ್ ಆಗಿ ಸ್ಕ್ರೀನ್ ಅನ್ನು ಲಾಕ್ ಮಾಡುತ್ತದೆ.
- ರಿಮೋಟ್ ಲಾಕ್ ವೈಶಿಷ್ಟ್ಯ:ನಿಮ್ಮ ಕದ್ದ ಮೊಬೈಲ್ ಫೋನ್‌ನ ಸ್ಕ್ರೀನ್ ಅನ್ನು ಮತ್ತೊಂದು ಸಾಧನದ ಮೂಲಕ ಲಾಕ್ ಮಾಡಲು ರಿಮೋಟ್ ಲಾಕ್ ವೈಶಿಷ್ಟ್ಯವನ್ನು ಬಳಸಬಹುದು. ಫೋನ್ ಕದ್ದಿದ್ದರೆ ಇದು android.com/lock ಲಿಂಕ್‌ಗೆ ಪ್ರವೇಶವನ್ನು ಅನುಮತಿಸುತ್ತದೆ. ಈ ವೈಶಿಷ್ಟ್ಯಗಳು ಈಗ ಇತ್ತೀಚಿನ ಆಂಡ್ರಾಯ್ಡ್ 15 ಆವೃತ್ತಿಗಳೊಂದಿಗೆ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಗೂಗಲ್ ಹೇಳಿದೆ.
2. ಪ್ರೈವೇಟ್ ಸ್ಪೇಸ್: Google ಪ್ರಕಾರ.. Android 15 ನಲ್ಲಿನ ಈ ಪ್ರೈವೇಟ್ ಸ್ಪೇಸ್ ವೈಶಿಷ್ಟ್ಯವು ಸೂಕ್ಷ್ಮ ಅಪ್ಲಿಕೇಶನ್‌ಗಳನ್ನು ಬಳಸಲು ತುಂಬಾ ಉಪಯುಕ್ತವಾಗಿದೆ. ಒಮ್ಮೆ ನಾವು ಈ ಪ್ರೈವೇಟ್ ಸ್ಪೇಸ್ ವೈಶಿಷ್ಟ್ಯ ಲಾಕ್ ಮಾಡಿದರೆ ಈ ಅಪ್ಲಿಕೇಶನ್‌ಗಳು ಇತರರಿಗೆ ಗೋಚರಿಸುವುದಿಲ್ಲ. ಇದರ ಹೊರತಾಗಿ, ಅಪ್ಲಿಕೇಶನ್ ಲಿಸ್ಟ್, ಇತ್ತೀಚಿನ ಅಪ್ಲಿಕೇಶನ್‌ಗಳ ವೀಕ್ಷಣೆ, ಸೆಟ್ಟಿಂಗ್‌ಗಳು ಮತ್ತು ಅಧಿಸೂಚನೆಗಳನ್ನು ತೋರಿಸದಿರಲು ಈ ವೈಶಿಷ್ಟ್ಯವು ಉಪಯುಕ್ತವಾಗಿದೆ.