MG ZS Hybrid+:ಯುಕೆ ಕಾರು ತಯಾರಕ ಎಂಜಿ ಮೋಟಾರ್ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಎಂಜಿ ಝಡ್‌ಎಸ್‌ನ ಹೊಸ ತಲೆಮಾರಿನ ಮಾದರಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 2025 ರ ಮಾದರಿಯಲ್ಲಿ MG ZS ನ ಬಾಹ್ಯ ಮತ್ತು ಒಳಭಾಗದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.
MG ZS ಅನ್ನು ಜಾಗತಿಕವಾಗಿ ಪರಿಚಯಿಸಲಾಗಿದೆ ಮತ್ತು ಹೈಬ್ರಿಡ್+ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಈ ಮಾದರಿಯ ಎರಡು ಆವೃತ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ, ಒಂದು ಆಲ್ - ಎಲೆಕ್ಟ್ರಿಕ್ ಆವೃತ್ತಿಯ MG ZS EV ಎಂದು ಮಾರಾಟ ಮಾಡಲಾಗುತ್ತದೆ. ಇನ್ನೊಂದು ICE ಮಾದರಿಯನ್ನು MG ಆಸ್ಟರ್ ಎಂದು ಮಾರಾಟ ಮಾಡಲಾಗುತ್ತಿದೆ.
ಬಾಹ್ಯ ವಿನ್ಯಾಸ: ಕಾರಿನ ಹೊರಭಾಗದ ಬಗ್ಗೆ ಮಾತನಾಡುವುದಾದರೆ, ಹೊಸ MG ZS ಹೆಚ್ಚು ಆಕ್ರಮಣಕಾರಿ ಮುಂಭಾಗ ಹೊಂದಿದೆ. ಇದರಲ್ಲಿ ಮರು ವಿನ್ಯಾಸಗೊಳಿಸಲಾದ ದೊಡ್ಡ ಗ್ರಿಲ್, ಅಗಲವಾಗಿ ಮತ್ತು ಉದ್ದವಾಗಿ ವಿನ್ಯಾಸಗೊಳಿಸಲಾದ ಏರ್ ಡ್ಯಾಂಪ್, ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಜೋಡಿಸುವ ಪೂರ್ಣ - ಅಗಲವಾದ ಲೈಟ್ ಬಾರ್ ಅನ್ನು ಒಳಗೊಂಡಿದೆ. ಇದರಲ್ಲಿ ಸ್ಮೂತ್ ಆದ LED DRL ಗಳನ್ನು ಒದಗಿಸಲಾಗಿದೆ. MG ಲೋಗೋವನ್ನು ಸಹ ಮರುಸ್ಥಾಪಿಸಲಾಗಿದೆ.
ನಾವು ಸೈಡ್ ಪ್ರೊಫೈಲ್ ನೋಡಿದರೆ, ಇದು ಹಿಂದಿನ ಮಾದರಿಯಂತೆಯೇ ಇರುತ್ತದೆ. ಆದರೂ ಅಲಾಯ್ ವೀಲ್ ಮಾದರಿಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದಿದೆ. ಹಿಂಭಾಗದ ಬಂಪರ್ ಮರು ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಟೈಲ್‌ಗೇಟ್‌ನಲ್ಲಿ ಹೊಸ ಬ್ರ್ಯಾಂಡ್ ಲೋಗೋ, ಇಂಟಿಗ್ರೇಟೆಡ್ ಸ್ಟಾಪ್ ಲ್ಯಾಂಪ್‌ನೊಂದಿಗೆ ವಿಸ್ತೃತ ಹಿಂಭಾಗದ ಸ್ಪಾಯ್ಲರ್, ಹಿಂಭಾಗದ ವೈಪರ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಔಟ್‌ಲೆಟ್‌ಗಳನ್ನು ಹೋಲುವ ಸಿಲ್ವರ್ ಫಾಕ್ಸ್ ಮಾದರಿಯನ್ನು ಒಳಗೊಂಡಿವೆ.