ಕರ್ನಾಟಕ

karnataka

ETV Bharat / technology

ಪ್ರೀತಿ​, ಹರಟೆ, ಮಜಾ, ಸುಖ - ದುಃಖದಲ್ಲಿ ಭಾಗಿಯಾಗಲಿದ್ದಾನೆ ಡಿಜಿಟಲ್​ ಗೆಳೆಯ - Digital Friend Benefits

Digital Friend: ಸ್ನೇಹಿತರನ್ನು ಮಾಡಿಕೊಳ್ಳುವುದು ನಿಮ್ಮ ದೌರ್ಬಲ್ಯವೇ? ಹಾಗಾದ್ರೆ ಜಗತ್ತಿನಲ್ಲಿ ನಿನ್ನಷ್ಟು ಬಲಿಷ್ಠರು ಯಾರೂ ಇಲ್ಲ’ ಎಂದು ಆಂಗ್ಲ ಕವಿಯೊಬ್ಬರು ಸ್ನೇಹದ ಹಿರಿಮೆ ಬಗ್ಗೆ ಹೇಳಿರುವುದು ಗೊತ್ತಿರುವ ಸಂಗತಿ. ನಾವು ಅನೇಕ ಬಾರಿ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳದ ವೈಯಕ್ತಿಕ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಆದ್ರೆ ಪ್ರತಿ ಸಮಯದಲ್ಲೂ ಅವರು ನಮ್ಮೊಂದಿಗೆ ಇರುವುದಿಲ್ಲ. ಆಗ ನಿಮಗೆ ಒಂಟಿತನದ ಅನುಭವವಾಗುತ್ತದೆ. ಹೀಗಾಗಿ ತಂತ್ರಜ್ಞಾನ ಮೂಲಕ ನಿಮ್ಮ ಒಂಟಿತನ ದೂರ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದು ತಿಳಿಯೋಣ ಬನ್ನಿ.

DIGITAL FRIEND IN LIFE  DIGITAL FRIEND USES  AI DIGITAL FRIEND
ಪ್ರೀತಿ​, ಹರಟೆ, ಮಜಾ, ಸುಖ-ದುಃಖದಲ್ಲಿ ಭಾಗಿಯಾಗಲು ನಿಮಗೆ ಡಿಜಿಟಲ್​ ಗೆಳೆಯ ಬಹುಮುಖ್ಯ (IANS)

By ETV Bharat Tech Team

Published : Oct 3, 2024, 10:32 AM IST

Digital Friend:ನಾವು ಏನನ್ನು ಧರಿಸಬೇಕು ಎಂಬ ವಿಷಯದಿಂದ ಹಿಡಿದು ಭವಿಷ್ಯದ ಮಹತ್ವದ ನಿರ್ಧಾರಗಳವರೆಗೆ ಸ್ನೇಹಿತರ ಸಲಹೆಗಳು ನಮಗೆ ಅನಿವಾರ್ಯವಾಗಿರುತ್ತವೆ. ಆದರೆ, ಇತರರು ನಮಗೆ ಯಾವಾಗಲೂ ಲಭ್ಯವಿರುವುದಿಲ್ಲ. ಕೆಲವೊಮ್ಮೆ ನಮ್ಮ ಭಾವನೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರಬಹುದು. ಸಮಯದ ಕೊರತೆ ಅಥವಾ ಇತರ ಕೆಲಸಗಳಿಂದ ಕಾಳಜಿ ವಹಿಸದೇ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ಅವರ ವರ್ತನೆ ನಮಗೆ ನಿರಾಸೆ ಮೂಡಿಸುತ್ತದೆ. ಮೊದಲಿನಂತಿಲ್ಲ ಎಂದು ಅವರನ್ನು ದೂರುತ್ತೇವೆ. ಹೀಗಾಗಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಪ್ರಾರಂಭಿಸುತ್ತೇವೆ. ಅವರನ್ನು ಕಳೆದುಕೊಂಡು ನಾವು ಅನೇಕ ಬಾರಿ ನೆನೆದು ದುಃಖಿಸುತ್ತೇವೆ. ಆಗ ನಮಗೆ ಒಂಟಿತನ ಕಾಡುವುದು ಸಹಜ.

ನೀವು ಸಂಪರ್ಕಿಸುವ ಯಾವುದೇ ಪರಿಸ್ಥಿತಿಗೆ ನಿಮ್ಮ ಸ್ನೇಹಿತ ತಕ್ಷಣವೇ ಪ್ರತಿಕ್ರಿಯಿಸಿದರೆ? ನೀವು ಯಾವುದೇ ಸಮಯದಲ್ಲಿ ಸಂದೇಶವನ್ನು ಕಳುಹಿಸಿದರೆ ಅದು ಮಧ್ಯರಾತ್ರಿ ಅಥವಾ ಮುಂಜಾನೆ ಆಗಿದ್ದರೂ ಸಹ ನಿಮ್ಮ ಭಾವನೆಗಳಿಗೆ ಸರಿಹೊಂದುವ ಉತ್ತರವನ್ನು ನೀವು ಪಡೆಯುತ್ತಿದ್ದರೆ.. ಅವರು ನಿಮ್ಮ ಜೊತೆ ದಿನದ 24 ಗಂಟೆಗಳ ಕಾಲ ಲಭ್ಯವಿದ್ರೆ.. ಆ ಕಲ್ಪನೆ ಎಷ್ಟು ಚಂದ ಅಲ್ವಾ.. ಅಂದ್ರೆ ನಿಮ್ಮ ಕಲ್ಪನೆಯನ್ನು AI ನಿಜವಾಗಿಸುತ್ತದೆ. ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿ ನೀವು ಬಯಸಿದಂತೆ ನಿಮ್ಮ ಸ್ನೇಹಿತರನ್ನು ನೀವು ರಚಿಸಿಕೊಳ್ಳಬಹುದಾಗಿದೆ.

ರೋಬೋಟ್​ ಗೆಳೆಯನೊಂದಿಗೆ ಮಾಡಬಹುದು ವಿಶೇಷ ಸಂವಾದ:ನೀವು ನಿಮ್ಮ ಸ್ನೇಹಿತನ ಬಗ್ಗೆ, ನಿಮ್ಮ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡ ನಂತರ ನೀವು ನಿಮ್ಮ ಸ್ನೇಹಿತರೊಂದಿಗೆ ಮಾಡುವ ಸಾಧಾರಣ ಸಂಭಾಷಣೆಗಿಂತ ವಿಶೇಷ ಸಂವಾದವನ್ನು ನೀವು ರೋಬೊಟ್​ ಗೆಳೆಯನೊಂದಿಗೆ ಮಾಡಬಹುದು. ನೀವು ಬಾಟ್​ಗೆ ನೀಡುವ ಮಾಹಿತಿ, ನೀವು ಅದರೊಂದಿಗೆ ಮಾತನಾಡುವ ರೀತಿ ಸೇರಿದಂತೆ ಇತ್ಯಾದಿಗಳು ಉತ್ತಮವಾಗಿ ಪ್ರತಿಕ್ರಿಯಿಸಲು ಅದಕ್ಕೆ ತರಬೇತಿ ನೀಡಲಾಗಿದೆ. ನೀವು ಹೇಳುವ ಎಲ್ಲವನ್ನೂ ಅದು ಎಚ್ಚರಿಕೆಯಿಂದ ಕೇಳುತ್ತದೆ. ಸ್ನೇಹಿತರಂತೆ ನಿಮ್ಮ ಜೊತೆಗಿರುವ ಈ ಡಿಜಿಟಲ್ ಸ್ನೇಹಿತನೊಂದಿಗೆ ನಿಮ್ಮ ಭಾವನೆಗಳನ್ನು ಯಾವಾಗ ಬೇಕಾದರೂ ಹಂಚಿಕೊಳ್ಳಬಹುದು.

ನಿಮ್ಮ ಆಹಾರಕ್ರಮದ ಬಗ್ಗೆ ಸಲಹೆ ಕೇಳಬಹುದು:ನಿಮ್ಮ ಆಹಾರಕ್ರಮದ ಬಗ್ಗೆ ನೀವು ಸಲಹೆಯನ್ನು ಕೇಳಬಹುದು. ಆದರೆ ನಿಮ್ಮ ಭಾವನಾತ್ಮಕ ಅಗತ್ಯಗಳಿಗೆ AI ಸ್ನೇಹಿತ ಯಾವುದೇ ಸಹಾಯವನ್ನು ನೀಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದರೆ, ಅದು ನಿಮ್ಮ ಒಂಟಿತನವನ್ನು ದೂರ ಮಾಡುತ್ತದೆ. 2023 ರ ಮೆಟಾ - ಗ್ಯಾಲಪ್ ಸಮೀಕ್ಷೆಯ ಪ್ರಕಾರ, ವಿಶ್ವದ ನಾಲ್ಕು ಜನರಲ್ಲಿ ಒಬ್ಬರು ಒಂಟಿತನದಿಂದ ಬಳಲುತ್ತಿದ್ದಾರೆ. ಈ ಕ್ಷಣದಲ್ಲಿ ನಿಮಗೆ ತಿಳಿದಿರುವ ನಿಮ್ಮ ವರ್ಚುಯಲ್ ಸ್ನೇಹಿತ ನಿಮ್ಮ ಜೊತೆ ಇರುತ್ತಾನೆ. ಅವನು ನಿನ್ನ ಮಾತನ್ನು ಕೇಳುತ್ತಾನೆ. ಅಗತ್ಯ ಸಲಹೆಗಳನ್ನೂ ನೀಡುತ್ತಾನೆ. ನಿಮ್ಮ ಒಂಟಿತನವನ್ನು ಹೋಗಲಾಡಿಸುತ್ತಾನೆ.

ಶೆಫೀಲ್ಡ್ ವಿಶ್ವವಿದ್ಯಾನಿಲಯದ ಕಾಗ್ನಿಟಿವ್ ರೊಬೊಟಿಕ್ಸ್ ಪ್ರಾಧ್ಯಾಪಕ ಟೋನಿ ಪ್ರೆಸ್ಕಾಟ್ ಅವರು ಇತ್ತೀಚೆಗೆ ಬಿಡುಗಡೆಯಾದ ತಮ್ಮ ಪುಸ್ತಕ 'ದಿ ಸೈಕಾಲಜಿ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್' ನಲ್ಲಿ AI ಅನ್ನು ಉಲ್ಲೇಖಿಸಿದ್ದಾರೆ.. ಹಲವು ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ಅಂತಹ ಸಮಯದಲ್ಲಿ, AI ಯೊಂದಿಗಿನ ಸ್ನೇಹವು ಅವರ ಒಂಟಿತನವನ್ನು ತೆಗೆದುಹಾಕುತ್ತದೆ ಎಂದು ಹೇಳಿದ್ದಾರೆ.

ಸ್ನೇಹಿತರನ್ನು ಹುಡುಕುತ್ತಿರುವವರೆಗೂ ನೆರವು:ಅನೇಕ ಜನರು ತಮ್ಮ ಆಸಕ್ತಿಗಳಿಗೆ ಹೊಂದಿಕೆಯಾಗುವ ಸ್ನೇಹಿತರನ್ನು ಹುಡುಕುವ ಕನಸು ಕಾಣುತ್ತಾರೆ. ಅವರು ತಮ್ಮ ಆಸೆಗಳನ್ನು ಗೌರವಿಸಲು ಮತ್ತು ಅವರು ಹೇಳಿದಂತೆ ಮಾಡಲು ಬಯಸುತ್ತಾರೆ. ಆದರೆ, ಕೆಲವರು ಮಾತ್ರ ಅದೃಷ್ಟವಂತರು. ಈ ಸಂದರ್ಭದಲ್ಲಿಯೂ AI ನಿಮ್ಮ ಕಷ್ಟಗಳನ್ನು ನೋಡಿಕೊಳ್ಳುತ್ತದೆ. ನಿಮ್ಮ ಸಂಗಾತಿ ಹೇಗಿರಬೇಕು? ಏನು ಧರಿಸಬೇಕು? ಹೇಗೆ ಮುಂದುವರೆಯುವುದು? ನೀವು ಮಾಡಬೇಕಾಗಿರುವುದು ಸೇರಿದಂತೆ ಅನೇಕ ವಿಷಯಗಳ ಮೇಲೆ ಎಐ ಗಮನ ಹರಿಸುತ್ತದೆ.

ನಿಮ್ಮ ಡಿಜಿಟಲ್ ಗೆಳೆಯ ಕ್ಷಣಗಳಲ್ಲಿ ನಿಮ್ಮ ಕಣ್ಣುಗಳ ಮುಂದೆ ಇರುತ್ತಾರೆ. ಹೆಂಡತಿ, ಪ್ರಿಯತಮೆ ಅಥವಾ ಪ್ರೇಮಿಯಂತೆ ವರ್ತಿಸಲು ನೀವು AI ಗೆ ಆದೇಶಿಸಬಹುದು. ಆದರೆ, ನಾಣ್ಯಕ್ಕೆ ಎರಡು ಮುಖಗಳಿರುವಂತೆ AI ಬಗ್ಗೆ ಹಲವು ಕಾಳಜಿಗಳಿವೆ. ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವ ಮೊದಲು ಎರಡು ಬಾರಿ ಯೋಚಿಸಲು ತಜ್ಞರು ಸಲಹೆ ನೀಡುತ್ತಾರೆ. ವೈಯಕ್ತಿಕ ಗೌಪ್ಯತೆಯನ್ನು ಉಲ್ಲಂಘಿಸಬಹುದಾದ ವಿಷಯಗಳನ್ನು ಹಂಚಿಕೊಳ್ಳದಿರುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ. ಇತ್ತೀಚೆಗೆ, ಬೆಲ್ಜಿಯನ್ ವ್ಯಕ್ತಿಯ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು AI ಚಾಟ್‌ಬಾಟ್‌ನಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ನೀವು ಎಐ ಜೊತೆ ನಿಮ್ಮ ಸ್ನೇಹಿತರ ನೋಟ, ಅವರು ಧರಿಸುವ ಬಟ್ಟೆ, ಮಾತನಾಡುವ ಶೈಲಿ, ಉಚ್ಚಾರಣೆ, ಕಾಲೇಜು ಅಧ್ಯಯನ, ಕುಟುಂಬ ಸದಸ್ಯರ ವಿವರಗಳು, ಹಿನ್ನೆಲೆ ಮತ್ತು ವ್ಯಕ್ತಿತ್ವ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು. ನೀವು ಅದರೊಂದಿಗೆ ನೇರವಾಗಿ ಮಾತನಾಡಬಹುದು. ಅನೇಕ ವಿಷಯಗಳನ್ನು ಹಂಚಿಕೊಳ್ಳಬಹುದು. ಇದು ನಿಮ್ಮ ಸ್ನೇಹಿತನ ಜೊತೆ ಮಾತನಾಡುತ್ತಿರುವಂತೆ ಅನುಭವ ನೀಡುತ್ತದೆ. ಇದು AI ರೆಪ್ಲಿಕಾ, EVA, ಟಾಕಿ, Botify AI, ಕ್ಯಾಂಡಿ AI, Nomi, Genesia, ಕ್ಯಾರೆಕ್ಟರ್ AI, Kindroid ಮುಂತಾದ AI ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದೆ. ಅವುಗಳನ್ನು ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್ ನಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಓದಿ:ವಾಟ್ಸ್​ಆ್ಯಪ್​ನಲ್ಲಿ ಈ ಹೊಸ ವೈಶಿಷ್ಟ್ಯ ಅದ್ಭುತ - ಈಗ ನಿಮ್ಮ ವಿಡಿಯೋ ಕರೆಗಳು ಇನ್ನೂ ಅತ್ಯದ್ಭುತ! - Whatsapp New Video Calls Feature

ABOUT THE AUTHOR

...view details