ಬೆಂಗಳೂರು:ವಾಟರ್ ಟ್ಯಾಂಕರ್ ಹರಿದು ಯುವಕ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಕೊತ್ತನೂರು ದಿಣ್ಣೆಯ ಆರ್ಬಿಐ ಲೇಔಟ್ನಲ್ಲಿ ನಡೆದಿದೆ. ಮೃತನನ್ನು ಕಿರಣ್ ಕುಮಾರ್ (21) ಎಂದು ಗುರುತಿಸಲಾಗಿದೆ. ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್, ಇಂದು ಬೆಳಗ್ಗೆ 9.30 ಸುಮಾರಿಗೆ ಕೆಲಸಕ್ಕೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ವಾಟರ್ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ನೆಲಕ್ಕೆ ಬಿದ್ದ ಕಿರಣ್ ಕುಮಾರ್ ತಲೆ ಮೇಲೆ ಟ್ಯಾಂಕರ್ ಹರಿದ ಪರಿಣಾಮ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಂಗಳೂರು: ನೀರಿನ ಟ್ಯಾಂಕರ್ ಹರಿದು ಯುವಕ ಸಾವು - Young man died in accident - YOUNG MAN DIED IN ACCIDENT
ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ನೀರಿನ ಟ್ಯಾಂಕರ್, ಕೆಳಗೆ ಬಿದ್ದ ಯುವನ ತಲೆ ಮೇಲೆ ಹರಿದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಾಂದರ್ಭಿಕ ಚಿತ್ರ (ETV Bharat)
Published : Jul 2, 2024, 12:06 PM IST
ಘಟನಾ ಸ್ಥಳಕ್ಕೆ ಕೆ.ಎಸ್. ಲೇಔಟ್ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಹಾಸನ: ಓವರ್ ಟೇಕ್ ವೇಳೆ ಭೀಕರ ಅಪಘಾತ, ಕಾರಿನಲ್ಲಿದ್ದ ಇಬ್ಬರು ದಾರುಣ ಸಾವು