ETV Bharat / state

ಒಂದೇ ರಾತ್ರಿಯಲ್ಲಿ ನಾಲ್ಕು ಗ್ರಾಮಗಳಲ್ಲಿ ಸರಣಿ ಮನೆಗಳ್ಳತನ : ಬೆಚ್ಚಿಬಿದ್ದ ಜನ - HOUSE THEFT CASE

ದಾವಣಗೆರೆ ಜಿಲ್ಲೆಯಲ್ಲಿ ಒಂದೇ ರಾತ್ರಿ ನಾಲ್ಕು ಗ್ರಾಮಗಳಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Theft in houses
ಸರಣಿ ಮನೆಗಳ್ಳತನ (ETV Bharat)
author img

By ETV Bharat Karnataka Team

Published : Feb 10, 2025, 4:19 PM IST

ದಾವಣಗೆರೆ : ಒಂದೇ ರಾತ್ರಿಯಲ್ಲಿ ಒಂದು ಇಲ್ಲ ಎರಡು ಮನೆಗಳಲ್ಲಿ ಕಳ್ಳತನ ಆಗಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಅದ್ರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದೇ ರಾತ್ರಿ ಬರೋಬ್ಬರಿ 11 ಮನೆಗಳ ಸರಣಿ ಕಳ್ಳತನ‌ವಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಏಕಕಾಲಕ್ಕೆ ಹನ್ನೊಂದು ಮನೆಗಳಲ್ಲಿ ಕಳ್ಳತನ ಆಗಿರುವುದು ಜನರನ್ನು ಬೆಚ್ಚಿಬೀಳಿಸಿದೆ.‌ ಈ ಘಟನೆ‌ ಬಳಿಕ ಗ್ರಾಮಗಳಲ್ಲಿ ಜನ ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವಾಪಟ್ಟಣ ಹೋಬಳಿಯಲ್ಲಿ ಸರಣಿಗಳ್ಳತನ : ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ನಾಲ್ಕು ಗ್ರಾಮಗಳ ವ್ಯಾಪ್ತಿಯ ಹನ್ನೊಂದು ಮನೆಗಳಲ್ಲಿ ಕಳ್ಳತನ ಆಗಿದೆ ಎಂದು ಬಸವಾಪಟ್ಟಣ ಪೊಲೀಸರು ಮಾಹಿತಿ ನೀಡಿದ್ದಾರೆ. ಬಸವಾಪಟ್ಟಣ, ಹರೋಸಾಗರ, ಕೋಟ್ಯಾಳ, ಮರನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ 11 ಕಡೆ ಕಳ್ಳತನ ಆಗಿದೆ ಎಂದು ಮಾಹಿತಿ ಲಭಿಸಿದೆ.‌

ಇನ್ನು ಹರೋಸಾಗರ ಗ್ರಾಮದಲ್ಲಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚನ್ನಗಿರಿ ತಾಲೂಕು ಅಧ್ಯಕ್ಷ ಲಿಂಗರಾಜು ವಿ. ಮನೆಗೂ ಕಳ್ಳರು ಕನ್ನ ಹಾಕಿದ್ದಾರೆ. ಮನೆಯಲ್ಲಿದ್ದ 73 ಸಾವಿರ ನಗದು ಹಾಗೂ ಬೆಳ್ಳಿ ವಸ್ತುಗಳ ಕದ್ದೊಯ್ದಿದ್ದಾರೆ ಮನೆ ಮಾಲೀಕ ಲಿಂಗರಾಜು ಮಾಹಿತಿ ನೀಡಿದ್ದಾರೆ. ಬಸವಾಪಟ್ಟಣದಲ್ಲಿ 07, ಮರಬನಹಳ್ಳಿ 02 ಕಡೆ ಹಾಗೂ ಹರೋಸಾಗರ 02, ಕೋಟ್ಯಾಳ ಗ್ರಾಮದಲ್ಲಿ ಕಳ್ಳತನಕ್ಕೆ ವಿಫಲ‌ ಯತ್ನ ನಡೆದಿದೆ. ಅಲ್ಲದೆ ಕಳ್ಳತನ ನಡೆದ ಕಡೆ ಬೈಕ್ ದೊರೆತಿದ್ದು, ಆ ಬೈಕ್ ನಲ್ಲಿ ಕಳ್ಳತನಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ ಎಂದು ಲಿಂಗರಾಜು ಮಾಹಿತಿ ನೀಡಿದರು.‌

ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್ ಘಟನಾ ಸ್ಥಳಕ್ಕೆ ಭೇಟಿ ; ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್ ಅವರು ಪಿಎಸ್ಐ ವೀಣಾ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದರು. ಕಳ್ಳತನ ಪ್ರಕರಣಗಳಿಂದ ಬೆಚ್ಚಿಬಿದ್ದಿರುವ ಜನ್ರು ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್ ಅವರ ಬಳಿ ಆತಂಕ ವ್ಯಕ್ತಪಡಿಸಿದರು. ಧೈರ್ಯವಾಗಿ ಇರುವಂತೆ ಪೊಲೀಸ್​ ಅಧಿಕಾರಿ ಹೇಳಿದರು.

ಬಸವಾಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ಹೇಳಿದ್ದೇನು ; ಬಸವಾಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ವೀಣಾ ಅವರು ದೂರವಾಣಿಯಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿ "ಒಟ್ಟು ಹನ್ನೊಂದು ಕಡೆ ಮನೆಗಳ ಕಳ್ಳತನ‌‌ ಆಗಿದೆ ಎಂದು ಹೇಳಲಾಗುತ್ತಿದೆ.‌ ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಕೂಡ ಇನ್ನೂ ಪರಿಶೀಲನೆ ಮಾಡ್ತಿದ್ದೇವೆ. ಎಷ್ಟು ಹಣ ಚಿನ್ನಾಭರಣ,‌ ಬೆಳ್ಳಿ ಕಳ್ಳತನ‌‌ವಾಗಿದೆ ಎಂಬುದು ಮನೆಗಳ ಪರಿಶೀಲನೆ‌ ನಡೆಸಿದ ಬಳಿಕ ಮಾಹಿತಿ ಸಿಕ್ಕತಕ್ಷಣ ತಿಳಿಸಲಾಗುವುದು" ‌ಎಂದರು.

ಮನೆ ಮಾಲೀಕ ಲಿಂಗರಾಜು ಅವರು ಹೇಳಿದ್ದೇನು ? ಪತ್ರಕರ್ತ ಹಾಗೂ ಮನೆ ಮಾಲೀಕರಾದ ಲಿಂಗರಾಜು ವಿ. ಪ್ರತಿಕ್ರಿಯಿಸಿ "ನಮ್ಮ ಮನೆ ‌ಸೇರಿ ಒಟ್ಟು 10-11 ಮನೆಗಳಲ್ಲಿ ಮನೆಕಳ್ಳತನ ಆಗಿದೆ. ಅಕ್ಕನ ಮನೆಗೆ ತೆರಳಿದಾಗ, ಬೀಗ ಹಾಕಿದ ಮನೆಯಲ್ಲಿ ಕಳ್ಳತನ ಆಗಿದೆ. ಮನೆಯಲ್ಲಿದ್ದ ಒಟ್ಟು 73 ಸಾವಿರ ನಗದು ಹಾಗೂ ಬೆಳ್ಳಿ ವಸ್ತುಗಳ ಕಳ್ಳತನವಾಗಿದೆ. ಬಸವಾಪಟ್ಟಣದಲ್ಲಿ 07, ಮರಬನಹಳ್ಳಿ 02 ಕಡೆ ಹಾಗೂ ಹರೋಸಾಗರ 02, ಕೋಟ್ಯಾಳ ಗ್ರಾಮದಲ್ಲಿ ಕಳ್ಳತನ ಯತ್ನ ವಿಫಲ ಆಗಿದೆ"‌ ಎಂದು ತಿಳಿಸಿದರು.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.