ETV Bharat / bharat

21 ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕ! 22ನೇ ಪದವಿಗೆ ಅಧ್ಯಯನ: ಯಾರೀ ಶಿಕ್ಷಣ ಪ್ರೇಮಿ? - TEACHER GOT 21 DEGREES

ಪಂಜಾಬ್​ನ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು 21 ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಹೀಗಿದ್ದರೂ ಇವರ ಶಿಕ್ಷಣ ದಾಹ ನಿಂತಿಲ್ಲ. ಇದೀಗ 22ನೇ ಪದವಿಗೆ ಅಧ್ಯಯನ ನಡೆಸುತ್ತಿದ್ದಾರೆ.

21 ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕ ವಿಜಯ್​ಕುಮಾರ್​
21 ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕ ವಿಜಯ್​ಕುಮಾರ್​ (ETV Bharat)
author img

By ETV Bharat Karnataka Team

Published : Feb 10, 2025, 4:19 PM IST

ಮಾನ್ಸ(ಪಂಜಾಬ್​): 21 ಸ್ನಾತಕೋತ್ತರ ಪದವಿ, ರಾಷ್ಟ್ರಪತಿ ಪ್ರಶಸ್ತಿ, ಹಲವು ಚಿನ್ನದ ಪದಕಗಳು, ದೇಶದ ಎಲ್ಲ ಭಾಷೆಗಳ ಸುದ್ದಿ ಪತ್ರಿಕೆ, ಪುಸ್ತಕಗಳ ಸಂಗ್ರಹಕಾರರಾಗಿರುವ ಜೊತೆಗೆ ಶಿಕ್ಷಕ ವೃತ್ತಿ. ಇದು ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ಸಾಧನೆಯ ಪಟ್ಟಿ.

ಹೌದು, ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಒಂದಲ್ಲ, ಎರಡಲ್ಲ 21 ಸ್ನಾತಕೋತ್ತದ ಪದವಿ ಪಡೆದಿದ್ದಾರೆ. ಈ ಸಾಧಕನ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ 22ನೇ ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ.

ಈ ಶಿಕ್ಷಣ ದಾಹಿಯ ಹೆಸರು ವಿಜಯ್​ಕುಮಾರ್​. ಪಂಜಾಬ್​​ನ ಮಾನ್ಸ ಜಿಲ್ಲೆಯ ಬುಧ್ಲಾಡಾದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರು. ಶಿಕ್ಷಣದ ಮೇಲಿನ ಅವರ ಅಪರಿಮಿತ ಪ್ರೀತಿ ಮತ್ತು ಶ್ರದ್ಧೆ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ನಿವೃತ್ತಿಯ ಗೆರೆಯಲ್ಲಿರುವ ಪ್ರಾಂಶುಪಾಲರ ಶಿಕ್ಷಣ ಪ್ರೇಮಕ್ಕೆ ನಿವೃತ್ತಿಯೇ ಇಲ್ಲವಾಗಿದೆ. ಇದಕ್ಕೆ ಉದಾಹರಣೆ, ಈವರೆಗೂ 21 ಸ್ನಾತಕೋತ್ತರ ಪದವಿ ಪಡೆದಿದ್ದರೂ, 22ನೇ ಪದವಿಗೆ ಅಧ್ಯಯನದಲ್ಲಿ ತೊಡಗಿರುವುದು.

ಪದವಿ ಶಿಕ್ಷಣದ ವೇಳೆ ಶುರುವಾದ ಅಧ್ಯಯನದ ಗೀಳು: ಪ್ರಾಂಶುಪಾಲ ವಿಜಯ್​ಕುಮಾರ್​ ಅವರು ಪದವಿ ವ್ಯಾಸಂಗದ ವೇಳೆ ಶಿಕ್ಷಣದ ಗೀಳು ಬೆಳೆಸಿಕೊಂಡಿದ್ದಾರೆ. ಶಿಕ್ಷಕರಾಗಿ ಸರ್ಕಾರ ಹುದ್ದೆ ಸೇರಿದ ಬಳಿಕವೂ ಅಧ್ಯಯನ ನಿಲ್ಲಿಸಿಲ್ಲ. ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಿಂದ ವಿವಿಧ ವಿಷಯಗಳಲ್ಲಿ 17 ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಲಂಧರ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ, ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಜೈನ್ ವಿಶ್ವವಿದ್ಯಾಲಯದಿಂದಲೂ ಪದವಿ ಗಳಿಸಿದ್ದಾರೆ.

ಅಧ್ಯಯನದ ಸಾಲಿನಲ್ಲಿ ಅವರಿಗೆ ಪಂಜಾಬ್​ ವಿವಿ ಚಿನ್ನದ ಪದಕ ನೀಡಿದೆ. ವಿವಿಧ ಚಟುವಟಿಕೆಗಳಿಗಾಗಿ ರಾಷ್ಟ್ರಪತಿ ಪ್ರಶಸ್ತಿಯೂ ಇವರನ್ನು ಅರಸಿ ಬಂದಿದೆ. ಇದಲ್ಲದೆ, ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಅಧ್ಯಯನವನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿರುವ ಶಿಕ್ಷಕರು, ವಿವಿಧ ದೇಶಗಳು ಮತ್ತು ಭಾರತದ ಎಲ್ಲಾ ರಾಜ್ಯಗಳ ವಿವಿಧ ಭಾಷೆಗಳ ಸುದ್ದಿ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ, ವಿವಿಧ ಲೇಖಕರ 2500 ಕ್ಕೂ ಅಧಿಕ ಪುಸ್ತಕ, ಗ್ರಂಥಗಳನ್ನು ತಮ್ಮ ಮನೆಯ ಗ್ರಂಥಾಲಯದಲ್ಲಿ ಮಟ್ಟಸವಾಗಿ ಶೇಖರಿಸಿಟ್ಟಿದ್ದಾರೆ.

ಎಲ್ಲ ಕ್ಷೇತ್ರದ ಜ್ಞಾನಕ್ಕಾಗಿ ಅಧ್ಯಯನ: ಈ ಬಗ್ಗೆ ಮಾತನಾಡಿರುವ ಪ್ರಾಂಶುಪಾಲ ವಿಜಯ್​ಕುಮಾರ್​, "ಜೀವನದಲ್ಲಿ ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುವ ಮೂಲಕ ಜ್ಞಾನವನ್ನು ಪಡೆಯುವ ಬಯಕೆ ಇದೆ. ಹೀಗಾಗಿ, ವಿವಿಧ ವಿಷಯಗಳಲ್ಲಿ 21 ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಇದೀಗ, 22ನೇ ಪದವಿ ಅಧ್ಯಯನವೂ ಮುಗಿಯುವ ಹಂತದಲ್ಲಿದೆ. ಶಿಕ್ಷಣ ಯಾರೂ ಕಸಿಯಲಾಗದ ನಿಧಿ. ಜೀವನದ ಕೊನೆಯವರೆಗೂ ಅಧ್ಯಯನ ಮಾಡಿ, ಜ್ಞಾನಾರ್ಜನೆ ಮಾಡಿಕೊಳ್ಳಬೇಕು" ಎಂದು ಯುವ ಸಮೂಹಕ್ಕೆ ಸಲಹೆ ನೀಡುತ್ತಾರೆ.

ಇದನ್ನೂ ಓದಿ: 36 ಲಕ್ಷದ ಸಂಬಳ ತೊರೆದು ಸನ್ಯಾಸಿಯಾದ ಐಐಟಿ ಬಿಟೆಕ್ ಪದವೀಧರ: ಕುಂಭಮೇಳದಲ್ಲಿ ಭಾಗಿಯಾಗಿ ಸದ್ದು ಮಾಡಿದ ಅಭಯ್ ಸಿಂಗ್

ದಾವಣಗೆರೆ: ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಪದವೀಧರ ಯುವತಿಯರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.