ಕರ್ನಾಟಕ

karnataka

ETV Bharat / state

ನಮಗೆ ಲೋಕಾಯುಕ್ತ ತನಿಖೆಯ ಮೇಲೆ ಅನುಮಾನ: ಸ್ನೇಹಮಯಿ ಕೃಷ್ಣ - MUDA CASE

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂಬ ಅನುಮಾನ ಇದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

we-have-doubts-about-the-lokayukta-investigation-snehamai-krishna
ನಮಗೆ ಲೋಕಾಯುಕ್ತ ತನಿಖೆಯ ಮೇಲೆ ಅನುಮಾನ : ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Nov 20, 2024, 3:33 PM IST

Updated : Nov 20, 2024, 3:49 PM IST

ಮೈಸೂರು: ಮುಡಾ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತ ತನಿಖೆ ಬಗ್ಗೆ ನಮಗೆ ಮೊದಲಿನಿಂದಲೂ ಅನುಮಾನ ಇದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದು ನ್ಯಾಯಾಲಯದ ಗಮನಸೆಳೆಯಲು, ಎಲ್ಲ ರೀತಿಯಾ ದಾಖಲಾತಿಗಳನ್ನ ಸಂಗ್ರಹ ಮಾಡಿಕೊಂಡಿದ್ದೇನೆ ಎಂದು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ತನಿಖೆಯ ಬಗ್ಗೆ ಅನುಮಾನ ಇದೆ. ನಟೇಶ್‌ ವಿಚಾರಣೆ, ಮಾಜಿ ಮುಡಾ ಅಧ್ಯಕ್ಷ ಧ್ರುವಕುಮಾರ್‌ ಹೇಳಿಕೆ ಹಾಗೂ ಈ ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ನವೆಂಬರ್‌ 26 ಕ್ಕೆ ನ್ಯಾಯಾಲಯಕ್ಕೆ ಅಗತ್ಯ ದಾಖಲೆ ನೀಡಲಾಗುವುದು ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಸ್ನೇಹಮಯಿ ಕೃಷ್ಣ (ETV Bharat)

ಲೋಕಾಯುಕ್ತ ತನಿಖೆ ಬಗ್ಗೆ ಅನುಮಾನ: ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದರಿಂದ, ಈ ತನಿಖೆ ಬಗ್ಗೆ ನಮ್ಮಗೆ ಮೊದಲಿನಿಂದಲೂ ಅನುಮಾನ ಇದೆ. ನಿನ್ನೆ ರಾತ್ರಿ 7.30 ಸಮಯದಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಲೋಕಾಯುಕ್ತ ಕಚೇರಿಗೆ ಬಂದಿರುವ ಮಾಹಿತಿ ಇದೆ. ಒಬ್ಬ ತನಿಖೆ ವೇಳೆ ಅಧಿಕಾರಿಯನ್ನು ಭೇಟಿ ಮಾಡಬಾರದು ಎಂದು ನಿಯಮ ಇಲ್ಲ, ಆದರೆ ಭೇಟಿ ಮಾಡಿರುವ ಸಮಯ ಅನುಮಾನಕ್ಕೆ ಕಾರಣವಾಗಿದೆ. ಲೋಕಾಯುಕ್ತರು ನೋಟಿಸ್​​​ ನೀಡಿದ್ದರಿಂದ ಆಫೀಸ್​​ಗೆ ಬಂದಿದ್ರಾ? ಅಥವಾ ದೂರವಾಣಿ ಕರೆ ಮಾಡಿ ಬಂದಿದ್ರಾ? ಅವರೇ ಸ್ವಯಂ ಪ್ರೇರಿತರಾಗಿ ಬಂದಿದ್ರಾ? ಯಾವ ಉದ್ದೇಶಕ್ಕೆ ಆ ಸಮಯದಲ್ಲಿ ಬಂದಿದ್ದರೂ ಎಂದು ವಿಚಾರಣೆ ಆಗಬೇಕಿದೆ‌. ನಾನು ಈಗಾಗಲೇ ಲೋಕಾಯುಕ್ತ ಎಸ್.ಪಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ಸ್ನೇಹಮಯಿ ಕೃಷ್ಣಾ ಹೇಳಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಕೂಡಬೇಕು ಎಂದು ತೀರ್ಮಾನ ಆಗಿರುವುದು ಧ್ರುವಕುಮಾರ್ ಅವರ ಅವಧಿಯಲ್ಲಿ, ಹೀಗಾಗಿ ವಿಚಾರಣೆಗೆ ಕರೆದಿದ್ದಾರೆ. ಇವರು ಸಿಎಂ ಅವರರಿಂದಲೇ ಮುಡಾಕ್ಕೆ ಅಧ್ಯಕ್ಷರು ನೇಮಕಗೊಂಡರು ಮತ್ತು ಅವರ ಅಪ್ತರು ಅಗಿದ್ದರು. ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಪತ್ನಿಗೆ ಬದಲಿ ನಿವೇಶನ ಕೂಡುವ ಬಗ್ಗೆ ಮಾತು ಅಗಿದೆ. ಹೀಗಾಗಿ ಇಡೀ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದರೆ ಮತ್ತು ಆರೋಪಿಯಾಗುವ ಸಾಧ್ಯತೆ ಕೂಡಾ ಇದೆ ಎಂದು ಅವರು ತಿಳಿಸಿದ್ದಾರೆ.
ವರದಿ ಸಲ್ಲಿಕೆ ಬಳಿಕ ಎಲ್ಲ ಗೊತ್ತಾಗಲಿದೆ:ನಟೇಶ್ ಮತ್ತು ದಿನೇಶ್ ಅವರ ಅವಧಿಯಲ್ಲೇ ಅತಿ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಇದೆ. ಹೀಗಾಗಿ ನಟೇಶ್ ಅವರನ್ನು ಲೋಕಾಯುಕ್ತ ಪೋಲಿಸರು ಸುದೀರ್ಘವಾಗಿ ವಿಚಾರಣೆ ಮಾಡಿದ್ದಾರೆ. ಅವರ ವಿಚಾರಣೆ ಕುರಿತು ಅಂತಿಮ ವರದಿ ಸಲ್ಲಿಸಿದ ಮೇಲೆ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

’ಪ್ರಕರಣ ಸಿಬಿಐಗೆ ವಹಿಸಬೇಕು’ : ಲೋಕಾಯುಕ್ತದಲ್ಲಿ ನಡೆಯುತ್ತಿರುವ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದೇನೆ.‌ ಅದಕ್ಕೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸಂಗ್ರಹ ಮಾಡಿಕೊಂಡಿದ್ದೇವೆ. 26 ರಂದು ವಿಚಾರಣೆ ನಡೆಯಲಿದೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಸಿಬಿಐ ತನಿಖೆಗೆ ವಹಿಸುವ ಕಡೆ ನ್ಯಾಯಾಲಯದ ಗಮನ ಸಳೆಯಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನು ಓದಿ:ನಕ್ಸಲ್ ಚಟುವಟಿಕೆ ನಿಗ್ರಹಿಸಲು ವಿಕ್ರಂ ಗೌಡನ ಎನ್​ಕೌಂಟರ್; ಸಿಎಂ ಸಿದ್ದರಾಮಯ್ಯ

Last Updated : Nov 20, 2024, 3:49 PM IST

ABOUT THE AUTHOR

...view details