ನವದೆಹಲಿ: ಅಜ್ಮೀರ್ ದರ್ಗಾದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರು ಚಾದರ್ ಅನ್ನು ಅಜ್ಮೀರದ ಶರೀಫ್ ದರ್ಗಾಕ್ಕೆ ಸಮರ್ಪಿಸಲಿದ್ದಾರೆ.
ಅಜ್ಮೀರದ ಪ್ರಸಿದ್ಧ ಸೂಫಿ ಸಂತನಿಗೆ ಪ್ರಧಾನಿ ಮೋದಿ ಪ್ರತೀ ವರ್ಷ ಚಾದರ್ ಸಮರ್ಪಿಸುತ್ತಿದ್ದಾರೆ.
"ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಶುಭಾಶಯಗಳು. ಈ ವಿಶೇಷ ಸಂದರ್ಭ ಪ್ರತಿಯೊಬ್ಬರ ಬಾಳಿನಲ್ಲಿ ಸಂತೋಷ ಮತ್ತು ನೆಮ್ಮದಿ ತರಲಿ" ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಚಾದರ್ ಅನ್ನು ಸಚಿವ ರಿಜಿಜು ಅವರಿಗೆ ನೀಡುತ್ತಿರುವ ಫೋಟೊವನ್ನು ಸಚಿವರು ತಮ್ಮ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Greetings on the Urs of Khwaja Moinuddin Chishti. May this occasion bring happiness and peace into everyone’s lives. https://t.co/vKZDwEROli
— Narendra Modi (@narendramodi) January 2, 2025
"ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಮತ್ತು ಸಾಮರಸ್ಯ ಮತ್ತು ಸಹಾನುಭೂತಿಯ ಸಂದೇಶ ಹಾಗೂ ಗೌರವವನ್ನು ಈ ನಡವಳಿಕೆ ಪ್ರತಿಬಿಂಬಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
ಸೂಫಿ ಸಂತರು ನಿಧನ ಹೊಂದಿದ ದಿನ ಪ್ರತೀ ವರ್ಷ ಉರುಸ್ ಆಚರಿಸಲಾಗುತ್ತದೆ.
ಇತ್ತೀಚಿಗೆ ಸೂಫಿ ಸಂತರ ಈ ದರ್ಗಾದಲ್ಲಿ ಮೊದಲು ದೇಗುಲವಿತ್ತು. ಅದರ ಮೇಲೆ ದರ್ಗಾ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯೊಂದು ಕೋರ್ಟ್ ಮೊರೆ ಹೋಗಿತ್ತು. ಈ ರೀತಿ ಅನೇಕ ಅರ್ಜಿಗಳು ದೇಶದ ವಿವಿಧೆಡೆಯಿಂದ ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. (ಪಿಟಿಐ)
ಇದನ್ನೂ ಓದಿ: ಪೂಜಾ ಸ್ಥಳಗಳ ಕಾಯ್ದೆ ಅನುಷ್ಠಾನಕ್ಕೆ ಮನವಿ ಸಲ್ಲಿಸಿದ ಓವೈಸಿ : ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್