ಕಳಸ ತಾಲೂಕಿನಾದ್ಯಂತ ಭಾರಿ ಮಳೆ (ETV Bharat) ಚಿಕ್ಕಮಗಳೂರು :ಇಲ್ಲಿನಕಳಸ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದೆ. ದಕ್ಷಿಣ ಕಾಶಿ ಕಳಸೇಶ್ವರ ಸ್ವಾಮಿ ದೇವಸ್ಥಾನದ ಮೆಟ್ಟಿಲು ಮೇಲಿಂದ ಮಳೆ ನೀರು ಹರಿಯುತ್ತಿದೆ. ಭಾರಿ ಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಗಾಳಿ - ಮಳೆಗೆ ಮರ ಬಿದ್ದು ಗ್ರಾಮೀಣ ಭಾಗದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ಭದ್ರಾ ನದಿ ಒಳಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಮಲೆನಾಡಿಗಿಂತ ಬಯಲುಸೀಮೆ ಭಾಗವಾದ ಅಜ್ಜಂಪುರ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದೆ.
ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ (ETV Bharat) ಭಾರಿ ಮಳೆಗೆ ಗ್ರಾಮೀಣ ಭಾಗದ ಸೇತುವೆಗಳು ಜಲಾವೃತವಾಗಿವೆ. ಅಜ್ಜಂಪುರ ತಾಲೂಕಿನ ದಂದೂರು - ಚೀರನಹಳ್ಳಿ ಸಂಪರ್ಕ ಬಂದ್ ಆಗಿದೆ. ಶಿವನಿ ಸಮೀಪದ ಹೊಂಗೆ ಹಳ್ಳ ತುಂಬಿದ್ದರಿಂದ ಹಳ್ಳಿಗಳ ಸಂಪರ್ಕ ಬಂದ್ ಆಗಿದೆ. ಶಿವನಿಯ ಇತಿಹಾಸಿ ಪ್ರಸಿದ್ಧ ಶಿವನಿ ಕೆರೆಗೂ ನೀರು ಹರಿದು ಬರುತ್ತಿದೆ. ಭಾರಿ ಮಳೆ ಕಂಡು ಅಜ್ಜಂಪುರ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ನಿಯಂತ್ರಣ ತಪ್ಪಿದ ಕಾರು (ETV Bharat) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ - ಮಂಗಳೂರು ಮಾರ್ಗದಲ್ಲಿ ಭಾರಿ ಮಳೆಯಿಂದ ರಸ್ತೆ ಕಾಣದೇ ಚಾಲಕರೊಬ್ಬರು ನಿಯಂತ್ರಣ ತಪ್ಪಿ ತೋಟವೊಂದಕ್ಕೆ ಕಾರು ನುಗ್ಗಿಸಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ತೆರವಿನ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆ ನಿಂತ ಮೇಲೆ ಕಾರನ್ನ ಸ್ಥಳೀಯರು ತೆರವುಗೊಳಿಸಿದ್ದು, ಈ ವೇಳೆ ಸ್ಥಳೀಯರು ಹರಸಾಹಸವನ್ನೇ ಪಟ್ಟಿದ್ದಾರೆ.
ಚಾರ್ಮಾಡಿ ಘಾಟ್ನ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ 2 ಕೆಎಸ್ಆರ್ಟಿಸಿ ಬಸ್ಗಳು ಕೆಟ್ಟು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಕಿಲೋಮೀಟರ್ ಗಟ್ಟಲೆ ಸಂಜೆವರೆಗೂ ನೂರಾರು ವಾಹನಗಳು ನಿಂತಲ್ಲೇ ನಿಲ್ಲುವಂತಾಗಿತ್ತು.
ನಿರಂತರ ಮಳೆಯಲ್ಲೇ ಪ್ರವಾಸಿಗರು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಟ್ರಾಫಿಕ್ ನಡುವೆ ಆಂಬ್ಯುಲೆನ್ಸ್ ಸಿಲುಕಿ ಕೊಂಡಿದ್ದರಿಂದ ಮಂಗಳೂರಿಗೆ ಹೋಗುತ್ತಿದ್ದ ರೋಗಿ ಪರದಾಟ ನಡೆಸಿದ್ದಾರೆ. ಈ ವೇಳೆ ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್, ಮೂಡಿಗೆರೆ ಪೊಲೀಸರು ಹರಸಾಹಸಪಟ್ಟಿದ್ದಾರೆ.
ಇದನ್ನೂ ಓದಿ :ಚಿಕ್ಕಮಗಳೂರು: ನಿರಂತರ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್, ಪ್ರವಾಸಿಗರು ಹೈರಾಣ - RAIN IN CHIKMAGALURU