ಕರ್ನಾಟಕ

karnataka

ETV Bharat / state

ಭದ್ರಾವತಿಯ VISL ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ - H D Kumaraswamy

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದು, ಕಾರ್ಮಿಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

By ETV Bharat Karnataka Team

Published : Jun 30, 2024, 2:11 PM IST

VISL ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ
VISL ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ (ETV Bharat)

ಶಿವಮೊಗ್ಗ: ಸಂಕಷ್ಟದಲ್ಲಿರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಇಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ದೆಹಲಿಯಿಂದ ಹೊರಟು ನೇರವಾಗಿ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಬಳಿಕ ರಸ್ತೆ ಮಾರ್ಗವಾಗಿ ಭದ್ರಾವತಿಯ ಕಾರ್ಖಾನೆಗೆ ತಲುಪಿದ್ದಾರೆ.

ಇವರೂಂದಿಗೆ ಸೈಲ್​ನ ಅಧ್ಯಕ್ಷರು ಸಹ ಆಗಮಿಸಿದ್ದಾರೆ. ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿಯ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳ ಜೊತೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ವಿಮಾನ ನಿಲ್ದಾಣಕ್ಕೆ ತೆರಳಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಈಗಾಗಲೇ ಕಾರ್ಖಾನೆಯ ನಷ್ಟವನ್ನು ತೋರಿಸಿರುವ ಸೈಲ್ ಕೇಂದ್ರದ ನೀತಿ ಆಯೋಗವು ಕಾರ್ಖಾನೆಯನ್ನು ನಷ್ಟದ ಪಟ್ಟಿಗೆ ಸೇರಿಸಿ ಖಾಸಗೀಕರಣ ಹಾಗೂ ಮಾರಾಟಕ್ಕೆ ಆದೇಶ ಮಾಡಿತ್ತು. ಆದರೆ ಈ ಎರಡು ಪ್ರಕ್ರಿಯೆಗಳು ನಡೆಯಲಿಲ್ಲ. ಕಾರ್ಖಾನೆಯನ್ನು ಉನ್ನತೀಕರಣಗೊಳಿಸಿ, ಬಂಡವಾಳ ಹೊಡಿಕೆ ಮಾಡಿದರೆ, ಕಾರ್ಖಾನೆಯನ್ನು ಪ್ರಾರಂಭಿಸಬಹುದು. ಕಾರ್ಖಾನೆಗೆ ಬೇಕಾದ ಗಣಿಯ ತೊಡಕುಗಳನ್ನು ನಿವಾರಿಸಿದರೆ ಮೈಸೂರು ಮಹರಾಜರು ಪ್ರಾರಂಭಿಸಿದ ಗತ ವೈಭವ ಕಾರ್ಖಾನೆಯನ್ನ ಮತ್ತೆ ಕಾಣಬಹುದಾಗಿದೆ ಎಂಬುದು ಅಲ್ಲಿಯ ಕಾರ್ಮಿಕರ ಮಾತು.

ಸದ್ಯ ಕಾರ್ಖಾನೆಯಲ್ಲಿ ಹಾಲಿ ಖಾಯಂ ನೌಕರರಾಗಿ 197 ಜನ ಇದ್ದಾರೆ, 1500ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದಾರೆ. ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹೆಚ್.ಡಿ.ಕುಮಾರಸ್ವಾಮಿ ಕಾರ್ಖಾನೆಯ ಕುರಿತು ಏನ್ ಘೋಷಣೆ ಮಾಡಲಿದ್ದಾರೆ ಎಂದು ಜಿಲ್ಲೆಯ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ರಾಜ್ಯದ ವಿವಿಧ ಯೋಜನೆಗಳ ಬಗ್ಗೆ ಚರ್ಚೆ - CM meets PM modi

ABOUT THE AUTHOR

...view details