ETV Bharat / state

ಯುವದಸರಾಗೆ ಇಂದು ಅಶ್ವಿನಿ ಪುನೀತ್ ರಾಜ್‌ಕುಮಾರ್​ ಚಾಲನೆ, ಶ್ರೇಯಾ ಘೋಷಲ್​ ಗಾನಸುಧೆ - Yuva Dasara - YUVA DASARA

ಇಂದಿನಿಂದ ಆರು ದಿನಗಳ ಕಾಲ ಯುವ ದಸರಾ ಕಾರ್ಯಕ್ರಮಗಳು ನಡೆಯಲಿದ್ದು ಖ್ಯಾತ ಗಾಯಕ, ಗಾಯಕಿಯರು ಪ್ರೇಕ್ಷಕರನ್ನು ಸಂಗೀತಲೋಕದಲ್ಲಿ ತೇಲಿಸಲಿದ್ದಾರೆ.

ಯುವದಸರಾಗೆ ಅಶ್ವಿನಿ ಪುನೀತ್ ರಾಜ್ ಕುಮಾರ್​ರಿಂದ​ ಚಾಲನೆ, ಶ್ರೇಯಾ ಘೋಷಲ್​ರಿಂದ ಗಾನಸುಧೆ
ಅಶ್ವಿನಿ ಪುನೀತ್ ರಾಜ್‌ಕುಮಾರ್​, ಶ್ರೇಯಾ ಘೋಷಲ್​ (ETV Bharat)
author img

By ETV Bharat Karnataka Team

Published : Oct 6, 2024, 11:04 AM IST

ಮೈಸೂರು: ದಸರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಒಂದಾದ ಯುವ ದಸರಾಗೆ ಇಂದು ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಲಿದ್ದು, ಖ್ಯಾತ ಗಾಯಕಿ ಗಾಯಕಿ ಶ್ರೇಯಾ ಘೋಷಲ್ ಗಾನಸುಧೆ ಹರಿಸಲಿದ್ದಾರೆ.

ಮೈಸೂರಿನ ಹೊರವಲಯದ ಉತ್ತನಹಳ್ಳಿ ಬಳಿಯ ತ್ರಿಪುರಸುಂದರಿ ಜ್ವಾಲಾಮುಖಿ ದೇವಸ್ಥಾನದ ಸಮೀಪದ ಮೈದಾನದಲ್ಲಿ ಆರು ದಿನಗಳ ಯುವ ದಸರಾ, ಯುವಜನತೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡಲಿದೆ.

ಅ.6ರಂದು ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ತಂಡದಿಂದ 'ಬಾಲಿವುಡ್ ನೈಟ್ಸ್' ನಡೆಯಲಿದೆ.

ಅ.7ರಂದು ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ತಂಡದಿಂದ ರಸಸಂಜೆ ಹಾಗೂ ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮವಿದೆ.

ಅ.8ರಂದು ಖ್ಯಾತ ರಾಪರ್ ಬಾದ್ ಷಾ ಹಾಗೂ ತಂಡದವರು ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಡುವರು.

ಅ.9ರಂದು ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಹಾಗೂ ತಂಡದಿಂದ ಸಂಗೀತ ರಸಸಂಜೆ ನಡೆಯಲಿದೆ.

ಅ.10ರಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಮಹಿಳೆಯರಿಗೆ ಹೆಚ್ಚಿನ ಭದ್ರತೆ: ಮಹಿಳೆಯರಿಗೆ ಭದ್ರತೆ ಕಡಿಮೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ಭದ್ರತೆಗೆ 1,239 ಪೊಲೀಸ್ ಸಿಬ್ಬಂದಿ: ಕಾರ್ಯಕ್ರಮದ ಭದ್ರತೆಗೆ 4 ಎಸ್ಪಿ, 12 ಡಿಎಸ್‌ಪಿ, 37 ಸಿಪಿಐ, 76 ಎಎಸ್‌ಐ, 600 ಹೆಚ್‌ಸಿ, ಪಿಸಿ, 100 ಮಹಿಳಾ ಪೊಲೀಸರು, 300 ಹೋಂ ಗಾರ್ಡ್‌ಗಳು ಸೇರಿದಂತೆ ಒಟ್ಟು 1239 ಸಿಬ್ಬಂದಿ ನಿಯೋಜಿಸಲಾಗಿದೆ. ಜೊತೆಗೆ 6 ಕೆಎಸ್‌ಆರ್‌ಪಿ, 10 ಡಿಎಆರ್, 10 ಎಎಸ್‌ಸಿ ತಂಡ, 4 ಕ್ಯೂಆರ್‌ಟಿ, 2 ಆಂಬ್ಯುಲೆನ್ಸ್, 2 ಅಗ್ನಿಶಾಮಕ ವಾಹನ, 1 ಮೊಬೈಲ್​ ಕಮಾಂಡಿಂಗ್ ವಾಹನ ಬಳಸಲಾಗುತ್ತಿದೆ.

ಸಂಚಾರ ದಟ್ಟಣೆ ನಿರ್ವಹಣೆಗೆ 2 ಪಿಐ, 6 ಪಿಎಸ್‌ಐ, 10 ಎಎಸ್‌ಐ, 50 ಹೆಚ್‌ಸಿ, ಪಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಮಾರ್ಗದಲ್ಲಿ ಹೆಚ್ಚುವರಿ ಸಿಸಿಟಿವಿ ಅಳವಡಿಸಲಾಗಿದೆ. ಮೂರು ಪ್ಯಾಟ್ರೋಲಿಂಗ್ ತಂಡ ಗಸ್ತು ತಿರುಗಲಿದೆ. 10 ವಾಚ್ ಟವರ್ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲು 5-6 ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. 3 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 3 ಸಾವಿರ ವಾಹನಗಳನ್ನು ನಿಲ್ಲಿಸಬಹುದು.

ಮಹಿಳೆಯರಿಗೆ ಪ್ರತ್ಯೇಕ ಎನ್‌ಕ್ಲೋಸರ್: ಮಹಿಳೆಯರ ಭದ್ರತೆ ದೃಷ್ಟಿಯಿಂದ ಪ್ರತ್ಯೇಕ ಎನ್‌ಕ್ಲೋಸರ್ ನಿರ್ಮಿಸಲಾಗಿದೆ. ಪುರುಷರಿಲ್ಲದೆ ಗುಂಪು ಗುಂಪಾಗಿ ಬರುವ ಮಹಿಳೆಯರು, ಈ ಪ್ರತ್ಯೇಕ ಎನ್‌ಕ್ಲೋಸರ್‌ನಲ್ಲಿ ಕುಳಿತು ಯುವ ದಸರಾ ವೀಕ್ಷಿಸಬಹುದು. ಇದಕ್ಕಾಗಿ 5 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ ಬರುವ ಗಣ್ಯರು, ವಿವಿಐಪಿಗಳು, ಸಾರ್ವಜನಿಕರ ಭದ್ರತೆಗೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

90 ಸಾವಿರದಿಂದ 1ಲಕ್ಷ ಜನ ಕಾರ್ಯಕ್ರಮ ವೀಕ್ಷಿಸಬಹುದಾಗಿದ್ದು, ಕೇವಲ 5 ಸಾವಿರ ಟಿಕೆಟ್​ ಮಾರಾಟ ಮಾಡಲಾಗುತ್ತದೆ. ಉಳಿದಂತೆ, 90 ಸಾವಿರ ಜನ ಯಾವುದೇ ಟಿಕೆಟ್​ ಇಲ್ಲದೆ ಕಾರ್ಯಕ್ರಮ ವೀಕ್ಷಿಸಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಹಾಗೂ ಗ್ರಾಮಾಂತರ ಬಸ್​ ನಿಲ್ದಾಣದಿಂದ 200-250 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಯುವ ದಸರಾದಲ್ಲಿ 50-70 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಟಿಕೆಟ್ ಹೊರತುಪಡಿಸಿ ಯಾವುದೇ ವಿಐಪಿ, ವಿವಿಐಪಿ ಪಾಸ್ ಇರುವುದಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳ, ರಿಂಗ್ ರಸ್ತೆಯಲ್ಲಿ ನಗರದಲ್ಲಿ ಮಾಡಿರುವಂತೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.

ಇದೇ ಮೊದಲ ಬಾರಿಗೆ ಜಾಗ ಬದಲು: ಪ್ರತೀ ವರ್ಷ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ನಡೆಯುತ್ತಿತ್ತು. ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಈ ಬಾರಿ ಮೈಸೂರು ಹೊರವಲಯದ ಉತ್ತನಹಳ್ಳಿ ಬಳಿ ಆಯೋಜಿಸಲಾಗಿದೆ.

ಇದನ್ನೂ ಓದಿ: ಇಂದಿನಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಕರ್ಷಕ ಡ್ರೋನ್ ಶೋ - Mysuru Dasara Drone Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.