ಕರ್ನಾಟಕ

karnataka

ETV Bharat / state

ಸ್ನೇಹಿತನಿಗೆ ಕೊಡಿಸಿದ್ದ ಸಾಲ ತೀರಿಸಲಾಗದೆ ಮನನೊಂದು ವ್ಯಕ್ತಿ ಆತ್ಮಹತ್ಯೆ - A MAN DIED

ಸೆಲ್ಫಿ ವಿಡಿಯೋದಲ್ಲಿ ಸ್ನೇಹಿತನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಿದ್ದೇಶ್​ ಆರೋಪಿಸಿದ್ದಾರೆ.

Deceased Person Siddesh
ಮೃತ ವ್ಯಕ್ತಿ ಸಿದ್ದೇಶ್​ (ETV Bharat)

By ETV Bharat Karnataka Team

Published : Feb 2, 2025, 10:09 PM IST

ಮೈಸೂರು: ಸಾಲ ತೀರಿಸಲಾಗದೆ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲ್ಲೂಕಿನ ದಂಡಿಕೆರೆ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಮಲ್ಲೂಪುರ ಗ್ರಾಮದ ಸಿದ್ದೇಶ್ (40) ಮೃತ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಸಿದ್ದೇಶ್​, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ''ಪತ್ನಿ, ಮಕ್ಕಳು, ತಂದೆ, ತಾಯಿ ಸಹೋದರನಿಗೆ ಕ್ಷಮೆಯಾಚಿಸಿದ್ದಾರೆ. ತನ್ನ ಹೆಸರಿನಲ್ಲಿ ಸ್ನೇಹಿತನಿಗೆ ಬ್ಯಾಂಕ್ ಸಾಲ ನೀಡಿದ್ದೇನೆ. ಸ್ನೇಹಿತ ಮಣಿಕಂಠ ಎಂಬಾತನಿಗೆ ಖಾಸಗಿ ಬ್ಯಾಂಕ್​ನಲ್ಲಿ ಕಾರು ಕೊಳ್ಳಲು ಸಾಲ ಕೊಡಿಸಿದ್ದೆ. ಜೊತೆಗೆ ತಮ್ಮ ಹೆಸರಿನಲ್ಲಿ ಎರಡು ಲಕ್ಷ ರೂ. ಕೈಸಾಲವನ್ನು ಕೂಡ ಕೊಡಿಸಿದ್ದೆ. ಕೇವಲ ಎರಡು ಕಂತು ಕಟ್ಟಿ ಸ್ನೇಹಿತ ಮಣಿಕಂಠ ಸುಮ್ಮನಾಗಿದ್ದ. ನಂತರ ಸಾಲ ತೀರಿಸದ ಕಾರಣ ಖಾಸಗಿ ಬ್ಯಾಂಕ್ ಸಿಬ್ಬಂದಿ ಸಾಲ ಕಟ್ಟುವಂತೆ ದೂರವಾಣಿ ಮೂಲಕ ಕರೆ ಮಾಡಿದ್ದರು. ಸಾಲ ತೀರಿಸದ ಸ್ನೇಹಿತನಿಂದ ಮನನೊಂದು'' ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ವರುಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಆತ್ಮಹತ್ಯೆ ಆರೋಪ ಪ್ರಕರಣ: ತುಂಗಭದ್ರಾ ನದಿಯಲ್ಲಿ ಶವ ಪತ್ತೆ

ABOUT THE AUTHOR

...view details