ಕರ್ನಾಟಕ

karnataka

ETV Bharat / state

ಈದ್ ಉಲ್ ಫಿತರ್ ಸಾಮೂಹಿಕ ಪ್ರಾರ್ಥನೆ: ಚಾಮರಾಜಪೇಟೆ ಸುತ್ತಮುತ್ತ ಸಂಚಾರ ಬದಲಾವಣೆ - Traffic Restrictions - TRAFFIC RESTRICTIONS

ನಾಳೆ ಈದ್ ಉಲ್ ಫಿತರ್ ಸಾಮೂಹಿಕ ಪ್ರಾರ್ಥನೆ ನಡೆಯುವ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದ ಸುತ್ತಮುತ್ತ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.

traffic-restrictions-around-chamarajpet-due-to-mass-prayer-in-bengaluru
ಈದ್ ಉಲ್ ಫಿತರ್ ಸಾಮೂಹಿಕ ಪ್ರಾರ್ಥನೆ: ಚಾಮರಾಜಪೇಟೆ ಸುತ್ತಮುತ್ತ ಸಂಚಾರ ಬದಲಾವಣೆ

By ETV Bharat Karnataka Team

Published : Apr 10, 2024, 10:58 PM IST

ಬೆಂಗಳೂರು: ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುವ ಚಾಮರಾಜಪೇಟೆಯ ಈದ್ಗಾ ಮೈದಾನದ ಸುತ್ತಮುತ್ತ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ನಾಳೆ ಈದ್ಗಾ ಮೈದಾನದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಗುರುವಾರ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12ರ ವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸಿಟಿ ಮಾರುಕಟ್ಟೆ ಮೇಲ್ಸೇತುವೆಯಿಂದ (ಬಿಜಿಎಸ್‌ ಮೇಲ್ಸೇತುವೆ) ಟೋಲ್‌ ಗೇಟ್‌ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲ ಮಾದರಿ ವಾಹನ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಈ ಮಾರ್ಗದಲ್ಲಿ ಸಂಚಾರ ಮಾಡಿ: ಟೌನ್​ಹಾಲ್ ಕಡೆಯಿಂದ ಮೈಸೂರು ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು, ಬಿ.ಜಿ.ಎಸ್ ಮೇಲ್ಸೇತುವೆ ಕೆಳಗಡೆ ಬಂದು ಸಿರ್ಸಿ ಸರ್ಕಲ್ ಹತ್ತಿರ ಬಲ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್, ಹುಣಸೆಮರ ಜಂಕ್ಷನ್ ಎಡ ತಿರುವು, ಎಂ.ಸಿ.ಸರ್ಕಲ್, ವಿರೇಶ್ ಚಿತ್ರಮಂದಿರ ಎಡ ತಿರುವು, ಹೊಸಹಳ್ಳಿ ಸಿಗ್ನಲ್ ಬಲ ತಿರುವು ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ಕಿಂಕೋ ಜಂಕ್ಷನ್ ಹತ್ತಿರ ಮೈಸೂರು ರಸ್ತೆ ತಲುಪುಬಹುದು.

ಕೆಂಗೇರಿ ಕಡೆಯಿಂದ ಮಾರ್ಕೆಟ್ ಕಡೆಗೆ ಬರುವ ವಾಹನಗಳು ಕಿಂಕೋ ಜಂಕ್ಷನ್ ಹತ್ತಿರ ಎಡವ ತಿರುವ ಪಡೆದು ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ಹತ್ತಿಗುಪ್ಪೆ, ಎಂ.ಸಿ ಸರ್ಕಲ್ ಬಲ ತಿರುವು, ಮಾಗಡಿ ರಸ್ತೆಯ ಮೂಲಕ ಹುಣಸೆಮರ ಜಂಕ್ಷನ್ ಹತ್ತಿರ ಬಲ ತಿರುವು, ಬಿನ್ನಿಮಿಲ್ ಜಂಕ್ಷನ್, ಸಿಸಿ ವೃತ್ತದ ಬಳಿ ಎಡ ತಿರುವು ಪಡೆದು ಮಾರ್ಕೆಟ್‌ಗೆ ತಲುಪಲು ಅವಕಾಶ ಕಲ್ಪಿಸಲಾಗಿದೆ. ಮಾರ್ಗಸೂಚಿ ಅನ್ವಯ ಸಂಚಾರ ಮಾಡಿವಂತೆ ಸಂಚಾರ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯಲ್ಲಿ ಇಂದು ರಂಜಾನ್​ ಆಚರಣೆ: ಸರ್ಕಾರಿ ರಜೆ ಘೋಷಣೆ - Ramadan celebration

ABOUT THE AUTHOR

...view details