ಕರ್ನಾಟಕ

karnataka

ETV Bharat / state

ಸಂಚಾರ ನಿಮಯ ಉಲ್ಲಂಘಿಸಿದವರಿಗೆ ಶಾಕ್: 50 ಸಾವಿರಕ್ಕೂ ಹೆಚ್ಚು ದಂಡದ ಮೊತ್ತ ದಾಟಿದವರ ಮನೆ ಬಾಗಿಲಿಗೆ ಪೊಲೀಸರು!

ಅನೇಕ ಬಾರಿ ಸಂಚಾರ ನಿಮಯ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಶಾಕ್​ ನೀಡಲಿದ್ದಾರೆ. 50 ಸಾವಿರಕ್ಕಿಂತ ಹೆಚ್ಚು ದಂಡದ ಮೊತ್ತ ದಾಟಿದ ವಾಹನ ಸವಾರರ ಮನೆ ಬಾಗಿಲಿಗೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಲಿದ್ದಾರೆ.

Traffic police  ಸಂಚಾರ ಠಾಣೆ ಪೊಲೀಸ್  ಸಂಚಾರಿ ನಿಯಮ  ಬೆಂಗಳೂರು ನಗರ ಸಂಚಾರ ಪೊಲೀಸ್  ನ್ಯಾಯಾಲಯಕ್ಕೆ ದೋಷಾರೋಪಣೆ
ಪದೇ ಪದೇ ಸಂಚಾರ ನಿಮಯ ಉಲ್ಲಂಘಿಸುವರಿಗೆ ಶಾಕ್: 50 ಸಾವಿರಕ್ಕೂ ದಂಡದ ಮೊತ್ತ ದಾಟಿದವರ ಮನೆ ಬಾಗಿಲಿಗೆ ಪೊಲೀಸರು!

By ETV Bharat Karnataka Team

Published : Feb 9, 2024, 10:24 AM IST

Updated : Feb 9, 2024, 1:21 PM IST

ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಹೇಳಿಕೆ

ಬೆಂಗಳೂರು:ನಿರಂತರವಾಗಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರವಾಗಿರಿ. ಇನ್ಮುಂದೆ ದಂಡ ವಸೂಲಿಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರೇ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಗೆ ಐವತ್ತು ಸಾವಿರಕ್ಕೂ ಅಧಿಕ ದಂಡ ಹೊಂದಿರುವವರ ಮನೆಗೆ ತೆರಳಿ ಹಣ ಪಾವತಿಸಿಕೊಳ್ಳುವ ಕೆಲಸಕ್ಕೆ ಸಂಚಾರಿ ಪೊಲೀಸರು ಚಾಲನೆ ನೀಡಿದ್ದಾರೆ.

ಕಳೆದ ಹತ್ತು ದಿನಗಳಿಂದ ಸಂಚಾರಿ ಪೊಲೀಸರ ಕಾರ್ಯಾಚರಣೆ ಆರಂಭವಾಗಿದ್ದು, ನಗರದಲ್ಲಿ 2,681 ವಾಹನಗಳ ಮೇಲೆ ಐವತ್ತು ಸಾವಿರಕ್ಕೂ ಅಧಿಕ ದಂಡ ಹೊಂದಿರುವುದು ತಿಳಿದು ಬಂದಿದೆ. ಈಗಾಗಲೇ ಅನೇಕ ವಾಹನ ಸವಾರರ ಮನೆಗೆ ಸಂಚಾರಿ ಪೊಲೀಸರು ತೆರಳಿ ದಂಡ ಪಾವತಿಸಿಕೊಳ್ಳಲಾರಂಭಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ವಾಹನಗಳ ಮಾಲೀಕರು ದಂಡ ಪಾವತಿಸದೇ ಇತರರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಅಂಥವರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ ಇದ್ದರೆ ಕಾನೂನಾತ್ಮಕವಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ಆರು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಲ್ಮೆಟ್ ಧರಿಸುವ ಅಗತ್ಯವಿಲ್ಲ. ಆದರೆ, ಶಾಲಾ ಮಕ್ಕಳು ಎಂದು ಎರಡರಿಂದ ಮೂವರನ್ನು ಕೊಂಡೊಯ್ಯುವುದು ಸರಿಯಲ್ಲ. ಸುರಕ್ಷಿತವೂ ಅಲ್ಲ. ಶಾಲಾ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗಲೂ ಸಹ ಒಂದೊಂದು ವಾಹನದಲ್ಲಿ ಕ್ಷಮತೆ ಮೀರಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಪತ್ತೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಟ್ಯಾಂಕರ್​ ಚಾಲಕರ ವಿರುದ್ಧ 595 ಕೇಸ್

ಇತ್ತೀಚಿನ ಪ್ರಕರಣ, ನಿಯಮ ಉಲ್ಲಂಘಿಸಿದ ನೀರಿನ ಟ್ಯಾಂಕರ್​ ಚಾಲಕರ ವಿರುದ್ಧ 595 ಕೇಸ್​:ಸಂಚಾರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ನಿಯಮ ಉಲ್ಲಂಘಿಸುತ್ತಿದ್ದ ನೀರಿನ ಟ್ಯಾಂಕರ್​ಗಳ ಚಾಲಕರ ವಿರುದ್ಧ ಒಟ್ಟು 595 ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಇತ್ತೀಚಿಗೆ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸಂಚಾರಿ ಪೊಲೀಸರು, 252 ಸಮವಸ್ತ್ರ ಧರಿಸದೇ ವಾಹನ ಚಾಲನೆ, 134 ನೋ ಎಂಟ್ರಿಯಲ್ಲಿ ವಾಹನ ಸಂಚಾರ, 40 ಸೀಟ್ ಬೆಲ್ಟ್ ಧರಿಸದಿರುವುದು, 48 ದೋಷಪೂರಿತ ನಂಬರ್ ಪ್ಲೇಟ್, 64 ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ, 13 ಕರ್ಕಶ ಹಾರ್ನ್ ಮಾಡಿರುವುದು, 4 ಫುಟ್ ಪಾತ್ ಮೇಲೆ ಪಾರ್ಕಿಂಗ್, 1 ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ಒಟ್ಟು 595 ಪ್ರಕರಣಗಳನ್ನು ದಾಖಲಿಸಿಕೊಂಡ ಸಂಚಾರ ಠಾಣೆಯ ಪೊಲೀಸರು, ಒಟ್ಟು 3.33 ಲಕ್ಷ ರೂ. ದಂಡ ವಸೂಲಿ ಮಾಡಿದ್ದರು.

ಇದನ್ನೂ ಓದಿ:ಬೆಂಗಳೂರು: ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲ ನಿಲ್ಲಿಸಿದ ವಾಹನಗಳ ಹರಾಜಿಗೆ ಹೈಕೋರ್ಟ್ ಸೂಚನೆ

Last Updated : Feb 9, 2024, 1:21 PM IST

ABOUT THE AUTHOR

...view details