ಶಿರಸಿ (ಉತ್ತರ ಕನ್ನಡ):ಹಜ್ ಯಾತ್ರೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾನ್ನಪ್ಪಿರುವ ದುರ್ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.
ಮುಂಡಗೋಡ ಪಟ್ಟಣದಿಂದ ಕುಟುಂಬಸ್ಥರು ಹಜ್ ಯಾತ್ರೆಗೆ ತೆರಳಿದ್ದರು. ಅವರಲ್ಲಿ ಫಯಾಜ್ ರೋಣ, ಪತ್ನಿ ಅಫ್ರೀನಾ ಬಾನು ಹಾಗೂ ಅವರ ಅಣ್ಣನ ಮಗ ಅಯಾನ್ ರೋಣ ಮೃತ ದುರ್ದೈವಿಗಳು. ಫಯಾಜ್ ರೋಣ ಅವರ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದೆ.