ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಶಾಖೆಯ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬೀಗ ಮುರಿದು ಕೋಟ್ಯಂತರ ಮೌಲ್ಯದ ನಗದು ಕದ್ದೊಯ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮದ ಮಹಮ್ಮದ್ ರಫೀಕ್ (35), ಮಂಜೇಶ್ವರ ತಾಲೂಕು ಉಪ್ಪಳ ಮೊಗ್ರಾಲ್ ಬಿಂಗಿನಾನಿ ನಿವಾಸಿ ಇಬ್ರಾಹಿಂ ಕಲಂದರ್ (41) ಹಾಗೂ ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಗಾಳಿಯಡ್ಕ ನಿವಾಸಿ ದಯಾನಂದ ಎಸ್ (37)ಬಂಧಿತ ಆರೋಪಿಗಳು.
ಘಟನೆಯಲ್ಲಿ ಐವರು ಭಾಗಿಯಾಗಿದ್ದು, ಇನ್ನಿಬ್ಬರಿಗಾಗಿ ಪೊಲೀಸರ ಶೋಧಕಾರ್ಯ ಮುಂದುವರೆದಿದೆ. ಬಂಧಿತ ಆರೋಪಿಗಳನ್ನು ಸ್ಥಳ ಮಹಜರಿಗಾಗಿ ಪೊಲೀಸರು ಸೋಮವಾರ ಅಡ್ಯನಡ್ಕಕ್ಕೆ ಕರೆದುಕೊಂಡು ಬಂದಿದ್ದರು. ಫೆ. 7ರಂದು ಕಳ್ಳತನ ನಡೆದಿದ್ದು, ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಫೆ.28ರಂದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಲಾಗಿದೆ. ತನಿಖೆ ಬಳಿಕ ಮಾ.10ರಂದು ಪೊಲೀಸರು ಆರೋಪಿಗಳ ಬಂಧನ ಖಚಿತಪಡಿಸಿದ್ದಾರೆ.