ಕರ್ನಾಟಕ

karnataka

ETV Bharat / state

ಭಜನೆ ಮಾಡುವಾಗ ಮಹಿಳೆಯ ಚಿನ್ನದ ಸರ ಎಗರಿಸಿದ ಖದೀಮ: ಭಕ್ತರ ಮೊಬೈಲ್​ನಲ್ಲಿ ವಿಡಿಯೋ ಸೆರೆ - GOLD CHAIN THEFT

ಬೆಂಗಳೂರಿನಲ್ಲಿ ದೇವರ ಭಜನೆ ಮಾಡುವಾಗ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕದ್ದ ಕುರಿತು ಪ್ರಕರಣ ದಾಖಲಾಗಿದೆ.

GOLD CHAIN THEFT
ಭಜನೆ ಮಾಡುವಾಗ ಮಹಿಳೆಯ ಚಿನ್ನದ ಸರ ಎಗರಿಸಿದ ಖದೀಮ (ETV Bharat)

By ETV Bharat Karnataka Team

Published : Oct 15, 2024, 10:23 AM IST

Updated : Oct 15, 2024, 12:23 PM IST

ಬೆಂಗಳೂರು:ದೇವರ ಸನ್ನಿದಾನದೊಳಗೆ ಭಜನೆ ಮಾಡುವಾಗ ಕಿಟಕಿ ಪಕ್ಕದಲ್ಲಿ ಕುಳಿತುಕೊಂಡಿದ್ದ ಮಹಿಳೆಯ ಚಿನ್ನದ ಸರ ಕಳ್ಳತನವಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಶಂಕರ ನಗರದ 2ನೇ ಕ್ರಾಸ್​ನ 10ನೇ ಮುಖ್ಯ ರಸ್ತೆಯಲ್ಲಿದ್ದ ಗಣೇಶ ದೇಗುಲದಲ್ಲಿ ಕಳೆದ ಅಕ್ಟೋಬರ್​ನಲ್ಲಿ 11ರಂದು ಸಂಜೆ ನಡೆದಿದೆ. ಸರ ಕಳೆದುಕೊಂಡ ಮಂಗಳಾ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸರಗಳ್ಳತನ ಮಾಡಿದ ವಿಡಿಯೋ ಭಕ್ತರೊಬ್ಬರ ಮೊಬೈಲ್​ನಲ್ಲಿ ಸೆರೆ ಕೂಡ ಆಗಿದೆ‌.

ಭಕ್ತರ ಮೊಬೈಲ್​ನಲ್ಲಿ ಸೆರೆಯಾದ ವಿಡಿಯೋ (ETV Bharat)

ಶಂಕರನಗರದ ನಿವಾಸಿಯಾಗಿರುವ ಮಂಗಳಾ ಪತಿ ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಎಂದಿನಂತೆ ಅ.11ರ ಸಂಜೆ 6.30ರ ಸುಮಾರಿಗೆ ದೇಗುಲಕ್ಕೆ ಮಂಗಳಾ ಅವರು ಬಂದಿದ್ದರು. ಎಲ್ಲರೊಂದಿಗೆ ಸೇರಿ ಕಿಟಕಿ‌ ಪಕ್ಕದಲ್ಲಿ ಚೇರ್​ನಲ್ಲಿ ಕುಳಿತು ಭಜನೆ ಪಠಿಸುತ್ತಿದ್ದರು. ಈ ವೇಳೆ ಖದೀಮನೋರ್ವ ಹೊರಗಿನ ಕಿಟಕಿಯಿಂದ ಕೈ ಹಾಕಿ ಮಂಗಳಾ ಕುತ್ತಿಗೆಯಲ್ಲಿದ್ದ ಸರ ಕಸಿದಿದ್ದಾರೆ. ಬಿಗಿಯಾಗಿ ಹಿಡಿದುಕೊಂಡಿದ್ದ ಪರಿಣಾಮ 70 ಗ್ರಾಂ ಸರ ತುಂಡಾಗಿ 30 ಗ್ರಾಂ ಸರ ಖದೀಮನ ಪಾಲಾಗಿದೆ. ಭಕ್ತರೊಬ್ಬರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಕಳ್ಳತನ ಆಗಿದೆ ಎಂದು ಸುಳ್ಳು ಕಥೆ ಕಟ್ಟಿ ಪೋಲಿಸರ ಅತಿಥಿಯಾದ ಯುವತಿ!

Last Updated : Oct 15, 2024, 12:23 PM IST

ABOUT THE AUTHOR

...view details