ಮೈಸೂರು: ಕರ್ಕಶವಾಗಿ ಶಬ್ಧ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ದ್ವಿಚಕ್ರ ವಾಹನಗಳ ಸೈಲೆನ್ಸರ್ಗಳನ್ನು ಕಿತ್ತು, ಪೊಲೀಸರು ಇಂದು ಸಿದ್ಧಾರ್ಥ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, "ಮೈಸೂರು ನಗರ ಸಂಚಾರಿ ವಿಭಾಗದ ವತಿಯಿಂದ ಆಗಸ್ಟ್ 31 ರಿಂದ ದಿನಾಂಕ ಸೆ. 2ರ ವರೆಗೆ ಮೂರು ದಿನಗಳ ಕಾಲ ಮೈಸೂರು ನಗರದಲ್ಲಿ ದೋಷಪೂರಿತ ಸೈಲೆನ್ಸರ್ಗಳನ್ನು ಆಳವಡಿಸಿಕೊಂಡು ಕರ್ಕಸ ಶಬ್ಧ ಮಾಡುವ ದ್ವಿಚಕ್ರ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ 217 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಅವುಗಳ ಸೈಲೆನ್ಸರ್ಗಳ ಮೇಲೆ ರೋಡ್ ರೋಲರ್ ಹತ್ತಿಸಿ ನಾಶಪಡಿಸಲಾಯಿತು. ಇದರ ಜತೆಗೆ ದೋಷಪೂರಿತ ನಂಬರ್ ಪ್ಲೇಟ್ ಬಳಸುವವರ ವಿರುದ್ಧ 3100 ಕೇಸ್ಗಳು ಹಾಕಿ, ಒಂದೇ ದಿನ 92 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ. ವ್ಹೀಲಿಂಗ್ ಮಾಡುವವರ ವಿರುದ್ಧ ಒಂದೇ ವರ್ಷದಲ್ಲಿ 50 ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ತಿಳಿಸಿದರು.