ಕರ್ನಾಟಕ

karnataka

ETV Bharat / state

ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೇವೆ - TRAIN FOR RRB EXAM

ಆರ್​ಆರ್​​​ಬಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯಿಂದ ಕಾಯ್ದಿರಿಸದ ವಿಶೇಷ ರೈಲುಗಳ ಸೇವೆ ಒದಗಿಸಲಾಗುತ್ತಿದೆ.

Special train
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Nov 21, 2024, 4:36 PM IST

ಹುಬ್ಬಳ್ಳಿ: ರೈಲ್ವೆ ನೇಮಕಾತಿ ಮಂಡಳಿ (ಆರ್​ಆರ್​​​ಬಿ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲಕ್ಕಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಮತ್ತು ಕರ್ನೂಲ್ ಸಿಟಿ ನಿಲ್ದಾಣಗಳ ನಡುವೆ 4 ಟ್ರಿಪ್ ವಿಶೇಷ ಕಾಯ್ದಿರಿಸದ ರೈಲು ಸೇವೆ ಒದಗಿಸಲು ರೈಲ್ವೆ ಮಂಡಳಿ ಸೂಚಿಸಿದೆ.

ಹುಬ್ಬಳ್ಳಿಯಿಂದ ಕರ್ನೂಲ್:ರೈಲು ಸಂಖ್ಯೆ 07315 ಎಸ್ಎಸ್ಎಸ್ ಹುಬ್ಬಳ್ಳಿ-ಕರ್ನೂಲ್ ಸಿಟಿ ಕಾಯ್ದಿರಿಸದ ವಿಶೇಷ ಎಕ್ಸ್​​ಪ್ರೆಸ್ ರೈಲು ನವೆಂಬರ್ 24, 25, 26 ಮತ್ತು 27ರಂದು ರಾತ್ರಿ 8:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಮರುದಿನ ಬೆಳಗ್ಗೆ 6:00 ಗಂಟೆಗೆ ಕರ್ನೂಲ್ ಸಿಟಿ ನಿಲ್ದಾಣವನ್ನು ತಲುಪಲಿದೆ.

ಕರ್ನೂಲ್​ನಿಂದ ಹುಬ್ಬಳ್ಳಿ:ರೈಲು ಸಂಖ್ಯೆ 07316 ಕರ್ನೂಲ್ ಸಿಟಿ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್​ಪ್ರೆಸ್ ರೈಲು ನವೆಂಬರ್ 25, 26, 27 ಮತ್ತು 28ರಂದು ಬೆಳಗ್ಗೆ 07:30 ಗಂಟೆಗೆ ಕರ್ನೂಲ್ ಸಿಟಿ ನಿಲ್ದಾಣದಿಂದ ಹೊರಟು, ಅದೇ ದಿನ ಸಂಜೆ 4:15 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲುಗಳು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಗುಂತಕಲ್ ಮತ್ತು ಡೋನ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ. ರೈಲು ಸಾಮಾನ್ಯ ದ್ವಿತೀಯ ದರ್ಜೆ (8) ಮತ್ತು ವಿಕಲಾಂಗರ ಬೋಗಿಗಳೊಂದಿಗೆ ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ (2) ಸೇರಿದಂತೆ 10 ಬೋಗಿಗಳನ್ನು ಹೊಂದಿರಲಿದೆ.

ಇದನ್ನೂ ಓದಿ:ಅಪಘಾತದಲ್ಲಿ ಮಡಿದ ಮಗನ ನೆನಪಿಗೆ ಗೋಶಾಲೆ ತೆರೆದ ದಂಪತಿ: ಅನಾಥ, ಗಾಯಗೊಂಡ ಹಸುಗಳ ಆರೈಕೆ

''ಪ್ರಯಾಣಿಕರು ಅಧಿಕೃತ ಭಾರತೀಯ ರೈಲ್ವೆ ವೆಬ್​ಸೈಟ್​ಗೆ (www.enquiry.indianrail.gov.in) ಭೇಟಿ ನೀಡುವ ಮೂಲಕ, NTES ಅಪ್ಲಿಕೇಶನ್ ಬಳಸಿ ಅಥವಾ 139ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಬಹುದು'' ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಸ್ವದೇಶಿ ನಿರ್ಮಿತ ಜಲ್ ದೋಸ್ತ್ ಪರಿಚಯ: ಏನಿದು ಜಲ್​ ದೋಸ್ತ್​​?

ABOUT THE AUTHOR

...view details