ಹುಬ್ಬಳ್ಳಿ:ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ಭುವನೇಶ್ವರ-ಬೆಳಗಾವಿ ನಿಲ್ದಾಣಗಳ ನಡುವೆ ಸಾಪ್ತಾಹಿಕ ವಿಶೇಷ (ರೈಲು ಸಂಖ್ಯೆ 02813/02814) ರೈಲುಗಳನ್ನು ಓಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕರಣೆ ತಿಳಿಸಿದೆ.
ರೈಲು ಸಂಖ್ಯೆ 02813: ಸೆಪ್ಟೆಂಬರ್ 7, 14, 21 ಮತ್ತು 28 ರಂದು ಪ್ರತಿ ಶನಿವಾರ ಭುವನೇಶ್ವರದಿಂದ ಸಾಯಂಕಾಲ 07:15 ಗಂಟೆಗೆ ಹೊರಟು, ಸೋಮವಾರ ಬೆಳಗಿನ ಜಾವ 03:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.
(ಹಿಂದಿರುಗುವ ದಿಕ್ಕಿನಲ್ಲಿ) ರೈಲು ಸಂಖ್ಯೆ 02814: ಸೆಪ್ಟೆಂಬರ್ 9, 16, 23 ಮತ್ತು 30ರಂದು ಪ್ರತಿ ಸೋಮವಾರ ಬೆಳಗಾವಿಯಿಂದ ಬೆಳಗ್ಗೆ 07:30 ಗಂಟೆಗೆ ಹೊರಟು, ಮಂಗಳವಾರ ಮಧ್ಯಾಹ್ನ 02:30 ಗಂಟೆಗೆ ಭುವನೇಶ್ವರ ತಲುಪಲಿದೆ.
ಈ ರೈಲುಗಳಿಗೆ ಖುರ್ದಾ ರೋಡ್, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ ರೋಡ, ವಿಜಯನಗರಂ, ಪೆಂಡುರ್ತಿ, ದುವ್ವಾಡ, ರಾಜಮಂಡ್ರಿ, ಎಲೂರು, ವಿಜಯವಾಡ, ಗುಂಟೂರು, ನಂದ್ಯಾಳ, ಧೋನೆ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಲೋಂಡಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ. ವಿಶೇಷ ರೈಲು ಹದಿನಾರು ಎಸಿ-3 ಟೈಯರ್ ಬೋಗಿಗಳು ಮತ್ತು ಎರಡು ಬ್ರೇಕ್/ಲಗೇಜ್ ಕಮ್ ಜನರೇಟರ್ ಕಾರುಗಳನ್ನು ಒಳಗೊಂಡಿರುತ್ತದೆ.
ವಂದೇ ಭಾರತ್ ರೈಲುಗಳ ಸಮಯ ಪರಿಷ್ಕರಣೆ: ಮಧುರೈ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ವಾರಕ್ಕೆ ಆರು ದಿನ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಕೃಷ್ಣರಾಜಪುರಂ ನಿಲ್ದಾಣದಲ್ಲಿ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.