ಕರ್ನಾಟಕ

karnataka

ETV Bharat / state

ಆಟೋ - ಬೈಕ್ ನಡುವೆ ಅಪಘಾತ: ಶಾಲಾ ಬಾಲಕ ಸಾವು, ಇಬ್ಬರಿಗೆ ತೀವ್ರಗಾಯ - AUTO AND BIKE ACCIDENT

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾಮಗೆರೆಯಲ್ಲಿ ಆಟೋ ಹಾಗೂ ಬೈಕ್ ನಡುವೆ ಅಪಘಾತವಾಗಿ ಶಾಲಾ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನಡೆದಿದೆ.

Holy Cross Hospital
ಹೋಲಿಕ್ರಾಸ್ ಆಸ್ಪತ್ರೆ (ETV Bharat)

By ETV Bharat Karnataka Team

Published : Nov 29, 2024, 3:06 PM IST

Updated : Nov 29, 2024, 3:58 PM IST

ಚಾಮರಾಜನಗರ : ಶಾಲಾ ಮಕ್ಕಳಿದ್ದ ಆಟೋ ಮತ್ತು ಸ್ಕೂಟಿ ನಡುವೆ ರಸ್ತೆ ಅಪಘಾತವಾಗಿ ಶಾಲಾ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಂಗಲ ಗ್ರಾಮದ ಬಾಲಕ ವಿಮಲ್ ರಾಜ್ ಮೃತ ದುರ್ದೈವಿ. ಈ ಬಾಲಕ ಕಾಮಗೆರೆ ಗ್ರಾಮದ ಸೆಂಟ್​ ಕ್ಲೇವಿಯರ್ ಶಾಲೆಯಲ್ಲಿ 5ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

ಆಟೋ - ಬೈಕ್ ನಡುವೆ ಅಪಘಾತ ಸಂಭವಿಸಿ ಶಾಲಾ ಬಾಲಕ ಸಾವು (ETV Bharat)

ಬೈಕ್ ಹಾಗೂ ಆಟೋ ಅಪಘಾತ ನಡೆದು ಆಟೋ ಪಲ್ಟಿಯಾದ ಪರಿಣಾಮ ವಿಮಲ್ ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಬಾಲಕರಿಗೆ ಗಂಭೀರ ಗಾಯವಾಗಿ‌ದ್ದರಿಂದ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆಟೋ ಪಲ್ಟಿಯಾಗಿ ಶಾಲಾ ಬಾಲಕ ಸಾವನ್ನಪ್ಪಿದ್ದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂಭಾಗ ಪೋಷಕರ ಆಕ್ರಂದನ
ಮುಗಿಲು ಮುಟ್ಟಿತ್ತು.‌ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಅತೀ ವೇಗವಾಗಿ ಬಂದ ಕಾರು ಡಿಕ್ಕಿ: ಸ್ಥಳದಲ್ಲೇ ಐವರು ಮಹಿಳೆಯರು ಸಾವು

Last Updated : Nov 29, 2024, 3:58 PM IST

ABOUT THE AUTHOR

...view details